Ravi Hanja Controversy: ವಿಜಯಪುರದಲ್ಲಿ ಬಸವ ದಳ ಆಕ್ರೋಶ, ಬಂಧನಕ್ಕೆ ಒತ್ತಾಯ

Ravi Hanja Controversy - Vijayapura Basava Dala Protest

ವಿಜಯಪುರ: Ravi Hanja Controversy ಇದೀಗ ವಿಜಯಪುರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಷ್ಟ್ರೀಯ ಬಸವ ದಳ ವಿಜಯಪುರ ವತಿಯಿಂದ ನಗರದ ಬಸವೇಶ್ವರ ವೃತ್ತದ ಹತ್ತಿರ ರವಿ ಹಂಜ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

ರವಿ ಹಂಜ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಮತ್ತು ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಜಿಲ್ಲಾ ಆಡಳಿತದ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬಸವಣ್ಣನವರಿಗೆ ಅವಹೇಳನ ಮಾಡಿದ್ದಾರೆ – ಸ್ವಾಮೀಜಿ ಆಕ್ರೋಶ

ಈ ಸಂದರ್ಭದಲ್ಲಿ ಮಾತನಾಡಿದ ಪ.ಪೂ. ಶ್ರೀ ಸಂಘನ ಬಸವ ಸ್ವಾಮೀಜಿ, ಪಿ.ಬಿ. ಹುಣಚ್ಚಾಳ ಮಠ ಅವರು, 12ನೇ ಶತಮಾನದ ಸಂಸ್ಕೃತಿ ನಾಯಕ ವಿಶ್ವಗುರು ಬಸವಣ್ಣನವರನ್ನು ಹಾಗೂ ಲಿಂಗಾಯತರನ್ನು ಕರ್ನಾಟಕದ ಸಂಸ್ಕೃತಿಗೆ ಅವಹೇಳನ ಮಾಡಿದ ಲೇಖಕ ರವಿ ಹಂಜ ಅವರು ಬಸವ ಭಕ್ತರ ಹಾಗೂ ಲಿಂಗಾಯತ ಸಮುದಾಯದವರ ಮನಸ್ಸಿಗೆ ತೀವ್ರ ಘಾಸಿ ಮಾಡಿದ್ದಾರೆ ಎಂದು ಹೇಳಿದರು.

ಇಡೀ ಲಿಂಗಾಯತ ಸಮುದಾಯಕ್ಕೆ ಮತ್ತು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಮನಸ್ಸಿಗೆ ನೋವುಂಟು ಮಾಡುವಂತೆ ಆಧಾರ ರಹಿತ ಆರೋಪ ಮಾಡಿರುವ ರವಿ ಹಂಜ ಅವರ ಕೃತಿ ಮತ್ತು ಮಾತುಗಳು ಸಮಾಜದ ಸ್ವಾಸ್ಥ್ಯ ಕದಡುವಂತಿವೆ ಎಂದರು.

ಬಸವ ಮಂಟಪ ಕೃತಿ ತಕ್ಷಣ ಮುಟ್ಟುಗೋಲು ಹಾಕಿ

ರಾಷ್ಟ್ರೀಯ ಬಸವ ದಳ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳಿ ಮಾತನಾಡಿ, ಬಸವ ಮಂಟಪ ಇಂತಹ ಕೃತಿಯನ್ನು ರಾಜ್ಯ ಸರ್ಕಾರ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳುವುದು ಸೂಕ್ತ ಎಂಬುದು ರಾಷ್ಟ್ರೀಯ ಬಸವ ದಳದ ಅಭಿಪ್ರಾಯವಾಗಿದೆ ಎಂದರು.

ಸಂವಿಧಾನದತ್ತವಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಷ್ಟ್ರೀಯ ಬಸವ ದಳ ಗೌರವ ನೀಡುತ್ತದೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಬಿಜ್ಜಳನ ಖಜಾನೆ ದುರುಪಯೋಗ ಪಡಿಸಿಕೊಂಡು ಶರಣ ದಾಸೋಹ ಮಾಡಿದ್ದಾನೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡುವವರನ್ನು, ಅಂತಹ ಬರಹವನ್ನು ರಾಷ್ಟ್ರೀಯ ಬಸವ ದಳ ಒಪ್ಪಲು ಸಾಧ್ಯವೇ ಇಲ್ಲ ಎಂದರು.

ವಿಡಿಯೋ ತೆಗೆದುಹಾಕಿ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ

ಕೂಡಲೇ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಸಂಬಂಧಪಟ್ಟ ರವಿ ಹಂಜ ಅವರ ಎಲ್ಲಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಬೇಕು. ಸಂಶೋಧಕರಾಗಿ ಮಾತನಾಡುವ ಈ ವ್ಯಕ್ತಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಬೇಕು ಹಾಗೂ ತಕ್ಷಣವೇ ಆತನನ್ನು ಬಂಧಿಸಿ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಬೇಕು ಎಂದು ರಾಷ್ಟ್ರೀಯ ಬಸವ ದಳ ವಿಜಯಪುರ ಆಗ್ರಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಗೌರವ ಅಧ್ಯಕ್ಷ ಬಸವರಾಜ ಕೊಂಡಗೂಳಿ, ಕಾರ್ಯಾಧ್ಯಕ್ಷ ಅಣ್ಣಾಸ್ವಾಮಿಗೂಳ ಪಾಟೀಲ, ಚೈತನಕುಮಾರ ಗಲಗಲಿ, ಬಾಬು ಇಬ್ರಾಹಿಂಪುರ, ಸಂತೋಷ ಬೇನೂರ, ಚೆನ್ನು ಕೊಂಡಗೂಳಿ, ರಾಹುತ ಮಲಜಿ, ಬಸವರಾಜ ಮೇಟಗಾರ, ಪರಶುರಾಮ ಬೊಮ್ಮನಹಳ್ಳಿ, ಪ್ರಭಾವತಿ ಹಳ್ಳಿ, ಮಹಾಂತೇಶ ಅಗಸರ, ಸಂಪತ್ ಕುಮಾರ ಇಂಗಳೇಶ್ವರ, ರಮೇಶ ಅಲ್ಲಿಭಾವಿ, ಚೆನಪ್ಪ ಗಂದಗಲ್ಲ, ರಾಜಪ್ಪ ಹಳ್ಳಿ, ಬಸವ ಕಿರಣ ಕೊಂಡಗೂಳಿ, ದೀಪಾ ಕೊಂಡಗೂಳಿ, ಎಂ.ಜಿ. ತಳವಾರ್, ಗಿರಿಜಾ ಚೌದರಿ, ಬಸವರಾಜ್ ಅಗಸರ, ರೇವತಿ ಬಿರಾದಾರ, ಯುವರಾಜ ಚೋಳಕೆ, ಬಿ.ಎಸ್. ಬಿರಾದಾರ, ಕಮಲಾ ಚೌದರಿ, ಸಾವಿತ್ರಿ ಉಮದಿ, ಡಿ.ಎ. ಪಾಟೀಲ, ಪಿ.ಎಂ. ಹಳ್ಳಿ, ಗೌರಮ್ಮ ಇಬ್ರಾಹಿಂಪುರ, ಮುತ್ತು ಮೇಲಿನಮನಿ, ಪರಶುರಾಮ ಆವಟಿ, ರಮೇಶ ಅಲಿಯಾಬಾದಿ, ಬಸವರಾಜ ಸೋಲಾಪುರ, ಮಡಿವಾಳ ಅಗಸರ, ಆನಂದ ಗಡೆದ, ಅನೀಲ್ ಪಾಟೀಲ, ತಿಪ್ಪರಾಯ ತಳವಾರ, ಶರಣ ಬಸಪ್ಪ ಗಂಗಶೆಟ್ಟಿ, ಎಲ್ಲಾಲೀಗ ಹಾದಿಮನಿ, ತಿಪ್ಪುರಾಯ ಹತ್ತರಕಿಹಾಳ ಮತ್ತಿತರರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!