Vijayapura News | ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಆನ್‍ಲೈನ್ ನೋಂದಣಿಗೆ ಅವಕಾಶ

ವಿಜಯಪುರ: ಮಂಡ್ಯ ನಗರದಲ್ಲಿ ಜರುಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದ ನೋಂದಣಿಯನ್ನು ಆನ್‍ಲೈನ್ ಮೂಲಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಕಲ್ಪಿಸಿದೆ. ನೋಂದಣಿಗೆ  ರೂ. 600/- ನಿಗದಿಪಡಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‍ಸೈಟ್‍ನಲ್ಲಿ ಪರಿಷತ್ತಿನ ಸದಸ್ಯತ್ವ ಪಡೆದಿರುವವರು. ನೋಂದಣಿ ಮಾಡಿಕೊಳ್ಳಲು ಇಂದಿನಿಂದ 15 ದಿನಗಳ ಕಾಲ ಅವಕಾಶ ನೀಡಲಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿದ ನಂತರ ಹಣದ ಪಾವತಿ ಕೂಡ ಆನ್‍ಲೈನ್ ಮೂಲಕ ಮಾಡಬೇಕಿರುತ್ತದೆ.
ನೋಂದಣಿ ಮಾಡಿಕೊಂಡವರಿಗೆ ಆನ್‍ಲೈನ್ ಮೂಲಕ ವಸತಿ ಒದಗಿಸುವ ಸ್ಥಳ, ವಿಳಾಸ ನೋಡಲ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಗೂ ಆನ್‍ಲೈನ್‍ನಲ್ಲಿಯೇ ಫೋಟೋ ಸಹಿತ ಗುರುತಿನ ಚೀಟಿ ಒದಗಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿಗಳು ಡಾ. ಕುಮಾರ ತಿಳಿಸಿರುತ್ತಾರೆ.
ಇದನ್ನೂ ಓದಿ: Vijayapura News | ಜಿಲ್ಲಾಡಳಿತದಿಂದ ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಆಚರಣೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ವಿಜಯಪುರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಜೀವ ಸದಸ್ಯರು, ಕನ್ನಡಾಸಕ್ತರು, ಅಭಿಮಾನಿಗಳು ಸಾರ್ವಜನಿಕ ಕನ್ನಡ ಬಂಧುಗಳು ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡ, ನಾಡು, ನುಡಿ, ಹಿರಿಮೆ, ಗರಿಮೆಯನ್ನು ಹೆಚ್ಚಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ವಿನಂತಿಸಿಕೊಂಡಿದ್ದಾರೆ.
ಮಾಹಿತಿಗಾಗಿ ಹಾಸಿಂಪೀರ ವಾಲಿಕಾ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೊ. 6362739872 ಹಾಗೂ ರಾಜು ಶಿವನಗುತ್ತಿ ಜಿಲ್ಲಾ ದತ್ತಿ ಸಂಚಾಲಕರು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಮೊ. 9448439960 ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ: Vijayapura News | ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕನಕದಾಸರು ದೊಡ್ಡ ಹೆಗ್ಗುರುತು

Share the Post:

ಇತ್ತೀಚಿನ ಸುದ್ದಿಗಳು