ಜಮಖಂಡಿ: ಹಳಗನ್ನಡದ ಮೊದಲ ತಲೆಮಾರಿನ ವಿದ್ವಾಂಸರಾಗಿ ಕನ್ನಡ ಭಾಷೆಯ ಶಾಸ್ತ್ರೀಯ ವಿಷಯಗಳ ಸಂಶೋಧನೆ ಮತ್ತು ಸಂಪಾದನೆಯಲ್ಲಿ ಪರಿಶ್ರಮವಹಿಸಿದ Old Kannada language ವಿದ್ವಾಂಸ ಡಾ.ಡಿ.ಎಲ್.ನರಸಿಂಹಾಚಾರ ಅವರು ಕನ್ನಡ ಭಾಷಾ ವಿದ್ವತ್ತಿನ ಅಸ್ಮೀತೆಯಾಗಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ಕಸಾಪ ತಾಲೂಕ ಘಟಕ ಜಮಖಂಡಿ, ಬಾಗಲಕೋಟೆ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಮಖಂಡಿಯ ಬಾಲಕೆಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗ ಇವರ ಸಹಯೊಗದಲ್ಲಿ ಶುಕ್ರವಾರ ಪ್ರೌಡಶಾಲಾ ವಿಭಾಗದ ಜ್ಞಾನ ಭುವನದಲ್ಲಿ ಡಾ.ಡಿ.ಎಲ್.ನರಸಿಂಹಚಾರ್ ದತ್ತಿನಿಧಿ ಅಂಗವಾಗಿ ಕನ್ನಡ ಶಿಕ್ಷಕರಿಗೆ 4 ದಿನಗಳ Old Kannada language ‘ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರದಲ್ಲಿ ‘ಡಾ.ಡಿ.ಎಲ್. ನರಸಿಂಹಾಚಾರ ಅವರ ಸಾಹಿತ್ಯ ಸಾಧನೆ’ ಕುರಿತು ವಿಷಯ ಮಂಡಸಿ ಮಾತನಾಡಿದರು.
ಇದನ್ನೂ ಓದಿ: Bagaljote News | ಗ್ರಾ.ಪಂ ಉಪ ಚುನಾವಣೆ : ಪ್ರತಿಬಂಧಕಾಜ್ಞೆ ಜಾರಿ – ಜಾನಕಿ ಕೆ.ಎಂ ಆದೇಶ
ಕನ್ನಡ ಭಾಷೆಗೆ ಹಿನ್ನಡೆಯಾಗುವ ಸಂದರ್ಭದಲ್ಲಿ ಕನ್ನಡ ಭಾಷೆಯ ಶಾಸ್ತ್ರೀಯ ವಿಚಾರಗಳು ಕನ್ನಡ ಅಸ್ಮೀತೆಯಂದು ಮುನ್ನಲೆಗೆ ತರುವ ಕೆಲಸವನ್ನು ಡಾ.ಡಿ.ಎಲ್.ನರಸಿಂಹಾಚಾರ್ ಮಾಡಿದ್ದಾರೆ, ರಾಷ್ಟ್ರದ ಇನ್ನಿತರ ಭಾಷೆಯ ಸಂಘರ್ಷದಲ್ಲಿ ಮತ್ತು ಕನ್ನಡ ಭಾಷೆ ಚಾರಿತ್ರಿಕವಾಗಿ ನಿಲ್ಲುವಲ್ಲಿ ವಿದೇಶಿ ವಿದ್ವಾಂಸರಿಗಿಂತ ಭಿನ್ನವಾಗಿ ಕನ್ನಡವನ್ನು ಐತಿಹಾಸಿಕವಾಗಿ ಕಟ್ಟುವ ಕಾರ್ಯವನ್ನು ನಮ್ಮ ಕನ್ನಡದ ಹಿರಿಯ ವಿದ್ವಾಂಸರಾದ ಡಾ.ಡಿ.ಎಲ್.ಎನ್, ತಿನಂಶ್ರೀ. ಎ.ಆರ್.ಕೃಷ್ಣಶಾಸ್ತ್ರಿ, ಟಿ.ಎಸ್..ವೆಂಕಣ್ಣಯ್ಯ ಮುಂತಾದ ಪ್ರಮುಖರು ಹಳಗನ್ನಡ ಸಾಹಿತ್ಯ ಕೃಷಿ ಮಾಡಿದ್ದಾರೆ.
ಯಾವುದೆ ಭಾಷೆಯ ಸಾಹಿತ್ಯ ಸಾಮಾಜಿಕಗೊಂಡರೆ ಗತಿಶೀಲ ಗುಣವನ್ನು ಹಾಗೂ ಹೊಸ ಹೊಳವು ಪಡೆಯಲು ಸಾಧ್ಯವಗುತ್ತದೆ, ಅಂತಹ ಗುಣವನ್ನು ಡಾ.ನರಸಿಂಹಾಚಾರ್ ಅವರ ಸಂಶೋಧನ ಬರಹಗಳಲ್ಲಿ ಕಾಣಬಹುದು, ಕನ್ನಡ ಗ್ರಂಥ ಸಂಪಾದನೆ, ಪೀಠಿಕೆಗಳು, ಲೇಖನಗಳು, ವಡ್ಡಾರಾಧನೆ, ಪಂಪ ರಾಮಾಯಣ, ಶಬ್ದಮರ್ಣಿದರ್ಪಣ, ಸಿದ್ದರಾಮಚರಿತೆ, ಸಕಲ ವೈದ್ಯಸಂಹಿತಾ ಸಾರಾರ್ಣವ ಇವು ಅವರ ಅಧ್ಯಯನ ಪೂರ್ವ ಕೃತಿಗಳಾಗಿವೆ ಹಳೆತಲೆಮಾರು ಹಾಗೂ ಹೊಸ ತಲೆಮಾರಿನವರಿಗೆ ಇವರು ಮಾದರಿಯಾಗಿದ್ದಾರೆ ಎಂದರು.
ಇದನ್ನೂ ಓದಿ: Bagalkote News | 20 ರಂದು ಲೋಕಾಯುಕ್ತರಿಂದ ಜನಸಂಪರ್ಕ ಸಭೆ
ಎರಡನೆಯ ಅವಧಿಯಲ್ಲಿ ‘ಭಾಷಾಭ್ಯಾಸ’ ವಿಷಯ ಕುರಿತು ವಿಷಯ ಮಂಡನೆ ಮಾಡಿದ ಭಾಷಾ ವಿಜ್ಞಾನಿಗಳಾದ ಡಾ.ಎ.ಮುರಗೆಪ್ಪ ಅವರು ಮಾತನಾಡಿ. ಇತ್ತಿಚೀಗೆ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಾಚೀನ ಸಾಹಿತ್ಯದ ಅಧ್ಯಯನ ತುಂಬಾ ಉಪೇಕ್ಷೆಗೆ ಒಳಗಾಗುತ್ತಿದೆ. ಅದಕ್ಕಾಗಿ ಪ್ರಾಚೀನ ಪಠ್ಯಗಳ ಪ್ರಸ್ತುತತೆ ಕೃತಿ ವಾಚನ, ಕಥಾ ನಿರೂಪಣೆ, ಪಾಠ ಸಮಸ್ಯೆ ಬಿಡಿಸುವುದು ಹಾಗೂ ಕೃತಿ, ಭಾಷೆ, ಶೈಲಿ, ಛಂದಾಸ್ಸಾಧಿಗಳನ್ನು ಹಾಗೂ ಕೃತಿಯ ಸಾಂಸ್ಕøತಿಕ ಪರಿಸರ ಹಾಗೂ ಅನ್ಯನ್ಯತೆಯನ್ನು ಗುರುತಿಸುವುದು ಆ ಮೂಲಕ ಶಿಕ್ಷಕ ಮತ್ತು ವಿದ್ಯಾರ್ಥಿಗಳಲ್ಲಿ ಹಳಗನ್ನಡ ಸಾಹಿತ್ಯವನ್ನು ಓದುವ ಗ್ರಹಿಸುವ ಮತ್ತು ಆಸಕ್ತಿ ಹೆಚ್ಚಿಸುವ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಹಳಗನ್ನಡ ಸಾಹಿತ್ಯ ಬೋಧನೆಯಲ್ಲಿ ಭಾಷಿಕತೆಯ ಅಂಶಗಳನ್ನು ಅರಿತುಕೊಂಡು ಶಿಕ್ಷಕರು ಪಾಠ ಮಾಡಿದರೆ ಮಕ್ಕಳಲ್ಲಿ ಭಾಷಾ ಜ್ಞಾನ ಸಂಪತ್ತು ಬೆಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಬಿರದ ನಿರ್ದೇಶಕರಾದ ಡಾ.ವೀರೇಶ ಬಡಿಗೇರ, ಉಪ ಪ್ರಾಚಾರ್ಯರಾದ ಮಹಾಂತೇಶ ನರಸನಗೌಡ್ರ. ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಜಮಖಂಡಿ ಕಸಾಪ ತಾಲೂಕ ಅಧ್ಯಕ್ಷ ಸಂತೋಷ ತಳಕೇರಿ, ಸಂಗಮೇಶ ಬಡಿಗೇರ, ಹಾಗೂ ನಾಡಿನ ವಿವಿಧ ಭಾಗಗಳಿಂದ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.






