Bagalkote News | ಉದ್ಯೋಗಂ ಮಾನವ ಲಕ್ಷಣಂ : ಆರ್ಥಿಕ ಸಭಲತೆಗೆ ಉದ್ಯೊಗವೇ ಮುಖ್ಯ ಆಯುಧ : ಕೆ.ಎಂ. ಜಾನಕಿ

Job fair image

ಬಾಗಲಕೋಟೆ: ಉದ್ಯೋಗಂ ಪುರಷ ಲಕ್ಷಣಂ ಇದ್ದ ನಾಣ್ನುಡಿ ಇಂದು ಉದ್ಯೋಗಂ ಮಾನವ ಲಕ್ಷಣಂ ಆಗಿದ್ದು, Job fair ಆರ್ಥಿಕ ಸಭಲತೆಗೆ ಉದ್ಯೋಗವೇ ಮುಖ್ಯ ಆಯುಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.

ಅವರು ಬಿ.ವಿ.ವಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೊಟೆ, ಐಕ್ಯೂಎಸಿ ಘಟಕ, ಪ್ಲೇಸ್ಮೆಂಟ್ ಶೇಲ್ ಹಾಗೂ ಸಮರ್ಥನಂ ಅಂಗವಿಕಲ ಸಂಸ್ಥೆ ಬೆಳಗಾವಿ, ಜಿಲ್ಲಾ ಉದ್ಯೋಗ ವಿನಿಮಯ ಘಟಕದ ಸಹಯೋಗದಲ್ಲಿ ಶುಕ್ರವಾರ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾ ಭವನದಲ್ಲಿ ನಡೆದ ಉದ್ಯೋಗಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Vijayapura News | ಲಯನ್ಸ್ ವೇದಿಕೆಯಿಂದ ಹಿರಿಯ ನಾಗರಿಕರಿಗೆ ಸನ್ಮಾನ

Job fair ವಿದ್ಯೆಗೆ ತಕ್ಕ ಉದ್ಯೋಗ ಬಹು ಮುಖ್ಯವಾಗಿದ್ದು, ವಿದ್ಯ ಜ್ಞಾನದ ಅರಿವು ನೀಡುತ್ತದೆ, ಜೋತೆಗೆ ಒಂದು ಉದ್ಯೋಗ ಸಿಕ್ಕರೆ ಮನುಷ್ಯನ ಬದುಕು ಪರಿಪೂರ್ಣತೆ ಕಡೆ ಸಾಗುತ್ತದೆ, ಆ ನಿಟ್ಟಿನಲ್ಲಿ ಈ ಉದ್ಯೋಗಮೇಳ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಉದ್ಯೋಗಂ ಮಾನವ ಲಕ್ಷಣಂ ಆಗಿದೆ, ಉದ್ಯೋಗದಿಂದ ಮನುಷ್ಯನ ಗೌರವ ಹೆಚ್ಚುತ್ತದೆ, ಬಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿ, ಉದ್ಯೋಗದಾತರಿಗೂ ಒಳ್ಳೆದಾಗಲಿ.

ಇಲ್ಲಿ ವೀಶೇಷಚೇತನರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದು ಧನಾತ್ಮಕ ಹೆಜ್ಜೆಯಾಗಿದೆ. ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಸಮರ್ಥನಂ ಸಂಸ್ಥೆ ಒಳ್ಳೆಯ ಸದಾವಕಾಶವನ್ನು ನಿರ್ಮಿಸಿರುವುದು ಶ್ಲಾಘನೀಯವಾಗಿದೆ. ವಿಶೇಷ ಚೇತನರಲ್ಲಿ ಇಚ್ಚಾಶಕ್ತಿ ಮತ್ತು ಒಳಗೊಳ್ಳುವಿಕೆ ತುಂಬಾನೆ ಇರುವುದರಿಂದ ಅವರನ್ನು ನಾವೆಲ್ಲರು ಮುಕ್ತ ಮನಸ್ಸಿನಿಂದ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು.

ಇದನ್ನೂ ಓದಿ: Bagalkote News | ಜೀವನದ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ್ದು ಮಹರ್ಷಿ ವಾಲ್ಮೀಕಿ : ಡಾ.ವೀರಣ್ಣ ಚರಂತಿಮಠ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿದ್ದ ಮಾಜಿ ಶಾಸಕರು ಹಾಗೂ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ ವಿಶೇಷಚೇತರು ಬಹಳ ಪ್ರತಿಭಾವಂತರಾಗಿರುತ್ತಾರೆ. ಈ ಉದ್ಯೋಗಮೇಳದಲ್ಲಿ 200ಕ್ಕೂ ಹೆಚ್ಚು ವಿಶೇಷಚೇತನರು 300ಕ್ಕೂ ಹೆಚ್ಚು ಇತರರು ಭಾಗವಹಿಸಿರುವುದು ಹೆಮ್ಮೆ ವಿಷಯವಾಗಿದೆ. ಯಾವುದೆ ಉದ್ಯೋಗ ಸಿಕ್ಕರೂ ಅದರಲ್ಲಿ ಕಾರ್ಯನಿರ್ವಹಿಸಿರಿ. ಜೀವನದ ಯಶಸ್ವಿಗೆ ನಾವು ನಮಗೆ ಸಿಕ್ಕ ಮೊದಲ ಉದ್ಯೋಗದಲ್ಲಿ ಮುಂದುವರೆಯಬೇಕು. ಅದರಿಂದ ಬೇಳವಣಿಗೆಯನ್ನು ಕಾಣಬಹುದಾಗಿದೆ. ಮೊದಲಿನಿಂದಲೂ ನಮ್ಮ ಸಂಘದ ಶಿಶುವಿಹಾರದಲ್ಲಿ ವಿಶೇಷಚೇತನರಿಗಾಗಿ ಶಾಲೆಯನ್ನು ತೆರೆಯಲಾಗಿದೆ. ಅವರಿಗೆ ನಮ್ಮ ಸಹಕಾರ ಇರುತ್ತದೆ ಎಂದರು.

ವೇದಿಕೆ ಮೇಲೆ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಅರುಣಕುಮಾರ ಎಂ.ಜಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮುಗನೂರಮಠ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು.ರಾಠೋಡ, ಎಸ್.ವಿ,ಕಟ್ಟಿ ಸೇರಿದಂತೆ ಅನೇಕರು ಇದ್ದರು.ಕಾರ್ಯಕ್ರಮದಲ್ಲಿ ಶ್ರೇಯಾ ಜೋರಾಪುರ ಪ್ರಾರ್ಥಿಸಿದರು, ಎಸ್. ಡಿ. ಕೆಂಗಲಗುತ್ತಿ ಕಾರ್ಯಕ್ರಮ ನಿರೂಪಿಸಿದರು.


Share the Post:

ಇತ್ತೀಚಿನ ಸುದ್ದಿಗಳು