Vijayapura News | ಸಚಿವ ಜಮೀರ ಅಹಮದ ಖಾನ್‍ಗೆ ಅಭಿಮಾನಿಗಳಿಂದ ಸನ್ಮಾನ

Jamira Ahmad Khan image
ವಿಜಯಪುರ: ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಸಚಿವರಾದ ಜಮೀರ ಅಹಮದ ಖಾನ Jamira Ahmad Khan ಅವರು ವಿಜಯಪುರಕ್ಕೆ ವಕ್ಫ್  ಅದಾಲತ್ ಕಾರ್ಯಕ್ರಮಕ್ಕೆ ಆಗಮಿಸಿರುವ ವೇಳೆ ಗಣೇಶ ನಗರದ 21 ನೇ ವಾರ್ಡಿನ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು ಅವರನ್ನು ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.
ಇಬ್ರಾಹಿಂಪುರದ ಸ್ಲಂ ನಿವಾಸಿ ಮಹಿಳೆಯರು ಸುಮಾರು ವರ್ಷಗಳಿಂದ ಇಲ್ಲಿಯೇ ವಾಸವಿದ್ದು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು, ಸರಕಾರದ ಯಾವುದೇ ಯೋಜನೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ನಮ್ಮ ಜೀವನಕ್ಕೆ ನಿರ್ದಿಷ್ಟವಾದ ಸೂರು ಇಲ್ಲದೇ ಅತಂತ್ರದಲ್ಲಿ ಬದುಕು ಸಾಗಿಸುತ್ತಿದ್ದೆವೆ ನಮ್ಮ ಮುಂದಿನ ಪೀಳಿಗೆ ಕೂಡಾ ಅತಂತ್ರದಲ್ಲಿ ಬದುಕು ಸಾಗಿಸುವಂತಾಗಿದೆ, ಆದ್ದರಿಂದ ಕೂಡಲೇ ಹಕ್ಕುಪತ್ರ ನೀಡಲು ಒತ್ತಾಯಿಸಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: Vijayapura News | ಎಸ್ ಎಸ್ ಕಾಲೇಜಿನ ಬಾಲಕಿಯರು ಖೋ ಖೋ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಜಮೀರ ಅಹಮದ ಖಾನ Jamira Ahmad Khan ಅವರು ನನಗೆ ಬಡವರು ಹಾಗೂ ಸ್ಲಂ ನಿವಾಸಿಗಳ ಕಷ್ಟ ಗೊತ್ತಿದೆ ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು  ಶೀಘ್ರದಲ್ಲಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ ಮುಖಂಡರಾದ ಅಬ್ದಲ್ ಹಮೀದ ಮುಶ್ರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಮಲ್ಲ ಸಾರವಾಡ ಯುವ ಧುರಿಣರಾದ ಸಲೀಂ ಕಲಾದಗಿ, ಜಿಲ್ಲಾ ಕಿಸಾನ ಕಾಂಗ್ರೆಸ ಉಪಾಧ್ಯಕ್ಷರಾದ ಚನ್ನಬಸಯ್ಯ ಹಿರೇಮಠ, ಕಾರ್ಯದರ್ಶಿ ಪ್ರದೀಪ ಮಿಸ್ಕಿನ್, ಅಶೋಕ ಭಜಂತ್ರಿ, ಈಶ್ವರ ಹೂಗಾರ, ರಾಮನಗೌಡ ಪಾಟೀಲ, ಕಲ್ಲಪ್ಪ ಪಾರಶೆಟ್ಟಿ, ತಿಪ್ಪಣ್ಣ ಕಮಲದಿನ್ನಿ, ಶಂಕರ ಭಜಂತ್ರಿ, ಚನ್ನು ಕಟ್ಟಿಮನಿ, ವಾಸೀಂ ಇನಾಮದಾರ, ರಂಗವ್ವ ಕಾಖಂಡಕಿ, ಗೀತಾ ಮಸೂತಿ, ಶಾರದಾ ಭಜಂತ್ರಿ, ದೀಪಾ ಬಾವಲತಿ, ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: Bagalkote News | ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಕಬಡ್ಡಿ ಪಂದ್ಯಾವಳಿ ಕಬಡ್ಡಿ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಜಾನಕಿ ಚಾಲನೆ


Share the Post:

ಇತ್ತೀಚಿನ ಸುದ್ದಿಗಳು