ಬಾಗಲಕೋಟೆ: Kannada Rajyotsava ಕರ್ನಾಟಕ ಸಂಭ್ರಮ-50ರ ಹಿನ್ನಲೆಯಲ್ಲಿ “ಕನ್ನಡ ಸಾಹಿತ್ಯ ಹಾಗೂ ನಾಡ-ನುಡಿಗೆ ಬಾಗಲಕೋಟೆ ಜಿಲ್ಲೆಯ ಕೊಡುಗೆ” ವಿಷಯ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಕನ್ನಡ ನಾಡು ನುಡಿಯ ಕುರಿತು ಕನ್ನಡ ಗೀತೆಗಳ ಸಮೂಹ ಗೀತ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: Bagalkote News | ಉದ್ಯೋಗಂ ಮಾನವ ಲಕ್ಷಣಂ : ಆರ್ಥಿಕ ಸಭಲತೆಗೆ ಉದ್ಯೊಗವೇ ಮುಖ್ಯ ಆಯುಧ : ಕೆ.ಎಂ. ಜಾನಕಿ
ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಪ್ರಬಂಧವು ಎ4 ಅಳತೆಯ ಕಾಗದದಲ್ಲಿ 500 ಪದಗಳಿಗೆ ಮೀರದಂತೆ ಇರಬೇಕು. ಸ್ವ-ಹಸ್ತಾಕ್ಷರದಲ್ಲಿ ಕನ್ನಡದಲ್ಲಿ ಬರೆಯಬೇಕು. ಪುಟದ ಕೊನೆಯಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಹಾಗೂ ಮೊ.ನಂಬರ ಬರೆದು ಪ್ರಬಂಧಗಳ ಪ್ರತಿಗಳನ್ನು ಸಲ್ಲಿಸಲು ಕೊನೆ ದಿನ ಅಕ್ಟೋಬರ 25 ಆಗಿದೆ.
Kannada Rajyotsava ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಸಮೂಹ ಗೀತ ಗಾಯನ ಸ್ಪರ್ಧೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನ ಅಕ್ಟೋಬರ 27 ಆಗಿದ್ದು, ಸ್ಪರ್ಧೆ ಅಕ್ಟೋಬರ 29 ರಂದು ಮಧ್ಯಾಹ್ನ 12 ಗಂಟೆಗೆ ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ನಡೆಯಲಿದೆ ಪ್ರಬಂಧದ ಪ್ರತಿ ಸಲ್ಲಿಸಲು ಹಾಗೂ ಹೆಸರು ನೋಂದಣಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಾಭವನ, ಸಾಂಸ್ಕøತಿಕ ಸಮುಚ್ಚಯ, ಸೆಕ್ಟರ ನಂ.19, 6ನೇ ರಸ್ತೆ, ನವನಗರ, ಬಾಗಲಕೋಟೆ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-200500ಗೆ ಸಂರ್ಕಿಸಬಹುದಾಗಿದೆ.
ಇದನ್ನೂ ಓದಿ: Vijayapura News | ಲಯನ್ಸ್ ವೇದಿಕೆಯಿಂದ ಹಿರಿಯ ನಾಗರಿಕರಿಗೆ ಸನ್ಮಾನ






