Vijayapura News | ಶಿಸ್ತು, ಸಹಕಾರ, ಸೇವಾ ಮನೋಭಾವನೆ ಮೂಡಿಸುವಲ್ಲಿ ಎನ್.ಎಸ್.ಎಸ್. ಶಿಬಿರ ಉಪಯುಕ್ತವಾಗಿದೆ- ಪ್ರೊ. ದೇಶಪಾಂಡೆ

N.S.S.Camp image

ವಿಜಯಪುರ: ಸಾಮಾಜಿಕ ಮತ್ತು ಪೌರ ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳಲು ಎನ್.ಎಸ್.ಎಸ್. N.S.S.Camp ಶಿಬಿರಗಳು ಸಹಕಾರಿಯಾಗಿವೆ. ಸಮಾಜದ ಸಮಸ್ಯೆ ಅರಿತು, ಗ್ರಾಮೀಣ ಸೇವೆ ಮಾಡುವ ಅವಕಾಶವನ್ನು ಎನ್.ಎಸ್.ಎಸ್. ನೀಡುತ್ತದೆ. ಶಿಸ್ತು, ಸೌಹಾರ್ದತೆ, ಸಹಕಾರ, ಸೇವಾ ಮನೋಭಾವನೆ ಮೂಡಿಸಲು ಎನ್.ಎಸ್.ಎಸ್. ಶಿಬಿರದ ಪಾತ್ರ ತುಂಬಾ ಇದೆ. ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿ.ಡಿ.ಈ. ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಎ.ಡಿ. ದೇಶಪಾಂಡೆ ಹೇಳಿದರು.

ಇದನ್ನೂ ಓದಿ: Vijayapura News | ಕಬ್ಬು ನಿಯಂತ್ರಣ ಆದೇಶ 1966 ಹಾಗೂ 5a ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಆಗ್ರಹ | ಕರ್ನಾಟಕ ಕಬ್ಬು ಬೆಳೆಗಾರರ ಸಂಘ

ನಗರದ ಬಿಡಿಈ ಸಂಸ್ಥೆಯ ಮಹಿಳಾ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. N.S.S.Camp  ಘಟಕ-1 ಮತ್ತು 2 ವತಿಯಿಂದ ಜಾಲಗೇರಿಯ ಸುಕ್ಷೇತ್ರ ಮಮ್ಮುಟಿ ಗುಡ್ಡದಲ್ಲಿ ಹಮ್ಮಿಕೊಂಡ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ರಸ್ತೆ ಸ್ವಚ್ಚತೆ ಪರಿಸರ ರಕ್ಷಣೆ, ಭಾವೈಕ್ಯತೆ ಮೂಡಿಸುವ ಎನ್.ಎಸ್.ಎಸ್.ದ ಉದ್ದೇಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ. ಜಿ.ಎನ್. ದೇಶಪಾಂಡೆ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಪಾತ್ರ ವಿಶೇಷವಾಗಿದೆ. ವೈಯಕ್ತಿಕ ಸ್ವಚ್ಚತೆ ಪರಿಸರ ಪ್ರೀತಿ, ನಾಯಕತ್ವ ಗುಣಗಳನ್ನು ಶಿಬಿರಗಳು ನೀಡುತ್ತವೆ. ಪ್ರತಿ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸುವುದು ಅವಶ್ಯವಾಗಿದೆ ಎಂದರು.

ಇದನ್ನೂ ಓದಿ: Vijayapura News | ಮಹಿಳಾ ವಿವಿ: ಗ್ರಾಫಿಕ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್‍ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

N.S.S.Camp  ಎನ್.ಎಸ್.ಎಸ್. ಘಟಕ-1 ರ ಕಾರ್ಯಕ್ರಮ ಅಧಿಕಾರಿ ಪ್ರದ್ಯುಮ್ನ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜ್ಯ ಲಕ್ಕಪ್ಪ ಒಡೆಯರ ಸಾನಿಧ್ಯ ವಹಿಸಿದ್ದರು. ಪ್ರೊ. ಎಸ್.ಎಂ. ಕೊರ್ತಿ, ಅಶ್ವಿನಿ ಹಿರೇಕುರಬರ ವೇದಿಕೆ ಮೇಲಿದ್ದರು.

ಪ್ರೊ. ಮಯೂರ ತಿಳಗುಳಕರ ಸ್ವಾಗತಿಸಿದರು. ಕುಮಾರಿ ಸ್ನೇಹಾ ಸರಾಫ ನಿರೂಪಿಸಿದರು. ಎನ್.ಎಸ್.ಎಸ್. ಘಟಕ-2 ರ ಕಾರ್ಯಕ್ರಮ ಅಧಿಕಾರಿ ಪ್ರೊ. ಶೈಲಜಾ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಕೃಷ್ಣಾ ಕುಲಕರ್ಣಿ, ಸುನಂದಾ ಪವಾರ ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »