Tipu Sultan Jayanti: ಹಿಂದೂ ದೇವಸ್ಥಾನಗಳಿಗೆ ಅಪಾರ ಕೊಡುಗೆ ನೀಡಿದ ಟಿಪ್ಪು ಸುಲ್ತಾನ್ – ಅಬ್ದುಲ್ ಹಮೀದ್ ಮುಶ್ರೀಫ್

Tipu Sultan Jayanti Vijayapura

ವಿಜಯಪುರ: Tipu Sultan Jayanti ಅಂಗವಾಗಿ ವಿಜಯಪುರ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಟಿಪ್ಪು ಸುಲ್ತಾನರ ಧರ್ಮ ಸಹಿಷ್ಣುತೆ, ದೇಶಪ್ರೇಮ ಹಾಗೂ ಹಿಂದೂ ದೇವಸ್ಥಾನಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಶುಕ್ರವಾರ ಝುಮ ಝುಮ ಅಸೋಸಿಯೇಷನ್ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಟಿಪ್ಪು ಸುಲ್ತಾನರು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದರು. ದೇಶಕ್ಕಾಗಿ ಚಿರಸ್ಮರಣೀಯ ಸೇವೆ ಸಲ್ಲಿಸಿದ್ದರು. ಹಿಂದೂ ದೇವಸ್ಥಾನಗಳಿಗೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ನಾವು ಕೂಡ ಅವರ ಆದರ್ಶದ ಹಾದಿಯಲ್ಲಿ ಸಾಗಿದಾಗ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲು ಸಾಧ್ಯ. ಕನ್ನಡ ನಾಡಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಎಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಒಗ್ಗಟ್ಟಿನಿಂದ ಬದುಕಬೇಕು ಎಂದು ಕರೆ ನೀಡಿದರು.

Tipu Sultan Jayanti ಕಾರ್ಯಕ್ರಮದ ಅಂಗವಾಗಿ ನಶಾಮುಕ್ತ ನಗರ ಸಂಕಲ್ಪ

ಇದಕ್ಕೂ ಮೊದಲು ನಗರದ ಆದಿಲ್ ಶಾಹಿ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಅಬ್ದುಲ್ ಹಮೀದ್ ಮುಶ್ರೀಫ್ ಅವರ ನೇತೃತ್ವದಲ್ಲಿ ಯುವಕರು ‘ನಶಾಮುಕ್ತ ನಗರ’ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸಿದರು.

ಕಾರ್ಯಕ್ರಮದಲ್ಲಿ ಇಬ್ಬರು ಶಾಲಾ ಬಾಲಕಿಯರು ಕಿರು ಭಾಷಣ ಮಾಡಿ ಟಿಪ್ಪು ಸುಲ್ತಾನರ ಬಾಲ್ಯ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಯೂಸುಫ್ ಜಮಾದಾರ, ಫಯಾಜ ಕಲಾದಗಿ, ಅಬ್ದುಲ್ ರಜಾಕ್ ಹೊರ್ತಿ, ಆನಂದ ಔಧಿ, ಮತೀನ ಕುಮಾರ ದೇವದಾರ್, ಆಶಾ ತಳಕೇರಿ, ಮಲ್ಲಮ್ಮ, ಅನ್ವರ್ ಮಕಾನದಾರ, ಮಹಾದೇವ ರಾವೂಜಿ ಸೇರಿದಂತೆ ಹಲವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!