ಕೊಳಗೇರಿ ಮಂಡಳಿ ಎಇಇ ಅಧಿಕಾರಿಯ ಬೇಜವಾಬ್ದಾರಿ

ವಿಜಯಪುರ: ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶಿವಾನಂದ ರಾಠೋಡ್ ಅವರಿಗೆ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳ ಪಟ್ಟಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಗೌಡಪ್ಪ ಬಡಿಗೇರ ಹೇಳಿದರು. ಸಮಸ್ಯೆಗಳು ಕೇಳಲು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಬೇಕು ಮತ್ತು ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳೆಲ್ಲವೂ ಆಲಿಸಿದ್ದೇನೆ, ಎಲ್ಲವೂ ಸುಸೂತ್ರ ವಾಗಿದೆ ಎಂದು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನಿಸುತಿದ್ದಾರೆ.ಯಾವ ಕೊಳಚೆ ಪ್ರದೇಶಗಳಿಗೂ ಬೇಟೆ ಕೊಟ್ಟು ವಾಸ್ತವ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಲಭ್ಯವಿರುವುದಿಲ್ಲ. ನಾನು ಕೂಡ […]
ವಿಜಯಪುರದಲ್ಲಿ ಏಪ್ರಿಲ್ ನಿಂದ ಭಾರತ ಜನಗಣತಿ-2027 (Census) ಆರಂಭ

ವಿಜಯಪುರ: ನಮ್ಮ ಜನಗಣತಿ, ನಮ್ಮ ಭವಿಷ್ಯ ಧ್ಯೇಯ ವಾಕ್ಯದಡಿ ಭಾರತ ಜನಗಣತಿ-2027ರ ಮೊದಲ ಹಂತದ ಜನಗಣತಿಯನ್ನು ಏಪ್ರಿಲ್ ನಿಂದ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ. ಮೊದಲ ಹಂತ -1 ಮನೆಪಟ್ಟಿ ಮತ್ತು ಮನೆ ಗಣತಿ (ಎಚ್‍ಎಲ್‍ಒ) ಏಪ್ರಿಲ್ 1ರಿಂದ 15ರವರೆಗೆ ಇದೇ ಮೊದಲ ಬಾರಿಗೆ ಸ್ವಯಂ ಗಣತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸ್ವಯಂ ಗಣತಿ ಐಚ್ಛಿಕವಾಗಿರುತ್ತದೆ. ಕುಟುಂಬಗಳು ಮಾತ್ರ ಸ್ವಯಂ ಗಣತಿ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ. […]
ಜನಗಣತಿಗೆ (Census) ನಿಯೋಜಿಸಿದ ಸಿಬ್ಬಂದಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಿ

ವಿಜಯಪುರ: ಜಿಲ್ಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಭಾರತ ಜನಗಣತಿ (Census) 2027ರ ಕಾರ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಗೆ ಸೂಕ್ತ ತರಬೇತಿ ನೀಡಿ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಜನಗಣತಿ 2027ರ ಜನಗಣತಿ ಕುರಿತು ಪೂರ್ವಭಾವಿ ಸಿದ್ದತೆ ಹಾಗೂ ತರಬೇತುದಾರರಿಗೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು ಗಣತಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಕಾಲ ಕಾಲಕ್ಕೆ ನೀಡುವ ತರಬೇತಿಯ ಪ್ರಯೋಜನೆ ಪಡೆದುಕೊಂಡು ಗಣತಿ ಕಾರ್ಯವನ್ನು ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯ ನಿರ್ವಹಿಸಬೇಕು. […]
Vijayapura: 3 ದಿನದಲ್ಲಿ ಸಮೀಕ್ಷೆ ವರದಿ: ಡಿಸಿ ಸೂಚನೆ

ವಿಜಯಪುರ: ಇತ್ತೀಚಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಕೈಗೊಂಡು ಮೂರು ದಿನದೊಳಗಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು. (Vijayapura) ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಳೆ ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ರಚಿಸಿ […]
ಅವಿಭಕ್ತ ಕುಟುಂಬಗಳು ನೈತಿಕ ಮೌಲ್ಯ ಕಾಪಾಡಿದ್ದವು: ಹಾಸಿಂಪೀರ ವಾಲಿಕಾರ

ವಿಜಯಪುರ: ಅವಿಭಕ್ತ ಕುಟುಂಬಗಳು ನೈತಿಕ ಮೌಲ್ಯ ಕಾಪಾಡಿಕೊಂಡಿದ್ದವು. ಕೌಟುಂಬಿಕ ಸೌಹಾರ್ದ ಸಂಬಂಧಗಳು ಗಟ್ಟಿಯಾಗಿದ್ದವು. ಅವಿಭಕ್ತ ಕುಟುಂಬದಲ್ಲಿ ಮಾನವೀಯ ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿಯ ಜೀವನ ನಡೆಸುತ್ತಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ ಅಥಣಿ ರಸ್ತೆಯ ನವರಸಪೂರ ಸೇನಾ ನಗರದಲ್ಲಿ ಮೂರನೇ ವಷ9ದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಅವಿಭಕ್ತ ಕುಟುಂಬದ ಮಹತ್ವ ಕುರಿತು ಉಪನ್ಯಾಸ ನೀಡಿದ ಹಾಸಿಂಪೀರ ವಾಲಿಕಾರ ಕುಟುಂಬದ ಹಿರಿಯ ಸದಸ್ಯರಿಗೆ […]
ಮೇ ಸಾಹಿತ್ಯ ಮೇಳ ವಿಜಯಪುರ ಬಳಗದಿಂದ ಪುಸ್ತಕ ಮೇಳದ ವಾಲ್ ಪೋಸ್ಟರ್ ಬಿಡುಗಡೆ
ವಿಜಯಪುರ : ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ವಾಲ್ ಪೋಸ್ಟರ್ ನ್ನು ಚಿಂತಕ ಬಸವರಾಜ ಸೂಳಿಭಾವಿ ಅವರು ಬಿಡುಗಡೆಗೊಳಿಸಿದರು.
ಜಾಹೀರಾತು ನೀತಿ ಸ್ಥಗಿತಕ್ಕೆ ಸಚಿವರಲ್ಲಿ ಮನವಿ
ವಿಜಯಪುರ: ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–2026ನ್ನು ಸ್ಥಗಿತಗೊಳಿಸಿ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಅಭಿವೃದ್ದಿಗೆ ಪೂರಕ ನೀತಿಯನ್ನು ಅಳವಡಿಸಿ ಅನುಷ್ಠಾನಕ್ಕೆ ತರಬೇಕೆಂದು ಸಚಿವರಾದ ಡಾ. ಎಂ.ಬಿ.ಪಾಟೀಲ ಹಾಗೂ ಶಿವಾನಂದ ಅವರಲ್ಲಿ ಜಿಲ್ಲಾ ಪತ್ರಿಕೆಗಳು ಮನವಿ ಸಲ್ಲಿಸಿತು. ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿವೆ. ಆದರೆ ಹೊಸ ಜಾಹೀರಾತು ನೀತಿಯಲ್ಲಿ ಈ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣ ವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ, ಈ ನೀತಿಯನ್ನು ರೂಪಿಸುವ ವೇಳೆ […]
ನವೋದಯ ಶಾಲೆಗೆ ಆಯ್ಕೆ…ಮಕ್ಕಳ ಮೊಗದಲ್ಲಿ ಮಂದಹಾಸ.
ವಿಜಯಪುರ: 2025-26 ನೆಯ ಶೈಕ್ಷಣಿಕ ಸಾಲಿನ ನವೋದಯ ವಸತಿ ಶಾಲೆಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ನ ಮಕ್ಕಳು ಅಮೋಘ ಸಾಧನೆಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 27 ಮಕ್ಕಳಲ್ಲಿ 6 ಮಕ್ಕಳು ಆಯ್ಕೆಯಾಗುವುದರ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.ಶಾರಿಕಾ ಖಾಜಿ (ಶೇ 95),ಮಲ್ಲಿಕಾರ್ಜುನ ಖಾನಾಪುರ ( ಶೇ 92.50),ಆಶ್ವಿಕ ಜಮಖಂಡಿ (ಶೇ 92.50),ರವಿ ನಾಯಕ ( ಶೇ 90),ಅಭಿನವ ಅರಕೇರಿ( ಶೇ 90),ಬಸನಗೌಡ ಬಿರಾದಾರ, ತೊನಶ್ಯಾಳ (ಶೇ88.75) ಅಂಕಗಳನ್ನು ಪಡೆದುಕೊಂಡು ಸಂಸ್ಥೆಯ […]
“ರಂಜಾನ್: ತ್ಯಾಗ, ತಪಸ್ಸು ಮತ್ತು ಮಾನವೀಯತೆಯ ಬೆಳಕಿನ ಹಬ್ಬ”
ಇಸ್ಲಾಮ ಧರ್ಮದಲ್ಲಿ ಅತ್ಯಂತ ಪವಿತ್ರವಾಗಿಯೂ ಮಹತ್ವಪೂರ್ಣವಾಗಿಯೂ ಪರಿಗಣಿಸಲ್ಪಡುವ ಹಬ್ಬವೇ ಖಚಿmಚಿಜಚಿಟಿ ರಂಜಾನ್. ಈ ಪವಿತ್ರ ಮಾಸವು ಕೇವಲ ಉಪವಾಸದ ಆಚರಣೆಗೆ ಸೀಮಿತವಾಗಿಲ್ಲ; ಅದು ಆತ್ಮಶುದ್ಧಿ, ಆತ್ಮಪರಿಶೀಲನೆ ಮತ್ತು ಮಾನವೀಯ ಮೌಲ್ಯಗಳ ಅರಿವಿಗೆ ದಾರಿ ಮಾಡಿಕೊಡುವ ಮಹತ್ವದ ಕಾಲವಾಗಿದೆ. ಪ್ರಪಂಚದಾದ್ಯಂತ ಇರುವ ಮುಸ್ಲಿಂ ಸಮುದಾಯ ಈ ಮಾಸವನ್ನು ಭಕ್ತಿ, ನಿಯಮ ಮತ್ತು ಶಿಸ್ತುಗಳಿಂದ ಆಚರಿಸುತ್ತಾರೆ. ಬೆಳಿಗ್ಗೆ ಸೂರ್ಯೋದಯದ ಮೊದಲು ‘ಸಹರಿ’ ಸೇವಿಸಿ, ಸೂರ್ಯಾಸ್ತದ ನಂತರ ‘ಇಫ್ತಾರ್’ ಮೂಲಕ ಉಪವಾಸ ಮುರಿಯುವುದು ಈ ಮಾಸದ ಪ್ರಮುಖ ಆಚರಣೆಗಳಾಗಿವೆ. ರಂಜಾನ್ ಉಪವಾಸದ […]
ಜಾಹೀರಾತು ನೀತಿ–2026 ವಿರುದ್ಧ ಪತ್ರಿಕೆಗಳ ಆಕ್ರೋಶ: ನೀತಿ ಸ್ಥಗಿತಕ್ಕೆ ಒತ್ತಾಯ” ಜಿಲ್ಲಾಧಿಕಾರಿಗಳಿಗೆ ಮನವಿ
ವಿಜಯಪುರ: ರಾಜ್ಯ ಸರ್ಕಾರವು 2026–27ನೇ ಹಣಕಾಸು ವರ್ಷದಿಂದ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–2026 ವಿರುದ್ಧ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ನೀತಿಯಲ್ಲಿ ಅಳವಡಿಸಿರುವ ಅನೇಕ ಅಂಶಗಳು ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗಿದ್ದು, ಅವುಗಳ ಅಸ್ತಿತ್ವಕ್ಕೂ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿತು.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ […]