ವಿಜಯಪುರ: ದತ್ತಿ ಕಾರ್ಯಕ್ರಮಗಳಿಂದ ಹಿರಿಯರ ಪುಣ್ಯ ಸ್ಮರಣೆ ಮಾಡುವದು ಕುಟುಂಬದ ಆಧ್ಯ ಕರ್ತವ್ಯ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ ಹಾಗು ವಿಶ್ವಾಸದಿಂದ ನಡೆದುಕೊಂಡು ಜೀವಿತ ಅವಧಿಯಲ್ಲಿ ಹಿರಿಯರಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದು ರಾಜಕೀಯ ಮುಖಂಡರಾದ ಶ್ರೀದೇವಿ ಉತ್ಲಾಸರ Sridevi Utlasara ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಲಿಂಗೈಕ್ಯ ಬಸಪ್ಪ ಗಂಗಪ್ಪ ಸಾಲಕ್ಕಿ ಮತ್ತು ಅಮರಪ್ಪ ಬಸಪ್ಪ ಸಾಲಕ್ಕಿ ದತ್ತಿ ದತ್ತಿ ದಾನಿಗಳಾದ ಗಂಗಾಧರ ಬಸಪ್ಪ ಸಾಲಕ್ಕಿ. ವಿಷಯ: ಕಾಯಕ ಮತ್ತು ಸಮಾನತೆ ಕುರಿತು. ದಿ. ಶಂಕರಾನಂದ ಕಾಳಪ್ಪ ಉತ್ಲಾಸರ ದತ್ತಿ. ದಾನಿಗಳು ಶ್ರೀಮತಿ ಶ್ರೀದೇವಿ ಉತ್ಲಾಸರ Sridevi Utlasara. ವಿಷಯ : ನಾಟಕ ಹಾಗು ಸಂಗೀತ ಕುರಿತು. ಎರಡು ದತ್ತಿ ನಿಧಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಿರಿಯರ ಪೋಷಣೆ ಹಾಗು ಸ್ಮರಣೆ ನಮ್ಮ ಸಂಸ್ಕೃತಿಯ ಪ್ರತೀಕ. ತಮ್ಮ ಕುಟುಂಬಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟ ಹಿರಿಯರಯನ್ನು ದತ್ತಿ ಉಪನ್ಯಾಸಗಳಿಂದ ಸ್ಮರಿಸಿದರೆ ಹಿರಿಯರನ್ಣು ಸ್ಮರಿಸಿದಂತೆ ಎಂದರು.
ಇದನ್ನೂ ಓದಿ: ಚಳಿಗಾಲದ ಶೈಕ್ಷಣಿಕ ಪ್ರವಾಸ: ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಸಲಹೆಗಳು
ಸಭೆಯ ಅಧ್ಯಕ್ಷತೆ ವಹಿಸಿದ ಹಿರಿಯರ ಸಾಹಿತಿ ಗಂಗಾಧರ ಸಾಲಕ್ಕಿಂತ ಮಾತನಾಡಿ ದತ್ತಿ ನಿಧಿ ಗೋಷ್ಠಿಗಳು ತುಂಬ ಉಪಯುಕ್ತವಾಗಿ ನಡೆಸುತ್ತಿರುವದು ಸಂತೋಷದ ವಿಷಯ . ಇಂದಿನ ಗೋಷ್ಠಿಯ ವಿಷಯ ಗಳ ಕುರಿತು ಉಪನ್ಯಾಸ ನೀಡಿದ ಶಿಕ್ಷಕರು ಅರ್ಥಪೂರ್ಣವಾದಗಿ ಮಾತನಾಡಿದ್ದು ಶ್ಲಾಘನೀಯ ಕಾರ್ಯ ಎಂದರು.
ಮಡಿವಾಳಮ್ಮ ನಾಡಗೌಡ ಕಾಯಕ ಹಾಗು ಸಮಾನತೆ ಕುರಿತು ಚಿಂತನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾಯಕ ವ್ಯಕ್ಯಿಯ ಗೌರವವನ್ನು ಹೆಚ್ಚಿಸುವದು. ಕಾಯಕ ಶ್ರದ್ಧೆ ಭಕ್ತಿಯಿಂದ ಮಾಡಿದರೆ ಜೀವನದಲ್ಲಿ ಯಶಸ್ವಿ ವ್ಯಕ್ತಿ ಆಗುವುದರಲ್ಲಿ ಸಂಶಯವಿಲ್ಲ ಎಂದರು. ಎರಡನೇಯ ನಾಟಕ ಹಾಗೂ ಸಂಗೀತ ಕುರಿತು ರಶ್ಮಿ ಬದ್ನೂರ ಮಾತನಾಡಿ ನಾಟಕ ಸಮಾಜದ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ನಾಟಕಗಳು ಮಾಡುತ್ತಾ ಬಂದಿವೆ. ನಾಟಕ ಕಣ್ಮರೆಯಾಗುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸುವ ಹಾಗು ಬೆಳೆಸುವ ಪ್ರಯತ್ನ ನಮ್ಮದಾಗಿರಬೇಕು. ಸಂಗೀತ ಪ್ರತಿಭಾವಂತರಿಗೆ ಕಲಿಯಲು ಸಾಧ್ಯ. ಸಂಗೀತ ಹಾಗು ನಾಟಕಗಳು ವಿರಳವಾಗುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿ.
ಇದನ್ನೂ ಓದಿ: Vijayapura News | ಆಧುನಿಕ ಕನ್ನಡ ರಂಗಭೂಮಿ ‘ಪಿತಾಮಹ’ ಶಾಂತಕವಿ ಸಕ್ಕರಿ ಬಾಳಾಚಾರ್ಯರು
ರಾಜ್ಯ ಕುರುಬರ ಸಂಘದ ಯುವ ಕುರುಬರ ಸಂಘದ ಅಧ್ಯಕ್ಷೆ ಮತನಾಡಿ ಶಿಲ್ಪಾ ಕುದರಗೊಂಡ ಮಾತನಾಡಿ ಅನೇಕ ಕವಿಗಳು ಸಾಹಿತ್ಯದ ಮೂಲಕ ಸಮಾಜಿಕ ಲೋಪ ದೋಷಗಳನ್ನು ಕವಿತೆಗಳ ಮೂಲಕ ಖಂಡಿಸಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಸಂದೇಶ ನೀಡಿದ್ದು ಸರ್ವಕಾಲಿಕ ಎಂದರು.
ಹಿರಿಯರ ನ್ಯಾಯವಾದಿ ಆರ್ ಎಸ್ ನಂದಿ ಮಾತನಾಡಿದರು. ಕಸಾಪ ಪದಾಧಿಕಾರಿಗಳಾದ ಕಮಲಾ ಮುರಾಳ. ಜಯಶ್ರೀ ಹಿರೇಮಠ. ರಾಜೇಸಾಬ ಶಿವನಗುತ್ತಿ ವೇದಿಕೆಯ ಮೇಲಿದ್ದರು. ಶಾಂತಾ ವಿಭೂತಿ ಪ್ರಾರ್ಥಿಸಿದರು. ಮಮತಾ ಮುಳಸಾವಳಗಿ ಸ್ವಾಗತಿಸಿದರು. ಮಹಮ್ಮದಗೌಸ ಹವಾಲ್ದಾರ ನಿರೂಪಿಸಿದರು.
ಪ್ರಭುಲಿಂಗ ಖೇಡಗಿ ನಿರೂಪಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಸುರೇಶ ಜತ್ತಿ, ಎಸ್ ಎಲ್ ಇಂಗಳೇಶ್ವರ, ಶಿಲ್ಪಾ ಭಸ್ಮೆ, ಬಿ ಎಮ್ ಆಜೂರ, ಕೆ ಎಸ್ ಹಣಮಾನಿ, ಪ್ರೀಯಾಂಕಾ ಕೋನಾಳ, ಸೌಮ್ಯ ದೋರಣಹಳ್ಳಿ, ಪೀರಸಾಬ ವಾಲಿಕಾರ, ಎಂ ಬಿ ಮೋಪಗಾರ, ಶ್ರೀಕಾಂತ ನಾಡಗೌಡ, ರವೀಂದ್ರ ಬ್ಯಾಕೋಡ, ಸುಖದೇವಿ ಅಲಬಾಳಮಠ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಲಕ್ಷ್ಮಿ ಬಿರಾದಾರ, ಎಸ್ ಎಸ್ ಕುದರಗೊಂಡ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಡಾ .ಭುವನೇಶ್ವರಿ ಮೇಲಿನಮಠ, ಭಾಗಿರಥಿ ಸಿಂಧೆ, ಅಮೋಘಸಿದ್ಧ ಪೂಜಾರಿ, ಇಕ್ಬಾಲ ಅವಟಿ, ಕೀರ್ತಿ ಬಜಂತ್ರಿ ಮುಂತಾದವರು ಉಪಸ್ಥಿತರಿದ್ದರು.






