Vijayapura News | ಜಿಲ್ಲಾಡಳಿತದಿಂದ ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಆಚರಣೆ

Kanakadasa Jayanti Celebration image

ವಿಜಯಪುರ: ಮನುಷ್ಯರನ್ನು ಗೌರವಿಸುವಂತಹ ಬಹುದೊಡ್ಡ ಪ್ರೇರಕ ಶಕ್ತಿ ಕನಕದಾಸರು. ಇಡೀ ಜೀವನ ಮನುಕುಲಕ್ಕೆ ಆದರ್ಶಮಯ ವಿಚಾರಗಳನ್ನು, ಸಮಾಜಮುಖಿ ಚಿಂತನೆಗಳನ್ನು ತತ್ವಾದರ್ಶಗಳನ್ನ ನೀಡಿದ ಸಂತ ಶ್ರೇಷ್ಠ ಕನಕದಾಸರ Kanakadasa Jayanti Celebration ಆದರ್ಶ-ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.

Kanakadasa Jayanti Celebration ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Vijayapura News | ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ವಿಶ್ರಾಂತ ಪ್ರಾಚಾರ್ಯ ಪ್ರೋ. ಎಸ್ ಎಮ್ ಶೇಖ

ಸಂತ, ಸತ್ಪುರುಷರು ಈ ಮನುಕುಲದ ಉದ್ದಾರಕರು ಹಾಗೂ ಸುಧಾರಕರು ಕತ್ತಲೆಯನ್ನು ಕಳೆದು ಅಂತರಂಗದ ತಿಳುವಿನ ಒಳಗಣ್ಣನ್ನು ತೆರೆಸಿದ ಶ್ರೇಷ್ಠ ಸತ್ಪುರುಷರು. ವಿವಿಧ ಸಂತರಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ವಿವಿಧ ಸಂತರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಮಾಜಮುಖಿ ಚಿಂತನೆಗಳನ್ನು ನೀಡಿದ ಕನಕದಾಸ, ಬುದ್ಧ, ಬಸವ ಅಂಬೇಡ್ಕರ್ ಅವರ ಆದರ್ಶಮಯ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕನಕದಾಸರು ಇಡೀ ಜೀವನ ಮನುಕುಲಕ್ಕೆ ಆದರ್ಶಮಯ ವಿಚಾರಗಳನ್ನು, ಸಮಾಜಮುಖಿ ಚಿಂತನೆಗಳನ್ನು ತತ್ವಾದರ್ಶಗಳನ್ನ ನೀಡಿದವರು ಸಕಲರಿಗೆ ಸಮಾನತೆ ಬೋಧಿಸಿದರು. ಸಕಲರನ್ನು ಸದ್ಭಾವನೆಯಿಂದ ಕಾಣುವಂತಹ ಮನುಷ್ಯರನ್ನು ಗೌರವಿಸುವಂತಹ ಬಹುದೊಡ್ಡ ಪ್ರೇರಕ ಶಕ್ತಿ ಕನಕದಾಸರು. ನಮ್ಮ ಸಾರ್ಥಕ ಜೀವನಕ್ಕೆ ಕನಕದಾಸರ ಚಿಂತನೆಯ ಬಲ ಅಳವಡಿಸಿಕೊಳ್ಳಬೇಕು.ಸರ್ವರೂ ಅತ್ಯಂತ ಮೌಲ್ಯಯುತ ಜೀವನ ನಡೆಸಲು ಈ ಸಂತರು ಸಾರಿದ ತತ್ವಗಳು ಎಂದೆಂದಿಗೂ ದಾರಿ ದೀಪವಾಗಿವೆ. ಸಮಾನತೆ ಬೋಧಿಸಿದ,ಶಾಂತಿ ಸಮೃದ್ಧಿಯಿಂದ ಮೌಲ್ಯಯುತ ಬದುಕು ಕಟ್ಟಿಕೊಳ್ಳುವಲ್ಲಿನ ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಹೇಳಿದರು.

ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯೋತ್ಸವ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆ

ಕನಕದಾಸರ ತತ್ವ ಚಿಂತನೆಗಳನ್ನ ಅವರ ಆದರ್ಶಮಯ ವಿಚಾರಗಳನ್ನ ಮಕ್ಕಳ ಮನೋಭೂಮಿಕೆಯಲ್ಲಿ ಮೂಡಿಸಲು ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಹಂತದಲ್ಲಿ ಕನಕದಾಸರ ವಿಚಾರಧಾರೆಗಳನ್ನು ತಲುಪಿಸುವ ಅವರ ಬಗೆಗೆ ಅನೇಕ ಸ್ಪರ್ಧೆಗಳನ್ನು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸುವ ಮೂಲಕ ಬಾಲ ವಿಕಾಸ ಅಕಾಡೆಮಿ ಮುಂಬರುವ ದಿನಗಳಲ್ಲಿ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಕನಕದಾಸರು ಸಮಾಜದ ಒಳಿತಿಗಾಗಿ ನೀಡಿರುವ ಸಂದೇಶ ಪಾಲಿಸೋಣ, ಇವರು ಓರ್ವ ಹರಿದಾಸ ಸಂತರು, ತತ್ವಜ್ಞಾನಿ, ವ್ಯಾಸ ತೀರ್ಥರ ಶಿಷ್ಯರಾಗಿದ್ದರು. 16ನೇ ಶತಮಾನದಲ್ಲಿ ಭಕ್ತಿ ಪಂಥದಲ್ಲಿನ ದಾಸವರೇಣ್ಯರು ಸಮಾಜದ ಸಮಾನತೆಗಾಗಿ ತಮ್ಮ ಕೀರ್ತನೆಗಳ ಮೂಲಕ ಮೂಲಕ ಜನಸಾಮಾನ್ಯ ರಾಡುವ ಭಾಷೆಯಲ್ಲಿಯೇ ತಿಳಿಹೇಳಿ ಸಮಾಜದ ಸುಧಾರಕರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Vijayapura News | ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕನಕದಾಸರು ದೊಡ್ಡ ಹೆಗ್ಗುರುತು

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ಸುಮಾರು 300ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ,ರಾಮಧಾನ್ಯಚರಿತೆ, ನಳಚರಿತೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಈ ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು, ಭೇದಭಾವ ಇರಬಾರದು ಎಲ್ಲರೂ ಸಮಾನರು ಎಂಬ ಸಂದೇಶ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿದ್ದಾರೆ ಅವರ ಆದರ್ಶ ವಿಚಾರಗಳನ್ನು ತತ್ವಗಳನ್ನ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಇದನ್ನೂ ಓದಿ: Vijayapura News | ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕನಕದಾಸರು ದೊಡ್ಡ ಹೆಗ್ಗುರುತು

ಉಪನ್ಯಾಸ ನೀಡಿದ ಪ್ರೋ.ಎ.ಎಚ್ ಕೊಳಮಲಿ ಅವರು ಮಾತನಾಡಿ, ನೊಂದವರ ಧ್ವನಿ, ಮೇರು ವ್ಯಕ್ತಿತ್ವಯುಳ್ಳವರು, ಕನಕದಾಸರು ಮಹಾನ ತ್ಯಾಗಿಯಾಗಿದ್ದರು. ದಾಸ ಸಾಹಿತ್ಯದ ಆಶ್ವಿನಿ ದೇವತೆಯಾಗಿದ್ದರು. ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಕೀರ್ತನೆಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಈ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದ,ಕನಕದಾಸರು ಮಹಾನ್ ಮೇಧಾವಿಯಾಗಿದ್ದರು. ತಲ್ಲಣಿಸಿದರು ಕಂಡೆ ತಾಳು ಮನವೇ ಎಲ್ಲರನು ಸಲಹುವನ್ನು ಇದಕ್ಕೆ ಸಂಶಯವಿಲ್ಲ ಎಂಬ ವ್ಯಾಖ್ಯೆಗಳು ಉದಾಹರಣೆಯಾಗಿವೆ ಎಂದು ಹೇಳಿದರು.

ಶರಣರು ಸಂತರು ಮೇಧಾವಿಗಳು ಈ ಜಗತ್ತಿಗೆ ಜ್ಞಾನದ ಬುತ್ತಿಯನ್ನು ಕಟ್ಟಿಕೊಟ್ಟಿದ್ದಾರೆ. ಈ ಸಮಾಜದಲ್ಲಿನ ಅಸಮಾನತೆಯನ್ನು ಮೌಡ್ಯತೆಯನ್ನು ಅಂಧಕಾರವನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಇವರ ಸಂದೇಶಗಳು ಜನ ಮಾನಸದಲ್ಲಿ ಸಕಾಲಿಕ ಮತ್ತು ಸಾರ್ವಕಾಲಿಕವಾಗಿವೆ. ಇಂದಿನ ಯುವ ಪೀಳಿಗೆಯು ಚಿಂತನೆ ಅಳವಡಿಸಿಕೊಳ್ಳಬೇಕು. ಕನಕದಾಸರ ಕೀರ್ತನೆಗಳು ಮನುಕುಲವನ್ನು ಬೆಳೆಗಿವೆ. ಕನಕದಾಸರ ತತ್ವ ಚಿಂತನೆಗಳು ಮನುಕುಲದ ಉದ್ದಾರ, ಕನಕದಾಸರ ಚಿಂತನೆಗಳು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ, ಸುಂದರ ಬದುಕು ನಮ್ಮದಾಗಿಸಿ ಸಾಗೋಣ ಎಂದು ಹೇಳಿದರು.

ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯೋತ್ಸವ-2024 ಸಮಾರೋಪ ಸಮಾರಂಭ | ಕನ್ನಡ ಭಾಷೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ

ಮುಖಂಡರಾದ ಮಲ್ಲಣ್ಣ ಶಿರಸ್ಯಾಡ ಅವರು ಕನಕದಾಸರ ಕುರಿತು ಮಾತನಾಡಿ, ಕನಕದಾಸರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಸಮಾನತೆಯ ಸಂದೇಶ ನೀಡಿದ ಸಂತರ ಚಿಂತನೆಗಳು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸಿದ್ದರಾಮ ಬಿರಾದಾರ,ರಾಮಸ್ವಾಮಿ ಕೊಳಮಲಿ, ಎಸ್.ಸಿ.ಕುರ್ಲೆ ಅವರು ಕಾವ್ಯ ವಾಚನ ಮಾಡಿದರು. ಮಹೇಶ ಪೂಜಾರಿ ಹಾಗೂ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಕನ್ನಡ ಮತ್ತು ಸಂಸ್ಜೃತಿ ಇಲಾಖೆ ಸಹಾಯ ನಿರ್ದೇಶಕರಾದ ಸಂತೋಷ ಭೋವಿ ಸ್ವಾಗತಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಅಶೋಕ ನ್ಯಾಮಗೊಂಡ, ರಾಹುಲ್ ಜಾಧವ, ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಹೆಸ್ಕಾಂ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ರವಿ ಕಿತ್ತೂರ, ಸುಜಾತ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ಭಿಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಶಾಲಾ ಮಕ್ಕಳು ಭಾಗವಹಿಸಿದ್ದರು.


Share the Post:

ಇತ್ತೀಚಿನ ಸುದ್ದಿಗಳು