Siddasiri Society | ಸಿದ್ಧಸಿರಿ ಠೇವಣಿದಾರರ ಹಣದ ವಿವರ ಬಹಿರಂಗಪಡಿಸಿ: ರಮೇಶ ಬಿದನೂರ ಆಗ್ರಹ

Siddasiri Society Depositors Financial Details

ವಿಜಯಪುರ : ನಾನು ಸಿದ್ಧಸಿರಿ ಮಲ್ಟಿ ಸ್ಟೇಟ್ ಸೌಹಾರ್ದ ಸಂಸ್ಥೆಯ ಠೇವಣಿದಾರರ (Siddasiri Society Depositors) ಹಿತರಕ್ಷಣೆಯ ಉದ್ದೇಶ ಮಾತ್ರ ಹೊಂದಿರುವೆ, ಸಿದ್ಧಸಿರಿ ಸೌಹಾರ್ದದ ಪ್ರಸ್ತುತ ಆರ್ಥಿಕ ಸ್ಥಿತಿಗತಿ, ಹೂಡಿಕೆ ವಿವರ ಸೇರಿದಂತೆ ಸಮಗ್ರ ವಿವರವನ್ನು ಕೂಡಲೇ ಬಹಿರಂಗಪಡಿಸಿ ಠೇವಣಿದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಸಹಕಾರಿ ಧುರೀಣ ರಮೇಶ ಬಿದನೂರ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಿದ್ಧಸಿರಿ ಅಸ್ತಿತ್ವ ಕಳೆದುಕೊಳ್ಳಬೇಕು ಎಂದು ಬಯಸುವ ವ್ಯಕ್ತಿಯಲ್ಲ, ಬದಲಿಗೆ ಅದು ಉಳಿಯಬೇಕು, ಅಲ್ಲಿರುವ ಠೇವಣಿದಾರರ ಹಿತಕ್ಕಾಗಿ ಮಾತ್ರ ಈ ಧ್ವನಿ ಎತ್ತಿರುವೆ ಎಂದರು.
ನಗರ ಶಾಸಕರು ಅನೇಕ ದಿನಗಳ ನಂತರ ಅವರ ಮೃದು ಸ್ವಭಾವದಿಂದ ಮಾತನಾಡುವ ಮೂಲಕ ಹೊಸ ರೂಪದ ದರ್ಶನ ನೀಡಿದ್ದಾರೆ, ವಿಡಿಯೋ ಹರಿಬಿಟ್ಟು ಠೇವಣಿದಾರರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದಕ್ಕೆ ಧನ್ಯವಾದ ಅರ್ಪಿಸುವೆ, ಆದರೆ ಒಟ್ಟಾರೆಯಾದ ಸಿದ್ಧಸಿರಿ ಆರ್ಥಿಕ ಪರಿಸ್ಥಿತಿ, ಹೂಡಿಕೆಯ ವಿವರ, ಠೇವಣಿ ವಿವರ ಸೇರಿದಂತೆ ಸಮಗ್ರವಾದ ದಾಖಲಾತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ ಎಲ್ಲವೂ ಕ್ಲೀಯರ್ ಆಗಿ ಬಿಡುತ್ತದೆ, ಈ ನಿಟ್ಟಿನಲ್ಲಿ ಸಿದ್ಧಸಿರಿ ಆಡಳಿತ ಮಂಡಳಿ ಮುಂದಾಗಲಿ ಎಂದರು.
ಸಿದ್ದಸಿರಿ ಸೊಸೈಟಿಯ ಕಾನೂನು ಸಲಹೆಗಾರರರು ನೋಟಿಸ್ ಬಂದಿರುವುದನ್ನು ಮೊದಲೇ ಒಪ್ಪಿಕೊಂಡಿದ್ದರೆ ನಾನು ಪ್ರೆಸ್ ಮೀಟ್ ಮಾಡುವ ಪ್ರಮೇಯ ಬರುತ್ತಿಲ್ಲ. ತಡೆಯಾಜ್ಞೆ ವಿಷಯ ಗೊತ್ತಿದ್ದರೂ ಪ್ರೆಸ್ ಮೀಟ್ ಮಾಡಿದ್ದಾರೆ ಎಂದು ದೂರಿದ್ದಾರೆ. ಇದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನು ಹಾಕಿರುವ ವಿಷಯವೇ, ಸಿದ್ದಸಿರಿ ಸೊಸೈಟಿಗೆ ಸಂಬಂಧಿಸಿದ ಪೋಸ್ಟ್ ಅಲ್ಲವೇ ಅಲ್ಲ ಎಂದರು.
ನಾನು ವಿಶೇಷ ತನಿಖಾ ತಂಡ ಎಂದು ಉಲ್ಲೇಖಿಸಿದ್ದೆ, ಆ ಪದ ವಾಪಾಸ್ಸು ಪಡೆಯುವೆ, ಆದರೆ ತನಿಖಾ ತಂಡ ರಚನೆಯಾಗಿದ್ದಂತೂ ಸತ್ಯವಲ್ಲವೇ ಎಂದು ಪ್ರಶ್ನಿಸಿದರು.

ಹೂಡಿಕೆಯ ಬಗ್ಗೆಯೂ ಸ್ಪಷ್ಟತೆ ಕೊಡಿ:
ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು ೩೬ ಕೋಟಿ ಖರೀದಿ ಮಾಡಿದ್ದಾರೆ. ಡಿಪಿಆರ್ ಪ್ರಕಾರ ಸಿದ್ದಸಿರಿ ಎಥೆನಾಲ್ ಘಟಕಕ್ಕೆ ೩೬೫ ಕೋಟಿ ರೂ. ಬಂಡವಾಳ ಮಾತ್ರ ಹೂಡಿಕೆ ಮಾಡಲು ಅವಕಾಶ ಇದೆ. ೧,೦೬೨ ಕೋಟಿ ಹೂಡಿಕೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ, ಉಳಿದ ಹಣ ಬಗ್ಗೆ ಠೇವಣಿದಾರರಿಗೆ ಸ್ಪಷ್ಟನೆ ನೀಡಲಿ. ಲಾಭ ಹಾಗೂ ನಷ್ಟ ಬಗ್ಗೆ ತಿಳಿಸಿದರೆ ಠೇವಣಿದಾರರಿಗೆ ಧೈರ್ಯ ಬರಲಿದೆ ಎಂದರು. ಈ ಹಿಂದೆ ಸಿದ್ಧಸಿರಿ ನೌಕರರಿಗೆ ಗ್ರಾಚ್ಯುಟಿ ಹಣ ತುಂಬಿರಲೇ ಇಲ್ಲ, ಈ ಎಲ್ಲ ವಿದ್ಯಮಾನ ಸೃಜನೆಯಾದ ನಂತರ ಒಂದೇ ದಿನ ೧೯ ಕೋಟಿ ರೂ.ಗಳಷ್ಟು ಹಣ ಸಂದಾಯ ಮಾಡಿದ್ದಾರೆ ಎಂದರು.

Share the Post:

ಇತ್ತೀಚಿನ ಸುದ್ದಿಗಳು

error: Content is protected !!