ಸಾವಿನಂಚಿನಲ್ಲಿದ್ದ ಜೀವಕ್ಕೆ ಮರುಜೀವ ನೀಡಿದ ಜೆಎಸ್‍ಎಸ್ ಆಸ್ಪತ್ರೆ

ಆರ್ಗಾನೋ ಪಾಸ್ಪರಸ್ ಕಂಪೌಂಡ್‍ನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು

0
73

ವೈಯಕ್ತಿಕ ಕಾರಣಗಳಿಂದ ವಿಷ ಸೇವನೆ ಮಾಡಿ ಆಸ್ಪತ್ರೆಗೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದಾಖಲಾಗಿದ್ದ ಕಲ್ಲಪ (ಹೆಸರು ಬದಲಿಸಲಾಗಿದೆ) ಎನ್ನುವ ವ್ಯಕ್ತಿಯು ಅದಗಲೇ ಸಾವಿನ ಅಂಚಿನಲ್ಲಿದ್ದ. ವಿಷ ಸೇವಿಸಿದ್ದನ್ನು ಗಮನಿಸಿ ನಗರದ ವಿವಿಧ ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಮನೆಯವರಿಗೆ ಇವರ ಬದುಕಿನ ಕುರಿತು ಯಾವುದೇ ಭರವಸೆ ದೊರೆಯಲಿಲ್ಲ. ವಿಷದ ಪರಿಣಾಮ ಮೆದುಳಿನ ಮೇಲೆ ಆಗಿದ್ದರಿಂದ ಈ ವ್ಯಕ್ತಿ ಬದುಕುಳಿಯುವುದು ಬಹುತೇಕ ಅಸಾಧ್ಯ.

ಒಂದು ವೇಳೆ ಬದುಕುಳಿದರು ಬಹು ಅಂಗಾಗ ವೈಫಲ್ಯಕ್ಕೆ ತುತ್ತಾಗಬಹುದು. ಹೀಗಿದ್ದರೂ ಸುಮ್ಮನೆ ಹಣವನ್ನು ಖರ್ಚು ಮಾಡುತ್ತಿರುವಿರಿ ಸುಮ್ಮನೆ ಮನೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದಾಗ ದಾರಿ ಕಾಣದೇ ಆ ವ್ಯಕ್ತಿಯ ತಂದೆ ಜೆಎಸ್‍ಎಸ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ನಮ್ಮ ಕೈಲಾದ ಪ್ರಯತ್ನವನ್ನು ಮಾಡೋಣ ಎಂದು ಹೇಳಿ ಐಸಿಯುಗೆ ದಾಖಲಿಸಿದ ನಂತರದಲ್ಲಿ ಸರಿ ಸುಮಾರು ಎರಡು ತಿಂಗಳ ಕಾಲ ನಿರಂತರ ಚಿಕಿತ್ಸೆಯನ್ನು ನೀಡಿ ಬದುಕುವುದು ಬಹುತೇಕ ವಿರಳ ಎನ್ನುವ ಪ್ರಕರಣವನ್ನು ಯಶಸ್ವಿ ಚಿಕಿತ್ಸೆ ಮೂಲಕ ರೋಗಿಯನ್ನು ಬದುಕಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ಸಂದರ್ಭ ಹಾಗೂ ನೀಡಿದ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದ ತಜ್ಞ ವೈದ್ಯ ಡಾ.ಶಿವಕುಮಾರ ಕತ್ತಿ; ರೋಗಿಯು ನಮ್ಮ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಅದಾಗಲೇ ನಾಲ್ಕಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದದ್ದರು. ನಾವು ಪರೀಕ್ಷೆ ಮಾಡಿ ನೋಡಿದಾಗ ವಿಷ ಸೇವನೆಯ ಪರಿಣಾಮವಾಗಿ ಆರ್ಗಾನೋ ಪಾಸ್ಪರಸ್ ಕಾಂಪೌಂಡ್ ಪರಿಣಾಮದಿಂದಾಗಿ ಉಸಿರಾಟದ ತೊಂದರೆಗೊಳಗಾಗಿದ್ದರು. ಮತ್ತು ಬಹು ಅಂಗಗಳು ಕಾರ್ಯ ಸ್ಥಗಿತಗೊಳಿಸದ್ದವು. ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಒಂದು ಹಂತದಲ್ಲಿ ನಾವು ಸಹ ಇವರ ಬದುಕಿನ ಬಗ್ಗೆ ಅನುಮಾನ ಪಟ್ಟಿದ್ದೆವು. ಆದರೆ ವೈದ್ಯರಾದವರು ಯಾವತ್ತೂ ಭರವಸೆ ಕಳೆದುಕೊಳ್ಳಬಾರದು ಎನ್ನುವ ನಂಬಿಕೆಯಿಂದ ಟ್ರಾಕೆಸ್ಟಮಿ ಟ್ಯೂಬ್ ಅಳವಡಿಸಿ ವೆಂಟಿಲಿಟರ್ ಸಹಾಯ ಮೂಲಕ ಚಿಕಿತ್ಸೆ ನೀಡುತ್ತ ಬಂದ ಪರಿಣಾಮವಾಗಿ ಆ ವ್ಯಕ್ತಿಯು ಇಂದು ಬದುಕುಳಿದ್ದಾನೆ. ಸ್ವಾಧೀನ ಕಳೆದುಕೊಂಡಿದ್ದ ಕೈಕಾಲುಗಳು ಸಹ ಮರಳಿದ್ದು ತನ್ನಷ್ಟಕ್ಕೆ ತಾನೆ ನಡೆದುಕೊಂಡು ಸಾಗುತ್ತಿದ್ದಾನೆ. ವೈದ್ಯರಾಗಿ ನಾವು ಮಾಡಿದ ಚಿಕಿತ್ಸೆ ಒಂದೆಡೆ ಫಲಕೊಟ್ಟರೆ ಮತ್ತೊಂದೆಡೆ ಪೂಜ್ಯ ಸಿದ್ಧೇಶ್ವರ ಅಪ್ಪಾಜಿ ಅವರ ಕೃಪಾಶಿರ್ವಾದ ಸಹ ಅವರನ್ನು ಬದುಕಿಸಿದೆ ಎಂದು ಹೇಳಿದರು.

ಈ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿ ಸಾವಿನಂಚಿನಲ್ಲಿರುವ ವ್ಯಕ್ತಿ ಗೆ ಜೀವದಾನ ಮಾಡಿದ್ದಾಕ್ಕಾಗಿ ವೈದ್ಯರು ಹಾಗೂ ಸಿಬ್ಬಂಧಿ ವರ್ಗದವರನ್ನು ನಗರ ಶಾಸಕರು ಹಾಗೂ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಬಸನಗೌಡ ರಾ ಪಾಟೀಲ್ ಯತ್ನಾಳ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ ಅಭಿನಂದಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here