Vijayapura News | ಬಸವಾದಿ ಶರಣರ ವಿಚಾರಗಳೆ ಬದುಕಿಗೆ ಆದರ್ಶ – ಶಂಕರ ಬಿದರಿ

Shankara Bidari image

ವಿಜಯಪುರ: ಬಸವಾದಿ ಶರಣರು ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿದವರು. ಶರಣರ ವಿಚಾರಗಳು ನಮಗೆ ಆದರ್ಶ, ನಿತ್ಯ ಸ್ಪೂರ್ತಿ. ಸಮಾಜದಲ್ಲಿರುವ ಬಡಜನರ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಎಲ್ಲರನ್ನು ಒಗ್ಗೂಡಿಸಿದ ಕೀರ್ತಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ Shankara Bidari ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕøತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಮ್ಮ ಸಮಾಜದಲ್ಲಿ ವೀರಶೈವ, ಲಿಂಗಾಯತ ಸ್ವಲ್ಪ ಅಂತರವಿದೆ. ತಲತಲಾಂತರದಿಂದ ಬಂದ ವೀರಶೈವ ಸಮಾಜ ಧರ್ಮ ಉಳಿಯಬೇಕಾಗಿದೆ.

ಇದನ್ನೂ ಓದಿ: Vijayapura News | ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ನೇಮಕ

Shankara Bidari ಎಲ್ಲ ವರ್ಗಗಳ ಸಹಕಾರ ಇಂದು ಅವಶ್ಯಕತೆ ಇದೆ. ನೆರೆಯ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಇದೆ. ಎಲ್ಲರನ್ನು ಜೊತೆಗೂಡಿ ಒಗ್ಗಟ್ಟಾಗಿ ಹೋಗಬೇಕಾಗಿದೆ. ವೀರಶೈವ ಪದ ಹಿಂದುಳಿದ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕಾಗಿದೆ. ನಮ್ಮ ಸಮಾಜ, ಧರ್ಮ ಉಳಿಯಬೇಕಾಗಿದೆ. ಸಂಸ್ಕಾರದಿಂದ ದೂರ ಉಳಿಯಬಾರದು ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಬದುಕು ಸುಂದರವಾಗಿಸಿಕೊಳ್ಳಬೇಕು ಎಂದರು.

ಷಣ್ಮುಖಾರೂಢ ಮಠದ ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಆಶೀರ್ವಚನ ನೀಡಿ 1904ರಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಂದಿನ ಶಿರಸಂಗಿ ಲಿಂಗರಾಜ ಮಹಾರಾಜರು, ಸೊನ್ನದ, ಆಲಮೇಲ ದೇಸಾಯಿ, ವಾರದ ಮಲ್ಲಪ್ಪ, ಹಾಗೂ ಹಿರಿಯರು ಸಂಸ್ಥೆಯ ಏಳ್ಗೆಗಾಗಿ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ, ಉಚಿತ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಒಳತಿಗಾಗಿ ಶ್ರಮಿಸಿದವರು. ಪೂಜ್ಯರ ಸ್ಮರಣೆ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾಪುರುಷುರು ನಮ್ಮ ಇಂದಿನ ಬದುಕು ಸುಂದರವಾಗಬೇಕಾದರೆ ಸಂಸ್ಕಾರ, ಸಂಸ್ಕøತಿ, ಧರ್ಮ ಬಹಳ ಮುಖ್ಯ ಇದರಲ್ಲಿ ದಾನಿಗಳ ಪಾತ್ರ ತುಂಬಾ ಮಹತ್ವ ಪಡೆಯುತ್ತದೆ. ಇಂದು ನಾವೆಲ್ಲ ಸೇರಿ ವೀರಶೈವ ಲಿಂಗಾಯತ ಧರ್ಮ ಉಳಿಸಲು ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.

ಇದನ್ನೂ ಓದಿ: Vijayapura News | ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡದ ಸದುಪಯೋಗವಾಗಬೇಕು : ಡಾ. ಸುಧಾಮೂರ್ತಿ

ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ರಾಮಪ್ಪ ಉಪ್ಪಿನ, ಸಹದೇವ ನಾಡಗೌಡರ, ಎಂ.ಜಿ. ಯಾದವಾಡ, ಬಿ.ಟಿ. ಈಶ್ವರಗೊಂಡ, ಎಸ್.ಎ. ಪಾಟೀಲ, ವಿದ್ಯಾವತಿ ಅಂಕಲಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಾಹಿತಿಗಳಾದ ಸಂಗಮೇಶ ಬದಾಮಿ, ದೊಡ್ಡಣ್ಣ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ವಿ.ಡಿ. ಐಹೊಳ್ಳಿ, ಶಾರದಾ ಕೊಪ್ಪ, ಜ್ಯೋತಿ ಬಾಗಲಕೋಟ, ಉಷಾ ಹಿರೇಮಠ, ತಾಲೂಕಾ ಅಧ್ಯಕ್ಷ ಬಸವರಾಜ ಇಟ್ಟಂಗಿ, ರವೀಂದ್ರ ಬ್ಯಾಕೋಡ, ಮಹಾದೇವ ಹಾಲಳ್ಳಿ, ಬಸವರಾಜ ಒಂಟಗೋಡಿ, ಪರಶುರಾಮ ಪೋಳ, ವಿಠ್ಠಲ ತೇಲಿ, ವಿ.ಬಿ. ಸಾಲಕ್ಕಿ, ಯುವರಾಜ ಜೋಳಕೆ ಉಪಸ್ಥಿತರಿದ್ದರು. ನಂತರ ಜಿಲ್ಲಾ ಘಟಕ ಮತ್ತು ತಾಲೂಕಾ ಘಟಕಗಳಿಂದ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಅವರನ್ನು ಸತ್ಕರಿಸಲಾಯಿತು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »