IPL ಪಂದ್ಯಕ್ಕೆ ಬೆಟ್ಟಿಂಗ್: ವಿಜಯಪುರದಲ್ಲಿ ಯುವಕ ಅರೆಸ್ಟ್!

Vijayapura IPL betting case

ವಿಜಯಪುರ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟಿ-20 ಕ್ರಿಕೆಟ್ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ Vijayapura IPL betting case ನಡೆಸುತ್ತಿದ್ದ ಯುವಕನನ್ನು ಗೋಲಗುಮ್ಮಜ್ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಮೇ 08ರಂದು ರಾತ್ರಿ ಸುಮಾರು 8.50 ಗಂಟೆ ಸುಮಾರಿಗೆ ವಿಜಯಪುರ ನಗರದ ಸಿಂದಗಿ ನಾಕಾ ಸಮೀಪ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತ ಸಚಿನ್ ಮಲ್ಲಪ್ಪ ಮಾದರ (24), ಇಂಡಸ್ಟ್ರಿಯಲ್ ಏರಿಯಾ ನಿವಾಸಿ, ಐಪಿಎಲ್ ಟಿ-20 ಪಂದ್ಯಾವಳಿಯ Delhi Capitals ಹಾಗೂ Kolkata Knight Riders ತಂಡಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಗೆಲುವು-ಸೋಲಿನ ಆಧಾರದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Vijayapura IPL betting case ಗೋಲಗುಮ್ಮಜ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಡಿ. ಘೋರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿತನಿಂದ ₹700 ನಗದು, ಒಂದು ಬಿಳಿ ಹಾಳೆ ಹಾಗೂ ಒಂದು ನೀಲಿ ಮಸಿ ಪೆನ್ ಜಪ್ತಿ ಮಾಡಲಾಗಿದೆ.

ಈ ಸಂಬಂಧ ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.67/2026 ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(VI) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪಿಎಸ್‌ಐ ಎಂ.ಡಿ. ಘೋರಿ ಅವರ ದೂರಿನ ಮೇರೆಗೆ ಮೇ 09ರಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share the Post:

ಇತ್ತೀಚಿನ ಸುದ್ದಿಗಳು