Vijayapura News | ಕಬ್ಬು ನಿಯಂತ್ರಣ ಆದೇಶ 1966 ಹಾಗೂ 5a ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಆಗ್ರಹ | ಕರ್ನಾಟಕ ಕಬ್ಬು ಬೆಳೆಗಾರರ ಸಂಘ

Karnataka Sugarcane Growers Association image

ವಿಜಯಪುರ: ಕರ್ನಾಟಕ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ಸಕ್ಕರೆ ನಿಯಂತ್ರಣ ಕರಡು ಆದೇಶ 2024ನ್ನು ವಾಪಸ್ ಪಡೆದು ಈಗಾಗಲೇ ಅಸ್ತಿತ್ವದಲ್ಲಿರುವ ಕಬ್ಬು ನಿಯಂತ್ರಣ ಆದೇಶ 1966 ಹಾಗೂ 5a ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಸಮರ್ಪಕವಾಗಿ ಜಾರಿಗೊಳಿಸಲು ಕರ್ನಾಟಕ ಕಬ್ಬು ಬೆಳೆಗಾರರ ಸಂಘ Karnataka Sugarcane Growers Association ಆಗ್ರಹಿಸಿ ಅಪರ ಜಿಲ್ಲಾ ಅಧಿಕಾರಿಗಳಾದ ಸೋಮನಿಂಗ ಗೆನ್ನೂರ ಅವರಿಗೆ ಮತ್ತು ಲೋಕಸಭಾ ಸದಸ್ಯರಾದ ರಮೇಶ ಜಿಗಜಿಣಗಿ ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: Vijayapura News | ಮಹಿಳಾ ವಿವಿ: ಗ್ರಾಫಿಕ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್‍ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅಣ್ಣಾರಾಯ ಈಳಗೇರ ಮಾತನಾಡಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಕಬ್ಬು ಬೆಳೆಗಾರರ ಕೊರಳಿಗೆ ಉರುಳಾಕಲು ಹೊರಟಿದೆ ಬಿಜೆಪಿಯ ಮೂಲ ನೀತಿಯಾದ ಬಂಡವಾಳ ಶಾಹಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ 2024ರ ಪ್ರಸ್ತಾವಿತ ಸಕ್ಕರೆ ನಿಯಂತ್ರಣ ಕರಡು ಆದೇಶ ವನ್ನು ಜಾರಿ ಮಾಡಲು ಹೊರಟಿದೆ ಈ ಕರಡು ನೀತಿಯ ಬಗ್ಗೆ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಬಂಧುಗಳ ಜೊತೆ ಚರ್ಚೆ ನಡೆಸದೆ ಅವರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಕ್ಕರೆ ಕಾರ್ಖಾನೆಗಳು ಮತ್ತು ರಾಜ್ಯ ಸರ್ಕಾರಗಳ ಸಂಬಂಧಿತ ಸಕ್ಕರೆ ಇಲಾಖೆಯ ಅಭಿಪ್ರಾಯಗಳ ಆಧಾರದ ಮೇಲೆ ನಿಲುವು ತೆಗೆದುಕೊಂಡಿರುವುದು ಖಂಡನೀಯ.

Karnataka Sugarcane Growers Association ಈಗಾಗಲೇ ಅಸ್ತಿತ್ವದಲ್ಲಿರುವ ಕಬ್ಬು ನಿಯಂತ್ರಣ ಆದೇಶ 1966 ರಿಂದ ಕಬ್ಬು ಬೆಳೆಗಾರರಿಗೆ ಕೆಲವು ಪ್ರಯೋಜನಕಾರಿಯಾದ ನಿಬಂಧನೆಗಳನ್ನು ಕೇಂದ್ರ ಸರ್ಕಾರವು ಒಂದೊಂದಾಗಿ ಅಳಿಸುತ್ತಿರುವುದು ತಿಳಿಯುತ್ತದೆ ಈಗಾಗಲೇ ಕಬ್ಬಿನ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರುವ ಲಾಭದಲ್ಲಿ ಹೆಚ್ಚುವರಿ ಬೆಲೆಯನ್ನು ಪಡೆಯಲು ಅನುವು ಮಾಡಿಕೊಡುವ ಸೆಕ್ಷನ್ ಕಾಯ್ದೆಯಿಂದ ತೆಗೆದುಹಾಕಲಾಗಿದೆ ಕಬ್ಬು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರಗಳು ರಾಜ್ಯ ಸಲಹೆ ಬೆಲೆಯನ್ನು ಘೋಷಿಸಿಸುವ ಕಬ್ಬು ನಿಯಂತ್ರಣ ಆದೇಶ 1966ರ ನಿಬಂಧನೆಗಳನ್ನು ಸರ್ಕಾರ ರದ್ದು ಮಾಡಲು ಹೊರಟಿದೆ.

ಇದನ್ನೂ ಓದಿ: Vijayapura News | ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ₹52 ಕೋಟಿ ವೆಚ್ಚದಲ್ಲಿ 10 ಕಿ.ಮೀ ಕೊಳವೆ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ

ಸಕ್ಕರೆ ಉದ್ಯಮಪತಿಗಳ ಹಿತ ಕಾಯಲು ಕೇಂದ್ರ ಸರ್ಕಾರದ ನರೇಂದ್ರ ಮೋದಿ ಸರ್ಕಾರ ಶೇಕಡ 8.5ಕ್ಕೆ ಎಫ್‍ಆರ್‍ಪಿ ನಿಗದಿಯಾಗುತ್ತಿದದ್ದನ್ನು ಶೇಕಡ 10.25 ಕ್ಕೆ ಸಕ್ಕರೆ ಇಳುವರಿಗೆ ಹೆಚ್ಚಿಸಿ ಎಫ್‍ಆರ್‍ಪಿ ನಿಗದಿ ಮಾಡಿದೆ ಶೇಕಡಾ 1.75 ಇಳುವರಿ ಪಸೆರ್ಂಟಿಗೆ 581 ಕಡಿಮೆಯಾಗುತ್ತದೆ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಮತ್ತು ಎಥೆನಾಲ್ ಇತ್ಯಾದಿ ಉತ್ಪನ್ನಗಳನ್ನು ಮಾರಾಟಮಾಡಲು ಕೇಂದ್ರ ಸರ್ಕಾರ ಅನುಮತಿ ಪಡೆಯಬೇಕು ಎಂಬ ಷರತ್ತನ್ನು ಸಕ್ಕರೆ ನಿಯಂತ್ರಣ ಆದೇಶ 2024ರ ಮಸೂದೆಯಲ್ಲಿ ಸೇರಿಸಲಾಗಿದೆ ಬ್ಯಾಂಕುಗಳಿಗೆ ಅಡಮಾನ ಇಟ್ಟಿರುವ ಸಕ್ಕರೆಯ ದಾಸ್ತಾನು ಮಾರಾಟ ಮಾಡಲು ಕೂಡ ಈ ಮಸೂದೆಯಲ್ಲಿ ಕೇಂದ್ರ ಸರ್ಕಾರದಿಂದ ಪೂರ್ವ ಅನುಮತಿ ಪಡೆಯುವ ಷರತ್ತನ್ನು ವಿಧಿಸಲಾಗಿದೆ.

ಅಲ್ಲದೆ ಕಬ್ಬು ಬೆಳಗಾರರು ಸರಬರಾಜು ಮಾಡಿದ ಕಬ್ಬಿಗೆ 14 ದಿನದೊಳಗೆ ಹಣಪಾವತಿ ಮಾಡುವ ಕಡ್ಡಾಯ ಕಾನೂನು 1966 ರ ಕಾಯ್ದೆಯ ನಿಬಂಧನೆಯನ್ನು ರದ್ದು ಮಾಡುತ್ತಿದೆ ಕಾರ್ಖಾನೆ ಮಾಲೀಕರು ತಾವು ನಿರ್ಧರಿಸಿದ ರೀತಿಯಲ್ಲಿ ರೈತರಿಗೆ ಹಣ ಪಾವತಿ ಮಾಡುವ ಅವಕಾಶವನ್ನು ನೀಡಿದೆ ಇದು ದೇಶದ ಐದು ಕೋಟಿ ಕಬ್ಬು ಬೆಳೆಗಾರರ ಹಿತಾಸಕ್ತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಭೀಮರಾಯ ಪೂಜಾರಿ ಮಾತನಾಡಿ ಈ ಕಾಯ್ದೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು ರಾಜ್ಯ ಸರ್ಕಾರಗಳ ಹಕ್ಕಗಳನ್ನು ಕಸಿದುಕೊಳ್ಳಬಹುದು ಮತ್ತು ಕೇಂದ್ರ ಸರ್ಕಾರಕ್ಕೆ ರಾಜ್ಯಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು.

ಇದನ್ನೂ ಓದಿ: Vijayapura News | ಖಾಲಿ ಉಳಿದ ಸೀಟುಗಳ ಭರ್ತಿಗಾಗಿ ನವೆಂಬರ್ 15ರ ವರೆಗೆ ಪ್ರವೇಶಾತಿ

ಸಕ್ಕರೆ ಮಾರಾಟಕ್ಕೂ ಪ್ರತಿ ತಿಂಗಳು ಮಾರಾಟದ ಪ್ರಮಾಣದ ನಿಗದಿ ಮಾಡುತ್ತದೆ ಕೇಂದ್ರ ಸರ್ಕಾರ ತನಗೆ ಇಷ್ಟ ಬಂದ ಕಾರ್ಖಾನೆಗಳಿಗೆ ಮಾತ್ರ ಅನುಕೂಲ ಕಲ್ಪಿಸಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಡೆಗಣಿಸಿ ರಾಜಕೀಯ ಕಾರಣದಿಂದ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಕಬ್ಬು ಬೆಳಗಾರರ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಕೇಳಬೇಕು ಅವರ ಜೊತೆ ಸೌಹಾರ್ದತವಾಗಿ ಚರ್ಚೆ ನಡೆಸಬೇಕು ಈ ಕರಡು ಮಸೂದೆ ವಾಪಸ್ ಪಡೆಯಬೇಕು ಹಾಗೂ ಶೇಕಡ 9.50 ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಗೆ 5,500 ಎಫ್ ಆರ್ ಪಿ ನಿಗದಿಪಡಿಸಬೇಕು

ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಸಕ್ಕರೆ ಅಭಿವೃದ್ಧಿ ಮಂಡಳಿಯಿಂದ ಬಡ್ಡಿ ರಹಿತ ಸಾಲ ನೀಡಬೇಕು ಈ ಮೇಲಿನ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ತಾವುಗಳು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಒತ್ತಾಯ ಮಾಡುವುದರ ಮುಖಾಂತರವಾಗಿ ಕಬ್ಬು ಬೆಳೆಗಾರರ ಹಿತವನ್ನು ರಕ್ಷಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಗೋಪಾಲ್ ಶಿವಗದ್ದಿಗೆ. ಚಿದಾನಂದ ಬೆಳ್ಳಿನವರ. ಮಲ್ಲಿಕಾರ್ಜುನ ಸಾವುಕಾರ. ಪವಾಡಪ್ಪ ಸಾವುಕಾರ. ಸಿದ್ದಣ್ಣ ಗಡಗಿ. ಮಹೆಬೂಬ ಕಕ್ಕಳಮೇಲಿ. ಸೈಫನಸಾಬ ಭಾಗವಾನ. ಸಿದ್ದಣ್ಣ ಕುಂಬಾರ. ಮುರಿಗೆಪ್ಪ ಕೊಳಕಾರ. ಮಹಾಂತೇಶ್ ಶಿಂಗಾಡಿ. ಮಹಿಬೂಬ ಕಕ್ಕಳಮೇಲಿ ಮತ್ತಿತರರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »