ಬಾಗಲಕೋಟೆ: ಮಾನಸಿಕ ಆರೋಗ್ಯ (Mental Health) ಯಾವುದೇ ಒಂದು ಕೆಲಸ ಮಾಡಬೇಕಾದರೆ ಶ್ರದ್ದೆ ಮತ್ತು ಮನಸ್ಸು ಒಟ್ಟಿಗೆ ಕೂಡಿ ಕೆಲಸ ಮಾಡಿದರೆ ಆ ಕೆಲಸದಲ್ಲಿ ಯಶಸ್ಸು ಕಾಣಲು ಸಾದ್ಯವೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.
ವಿದ್ಯಾಗಿರಿಯ ಬವಿವ ಸಂಘದ ಶಾರದಾಂಭೆ ನರ್ಸಿಂಗ್ ಕಾಲೇಜನ ಸಭಾಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಒಂದು ಕೆಲಸವನ್ನು ನಿಷ್ಠೆಯಿಂದ, ಏಕಾಗ್ರಕತೆಯಿಂದ ಮಾಡಿದಾಗ ಮಾತ್ರ ಯಶಸ್ಸು ಕಾಣಬಹುದಾಗಿದೆ ಎಂದರು.
ಇದನ್ನೂ ಓದಿ: Bagalkote News | ಬಾಗಲಕೋಟೆಯಲ್ಲಿ ಇಂಡೋ-ಇಸ್ರೇಲ್ ಸಹಯೋಗದಲ್ಲಿ ಹನಿ ನೀರಾವರಿ ತರಬೇತಿ ಕಾರ್ಯಾಗಾರ
ಮಾನಸಿಕ ಆರೋಗ್ಯ (Mental Health) ಯಾವುದೇ ಒಂದು ಕೆಲಸವನ್ನು ನಿಷ್ಠೆಯಿಂದ ಕೆಲಸ ಮಾಡಬೇಕು. ನಿಷ್ಠೆಯಿಂದ ಕೆಲಸ ಮಾಡಬೇಕಾದರೆ ಮನಸ್ಸು ಏಕಾಗ್ರತೆಯಿಂದ ಇರಬೇಕು. ಏಕಾಗ್ರತೆ ಗುರು ಕಲಿಸಿಕೊಡುತ್ತಾರೆ. ಗುರು ಓಡು ಎಂದರೆ ಓಡಲಿಕ್ಕೆ ಪ್ರಾರಂಭಮಾಡಿ ಓಡುವುದೇ ಅವನ ಕಾಯಕ. ಪ್ರತಿದಿನ ಓಡಾಟ ಮಾಡಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಓಲಂಪಿಕ್ಸ್ ತಂದವರು ಬಾಗ್ ಮಿಲ್ ಕಾ ಬಾಗ್. ಮಾನಸಿಕತೆ ನಮ್ಮ ಕೆಲಸ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಮನಸ್ಥಾಪ ಉಂಟಾದಾಗ ಕೆಲಸ ಮಾಡುವಾಗ ಅದೇ ವಿಷಯ ತಲೆಯಲ್ಲಿರುತ್ತದೆ ಎಂದರು.
ನಮ್ಮ ಎಲ್ಲ ಕಾರ್ಯಗಳ ಯಶಸ್ಸಿಗೆ ಮನಸ್ಸು ಕಾರಣವಾಗುತ್ತದೆ. ಮನಸ್ಸು ಹಿತಿಮಿತಿಯಲ್ಲಿ ಇರದೇ ಹೋದಲ್ಲಿ ತಪ್ಪುಗಳು ಆಗುವುದು ಸಾಧ್ಯ. ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದ್ದಾಗ ಮನಸ್ಸು ಗಟ್ಟಿಯಾಗಿರಬೇಕು. ಸದಾ ಚಿತ್ತರಾಗಿ ಮನಸ್ಸು ಸದೃಡವಾಗಿ ಇಟ್ಟುಕೊಳ್ಳಬೇಕು. ಈ ವರ್ಷ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ ಎಂಬ ಘೋಷವಾಕ್ಯ ನೀಡಲಾಗಿದೆ. ಕೆಲಸ ವೇಳೆಯಲ್ಲಿ ಶ್ರದ್ದೆ ಇಟ್ಟಿ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ: Vijanapura News : ಕನ್ನಡ ಸಾಹಿತ್ಯ ಪರಿಷತ್ತಿಗೆ ಐತಿಹಾಸಿಕ ಹಿನ್ನೆಲೆ: ಜಿಲ್ಲಾಧಿಕಾರಿ T ಭೂಬಾಲನ್
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಎಸ್.ಸಿ.ಪಾಟೀಲ ಮತ್ತು ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿದರು. ಮನೋರೋಗ ತಜ್ಞರಾದ ಡಾ.ರವಿ ಸಿ.ಎ ಮತ್ತು ಡಾ.ಎಸ್.ಎಸ್.ಪಾಟೀಲ ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾರದಾಂಭೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.






