ಬಾಗಲಕೋಟೆ: ರಾಮಾಯಣ ಇದು ದೇಶಿ ಪರಂಪರೆಯ ಭಾರತಿಯರ ಅಸ್ಮೀತೆಯಾಗಿದ್ದು, ಜೀವನ ಮೌಲ್ಯಗಳನ್ನು ರಾಮಯಣದ ಮೂಲಕ ಜಗತ್ತಿಗೆ ತಿಳಿಸಿದ್ದು ಆದಿಕವಿ ಮಹರ್ಷಿ ವಾಲ್ಮೀಕಿಯವರು ಎಂದು ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಶಿವಾನಂದ ಜೀನ್ ನಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ವಿಧಾಸಭಾ ಮತಕ್ಷೇತ್ರದಿಂದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ Maharshi Valmiki ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಇದನ್ನೂ ಓದಿ: Bagalkote News : ಕಬ್ಬು ಬೆಳೆಗಾರರು & ಮುಖಂಡರೊಂದಿಗೆ ಸಭೆ: ರೈತರ ಬಾಕಿ ಪಾವತಿಗಾಗಿ ಡಿಸಿ ಜಾನಕಿ ಗುಡುವು
ಸಂಸ್ಕøತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿಯವರಾಗಿದ್ದು, ಅವರ ತವರು ಮನೆಯಾದ ಈ ನೆಲದಲ್ಲಿ ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ.
ಭಾರತೀಯರ ಜೀವನ ಮೌಲ್ಯಗಳನ್ನು ಮಹಾಕಾವ್ಯ ರಾಮಾಯಣದ ಮೂಲಕ ಜಗತ್ತಿಗೆ ಸಾರಿದ್ದಾರೆ, ಮಹರ್ಷಿ ವಾಲ್ಮೀಕಿಯವರು Maharshi Valmiki ಅವರು ಇಡಿ ಹಿಂದೂ ಸಮಾಜ ಸೇರಿದಂತೆ ಮನುಕುಲಕ್ಕೆ ಗುರುಗಳಾದವರು. ದೇಶದಲ್ಲಿರುವ ಎಲ್ಲ ಮಹರ್ಷಿಗಳಿಗೆ ಋಷಿಮುನಿಗಳಿಗೆ, ಸಾಧಕರಿಗೆ ಜಾತಿಗಳ ಮೂಲಕ ಒಂದು ವರ್ಗಕ್ಕೆ ಸೀಮಿತಮಾಡಬಾರದು, ಎಲ್ಲರೂ ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದವರಿದ್ದಾರೆ, ಅಂಥ ಪುಣ್ಯ ಪುರುಷರಿಂದಾಗಿ ಇಂದು ಹಿಂದೂ ಸಮಾಜ ಗಟ್ಟಿಯಾಗಿದೆ ಎಂದರು.
ಇದನ್ನೂ ಓದಿ: Vijayapura News | ಸಚಿವ ಸಂಪುಟದಲ್ಲಿ ಜಾತಿ ಗಣತಿ ವರದಿ ಜಾರಿಗೊಳಿಸುವಂತೆ ಅಹಿಂದ ಒತ್ತಾಯ
ಕಾರ್ಯಕ್ರಮದಲ್ಲಿ ಬಿಟಿಡಿಎ ಮಾಜಿ ಆದ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂದೆ, ವಾಲ್ಮೀಕಿ ಸಮಾಜದ ಮುಖಂಡರಾದ ಅಯ್ಯಪ್ಪ ವಾಲ್ಮೀಕಿ,ರಾಜು ನಾಯ್ಕರ, ಯಲ್ಲಪ್ಪ ಖ್ಯಾದಿಗೇರಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ,ಉಪಾಧ್ಯಕ್ಷೆ ಶೋಭಾ ರಾವ, ಯಲ್ಲಪ್ಪನಾರಾಯಣಿ, ಶಶಿಕಲಾ ಮಜ್ಜಗಿ, ಶಿವಾನಂದ ಟವಳಿ,ಸತ್ಯನಾರಾಯಣ ಹೆಮಾದ್ರಿ, ರಾಜು ರೇವಣಕರ್, ಯಲ್ಲಪ್ಪ ಬೇಂಡಿಗೇರಿ, ಮುತ್ತಣ್ಣ ಬೇಣ್ಣೂರ.ಶಂಕರ ಗಲಗ, ಗಣೇಶ ಲಗಳಿ, ರವಿ ನಾಯಕ್,ಮಂಜು ಪಾಟೀಲ, ಯಲ್ಲಪ್ಪ ಭಜಂತ್ರಿ, ರಾಜು ಕೋಟಿಕಲ್ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಪಂಕಜ್ ನಿಕ್ಕಮ್ ಸೇರಿದಂತೆ ಅನೇಕರು ಇದ್ದರು.






