Bagaljote News | ಗ್ರಾ.ಪಂ ಉಪ ಚುನಾವಣೆ : ಪ್ರತಿಬಂಧಕಾಜ್ಞೆ ಜಾರಿ – ಜಾನಕಿ ಕೆ.ಎಂ ಆದೇಶ

Enforcement of restraining order image

ಬಾಗಲಕೋಟೆ: ಗ್ರಾಮ ಪಂಚಾಯಿತಿ ಉಪ ಚುನಾವಣೆ ಸಂಬಂಧಿಸಿದಂತೆ ಚುನಾವಣೆ ಜರುಗಲಿರುವ ಪ್ರದೇಶಗಳಲ್ಲಿ ನವೆಂಬರ 23 ರಂದು ಮತದಾನ ದಿನದ ನಿಮಿತ್ಯ ಪ್ರತಿಬಂಧಕಾಜ್ಞೆ ಜಾರಿ Enforcement of restraining order ಮಾಡಿ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ದಂಡಾಧಿಕಾರಿ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.

ಮತದಾನ ನಡೆಯುವ ಪ್ರದೇಶಗಳಲ್ಲಿ 5 ವ್ಯಕ್ತಿಗಳಿಗಿಂತ ಹೆಚ್ಚಿನ ಜನರು ಜೊತೆಗೂಡಿ, ಗುಂಪಾಗಿ ಸಂಚಿರಿಸುವಂತಿಲ್ಲ. ಸಾರ್ವಜನಿಕ ಸಭೆ ನಡೆಸುವುದು, ಶಾಂತತೆಗೆ ಭಂಗ ಉಂಟು ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರುವುದು ಹಾಗೂ ಅಹಿತಕರ ಘಟನೆ ನಡೆಯದಂತೆ ಮತದಾನ ಕೇಂದ್ರದ ಸುತ್ತಮುತ್ತ 100 ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಮತದಾನ ಮುಕ್ತಾಯವಾಗುವವರೆಗೆ ಪ್ರತಿಬಂಧಕಾಜ್ಞೆ Enforcement of restraining order ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Bagalkote News | 20 ರಂದು ಲೋಕಾಯುಕ್ತರಿಂದ ಜನಸಂಪರ್ಕ ಸಭೆ

  • ಶಸ್ತ್ರಾಸ್ತ್ರಗಳ ಜಮೆಗೆ ಸೂಚನೆ
    ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಚುನಾವಣೆ ನಡೆಯುವ ಗ್ರಾ.ಪಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಲೈಸನ್ಸ್ ದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದುಗುಂಡುಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಿ ಸೂಕ್ತ ರಶೀದಿ ಪಡೆಯತಕ್ಕದ್ದು. ನವೆಂಬರ 26ರ ನಂತರ ವಾಪಸ ಪಡೆಯುವಂತೆ ಆದೇಶ ಹೊರಡಿಸಿದ್ದಾರೆ.
  • ಮದ್ಯ ಮಾರಾಟ, ಸಾಗಾಣಿಕೆ ನಿಷೇಧ
    ನವೆಂಬರ 23 ರಂದು ನಡೆಯಲಿರುವ ಗ್ರಾ.ಪಂ ಉಪ ಚುನಾವಣೆ ನಿಮಿತ್ಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ನವೆಂಬರ 21 ರಾತ್ರಿ 12 ಗಂಟೆಯಿಂದ ನವೆಂಬರ 23 ರ ರಾತ್ರಿ 12 ಗಂಟೆವರೆಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀರ, ಬ್ರ್ಯಾಂಡಿ ಹಾಗೂ ಐ.ಎಂ.ಎಲ್ ಲಿಕ್ಕರ ಮಾರಾಟ ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿ ಆದೇಶಿಸಿದ್ದಾರೆ.
  • ಸಂತೆ, ಜಾತ್ರೆ, ಉತ್ಸವ ನಿಷೇಧ
    ಗ್ರಾಮ ಪಂಚಾಯತ ಉಪ ಚುನಾವಣೆ ಹಿನ್ನಲೆಯಲ್ಲಿ ನವೆಂಬರ 23 ರಂದು ನಡೆಯುವ ಗ್ರಾ.ಪಮ ವ್ಯಾಪ್ತಿಯ ಸಂತೆ, ಜಾತ್ರೆ, ದನಗಳ ಜಾತ್ರ, ಉತ್ಸವ ಇತ್ಯಾದಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »