Vijayapura News : ರಿಕ್ಕಿ ರೈ ಮೇಲೆ ದಾಳಿ ಜಯ ಕರ್ನಾಟಕ ಸಂಘಟನೆ ಖಂಡನೆ 

Ricky Rai image
ವಿಜಯಪುರ : ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ದಿ|| ಮುತ್ತಪ್ಪ ರೈ ಅವರ ಮಗನಾದ ರಿಕ್ಕಿ ರೈ Ricky Rai ಇವರು ಮೇಲೆ ನಡೆದಿರುವ ದಾಳಿಯ ಕುರಿತು ಸೂಕ್ತ ತನಿಖೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಾಗೂ ರಿಕ್ಕಿ ರೈ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ, ವಿಜಯಪುರ ಘಟಕದ ವತಿಯಿಂದ ರಾಜ್ಯದ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಿದ್ದನಗೌಡ ದಾಶ್ಯಾಳ ಇವರು ಮಾತನಾಡಿ, ರಾಜ್ಯದ ಜನರ ಒಳಿತಿಗಾಗಿ ಹಾಗೂ ಎಲ್ಲ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯನ್ನು ಸಂಸ್ಥಾಪಕರಾದ ಮುತ್ತಪ್ಪ ರೈ ಅವರು ಹುಟ್ಟಿಹಾಕಿ ನಾಡಿನಾದ್ಯಂತ ಹೋರಾಟಗಳನ್ನು ಕೈಗೊಳ್ಳುತ್ತ, ಎಲ್ಲ ಜನರಿಗೆ ನ್ಯಾಯ ಒದಗಿಸುವಲ್ಲಿ ಸಂಘಟನೆಯು ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂತಹ ಸಂಘಟನೆಯ ಸಂಸ್ಥಾಪಕರ ಮಗನಾದ Ricky Rai ಅವರ ಮೇಲೆ ಯಾರೋ ಕಿಡಿಗೇಡಿಗಳು ಗುಂಡಿನ ದಾಳಿ ಮಾಡಿದ್ದು, ಸದ್ಯ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Vijayapura News : ದೇಶದ ನಾಗರಿಕರಿಗೆ ಸಮಾನತೆ ಪ್ರತಿಪಾದಿಸಿದ ಡಾ. ಬಿ.ಆರ್. ಅಂಬೇಡ್ಕರ
ಇವರ ಆರೋಗ್ಯ ಗುಣಮುಖವಾಗಲಿ ಹಾಗೂ ಇವರ ಮೇಲೆ ಹಲ್ಲೆ ಮಾಡಿರುವ ದುಷ್ಟರನ್ನು ಶೀಘ್ರದಲ್ಲಿ ಸರಕಾರವ ಸೂಕ್ತ ತನಿಖೆ ಕೈಗೊಂಡು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಈ ದಾಳಿಯಿಂದ ಬೆಚ್ಚಿಬಿದ್ದಿರುವ ಇವರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ನೀಡಿ ರಿಕ್ಕಿ ರೈ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ತಿಳಿಸಿದರು. ಒಂದುವೇಳೆ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಸಂಘಟನೆಯು ಕೈಗೊಳ್ಳುತ್ತದೆಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸಿದ್ದರಾಜ ಹೊಳಿ, ಶಂಕರ ಮಾನೆ, ಖಂಡು ಭಿಸೆ, ಸಿದ್ರಾಮ ಅವಟಿ, ಸಂತೋಷ ಮನಗೂಳಿ, ಗುರು ಗೋಡೇಕಾರ, ಸಂತೋಷ ನನ್ನವರೆ, ಇಬ್ರಾಹಿಂ ಹತ್ತರಕಿಹಾಳ, ಶಕೀಲ ರಿಜ್ವಾನ ಮುಲ್ಲಾ, ಇನ್ನಿತರರು ಕಾರ್ಯಕರ್ತರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು