Vijayapura News : ಜಾನಪದ ಗ್ರಾಮೀಣರ ಉಸಿರು : ಹಾಸಿಂಪೀರ ವಾಲಿಕಾರ

Folk literature program image

ವಿಜಯಪುರ: Folk literature ಜಾನಪದ ಸಾಹಿತ್ಯ ಗ್ರಾಮೀಣರ ಉಸಿರಾಗಿದೆ. ಕನ್ನಡ ಸಾಹಿತ್ಯಕ್ಕೆ ಜಾನಪದ ಕೊಡುಗೆ ಅಪಾರ. ಗ್ರಾಮೀಣರ ಬದುಕುವ ಶೈಲಿ ಬದಲಾಗುತ್ತಿರುವದರಿಂದ ಜಾನಪದ ಕಲೆಗಳು ನಶಿಸಿ ಹೋಗುತ್ತಿರುವದು ಆತಂಕದ ವಿಷಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಗಜಾನನ ತರುಣ ಸಂಘ ಕಾಖಂಡಕಿ ಗ್ರಾಮದಲ್ಲಿ ನಾಡದೇವತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದ ನಮಗೆ ಮಾನವೀಯ ಮೌಲ್ಯಗಳಿಂದ ಬದುಕು ತೋರಿಸಿಕೊಟ್ಟ ದೆ. ಪಠ್ಯಕ್ರಮದಲ್ಲಿ ಜಾನಪದ ಸಾಹಿತ್ಯದ ವಿಷಯಗಳನ್ನು ಅಳವಡಿಸುವ ಅತ್ಯವಶ್ಯಕ ಎಂದರು.ಜಾನಪದ. ವಿದ್ವಾಂಸ, ಬಸವನ ಬಾಗೆವಾಡಿ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ ಗ್ರಾಮೀಣ ರು ಜಾನಪದ ಸಾಹಿತ್ಯದ ಮಾಲಿಕರು.

ಇದನ್ನೂ ಓದಿ: Vijayapura News | ಗಮಕ ಕಲೆ ಪಠ್ಯದಲ್ಲಿ ಸೇರಿಸಿ – ಮಕ್ಕಳ ಸಾಹಿತಿ ಜಂಬುನಾಥ್ ಕಂಚ್ಯಾಣಿ

Folk literature ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಜಾನಪದ ಕಲೆಗಳ ಪಾತ್ರವನ್ನು ನೋಡುತ್ತೇವೆ ಎಂದ ಅವರು ಹಂತಿಯ ಪದ, ಬಜನಾ ಪದಗಳನ್ನು ಹಾಡಿ ಜನ ಸಮೂಹವನ್ನು ರಂಜಿಸಿದರು. ಜಾನಪದ ಗಾಯಕಿ ಶಿವಲೀಲಾ ಮುರಾಳ ಮಾತನಾಡಿ ಜಾನಪದ ತಾಯಿಯ ಮಡಿಲಲ್ಲಿ ಜನ್ಮ ತಾಳಿದೆ. ಜಾನಪದ ಸಾಹಿತ್ಯ ಸಾಂಸ್ಕøತಿಕ ಹಿರಿಮೆ ಸಾರುವದಾಗಿದೆ ಎಂದ ಅವರು ಅನೇಕ ಜಾನಪದ ಗೀತೆಗಳನ್ನು ಜನರ ಮನಸ್ಸನ್ನು ಗೆದ್ದುಕೊಂಡರು.

ಸಾಹಿತಿ ಮೆಹತಾಬ ಕಾಗವಾಡ ತತ್ವ ಪದ ಹಾಗೂ ದಾಸರ ಪದಗಳನ್ನು ಹಾಡಿದರು ಚಿಕ್ಕಾಲಗುಂಡಿ ಶರಣಾನಂದ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು ಸಮಾರಂಭದ ಅಧ್ಯಕ್ಷತೆ ಪಿ ಕೆ ಪಿ ಎಸ್ ಮಾಜಿ ಅಧ್ಯಕ್ಷ ರಾಮನಗೌಡ ಪಾಟೀಲ ವಹಿಸಿದ್ದರು. ಕೆ ಪಿ ಸಿ ಸಿ ರಾಜ್ಯ ಪ್ರಚಾರ ಸಂಯೋಜಕ ಅಲಿಸಾಬ ಖಡಕೆ, ಗ್ರಾಮ ಪಂಚಾಯತ ಅಧ್ಯಕ್ಷ ಪದ್ಮಾವತಿ ಗೌಡಪ್ಪಗೋಳ ವೇದಿಕೆಯ ಮೇಲಿದ್ದರು, ಗಂಗಾಧರ ಬಡಿಗೇರ, ಸಂಬಾಜಿ, ಈರಣ್ಣ ಮಾಡಲಗಿ, ಶೇಕಪ್ಪಾ ನಿಡೋಣಿ, ಅನಿಲ ನಾವಿ, ಲಕ್ಷ್ಮಣ ಹಾದಿಮನಿ, ಮಲ್ಲಯ್ಯ ಮಠಪತಿ, ಶಿವಾನಂದ ದಾನಿ, ಅಶೋಕ ಕೋರಿ, ಅಲ್ಲಾಬಕ್ಷ ಕುಡಚಿ, ಸುಖದೇವ ಯಕ್ಕೂಂಡಿ. ವಿಜಯಕುಮಾರ ತೇಲಿ. ಶಾನು ಬುರಾಡೆ ಬುಡ್ಡಾಸಾಬ ಭಾಗವಾನ. ಮಕಬುಲ್ ಬಂದುಗೋಳ. ಯಾಶೀನ ಇನಾಮದಾರ. ಮಸಾಕ ಅತ್ತಾರ ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು