ವಿಜಯಪುರ: ನಗರದ ಕನ್ನಡ ಪುಸ್ತಕ ಪರಿಷತ್ತು 2023ನೇ ಸಾಲಿನ “ತೋಂಟದ ಸಿದ್ಧಲಿಂಗಶ್ರೀ ” ಸಮಗ್ರ ಸಾಹಿತ್ಯ ಪ್ರಶಸ್ತಿಗೆ ರಾಜ್ಯದ ಐದು ಜನರನ್ನು ವಿವಿಧ ವಿಭಾಗದಲ್ಲಿ ಗುರುತಿಸಿ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ ಎ0ದು ಪ್ರದಾನ ಕಾರ್ಯದರ್ಶಿ ಶಂಕರ ಬೈಚಬಾಳ ಹಾಗೂ ಕಾರ್ಯದರ್ಶಿ ಸಿದ್ಧರಾಮ ಬಿರಾದಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯ ಟೆನ್ಸಿಸಬಾಲ್ ಕ್ರಿಕೇಟ್ ತಂಡದ ಆಯ್ಕೆ ಟ್ರಯಲ್ಸ
ವಿಜಯಪುರದ ಸಿದ್ಧರಾಮ ಉಪ್ಪಿನ(ಕಾದಂಬರಿ ವಿಭಾಗ) ಸಿಂದಗಿಯ ಪ್ರೋ.ಎ. ಆರ್. ಹೆಗ್ಗಣದೊಡ್ಡಿ (ಶೈಕ್ಷಣಿಕ ಸಾಹಿತ್ಯ) ಬಾಗಲಕೋಟೆಯ ಮಹಾದೇವ ಬಸರಕೋಡ(ಅಂಕಣ ಬರಹ ) ಕಾರವಾರದ ಎ.ಎನ್ .ರಮೇಶ ಗುಬ್ಬಿ(ನಾಟಕ) ಮತ್ತು ಬಬಲೇಶ್ವರದ ಡಾ. ಶಂಕರಗೌಡ ಬಿರಾದಾರ(ವೈದ್ಯಕೀಯ) ಕ್ಷೇತ್ರಗಳಿಗೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: Vijayapura News | ಹಿರಿಯರ ಪೋಷಣೆ ಹಾಗು ಸ್ಮರಣೆ ನಮ್ಮ ಸಂಸ್ಕøತಿಯ ಪ್ರತೀಕ: ಶ್ರೀದೇವಿ ಉತ್ಲಾಸರ.
ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿಯು ತಲಾ 2000 ನಗದು ಸ್ಮರಣಿಕೆ ಪ್ರಮಾಣ ಪತ್ರ ಒಳಗೊಂಡಿರುತ್ತದೆ . ಡಿಸೆಂಬರ್ 1 ರಂದು ನಗರದ ಚೇತನಾ ಕಾಲೇಜು ಆವರಣದಲ್ಲಿ ನಡೆಯುವ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ)ಅವರ ಅಧ್ಯಕ್ಷತೆಯಲ್ಲಿಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






