ಗೋಲಗುಮ್ಮಟ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರದಿರಲು ರಾಜಕಾರಣಿಗಳ ಇಚ್ಛಾಶಕ್ತಿ ನಿರ್ಲಕ್ಷ್ಯ ಕಾರಣ; ಡಾ. ಜಿ. ಮಹೇಶ್ವರಿ

ವಿಜಯಪುರ : ಬೆಂಗಳೂರು ದಕ್ಷಿಣದ ಭಾರತೀಯ ಪುರಾತತ್ವ ನಿರ್ದೇಶಕರಾದ ಡಾ. ಜಿ. ಮಹೇಶ್ವರಿ ಅವರು ಐತಿಹಾಸಿಕ ಸ್ಮಾರಕ ಗೋಲಗುಂಬಜಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದ ಬಿಜಾಪುರ ಹೆರಿಟೇಜ್ ಫೌಂಡೇಶನ್ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಸ್ಮಾರಕಗಳ ಸ್ಥಿತಿಗತಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು. ಇಬ್ರಾಹಿಂ ರೋಜಾ ಸ್ಥಿತಿ ಗತಿ ಪರಿಸ್ಥಿತಿ ಇಂದಿನ ಸ್ಮಾರಕಗಳ ಸ್ಥಿತಿ ತುಂಬಾ ಗಂಭೀರದಲ್ಲಿದೆ. ಅದಕ್ಕೆ ಪುರಚ್ಛೇತನ ಮಾಡುವುದು ತುರ್ತು ಅವಶ್ಯಕವಾಗಿದೆ. ಅದರಂತೆ ಇಬ್ರಾಹಿಂ ರೋಜಾದ ಗೋಡೆ ಕುಸಿದು ವರ್ಷಗತಿಸಿದರು ಇನ್ನುವರೆಗೂ ರಿಪೇರಿ […]
ಕೊಲೆ ಮಾಡಿದವರನ್ನು ಬಂಧಿಸಿ; ವೀರಶೈವ ಲಿಂಗಾಯತ, ಪಂಚಮಸಾಲಿ, ಹೋರಾಟಗಾರರ ಸಂಘದಿಂದ ಒತ್ತಾಯ

ವಿಜಯಪುರ : ಅಣ್ಣಪ್ಪ ಮಾವಿನಗಿಡದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಬಾಗಿಯಾದ ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಿಂದು ವೀರಶೈವ ಲಿಂಗಾಯತ, ಪಂಚಮಸಾಲಿ, ಹೋರಾಟಗಾರರ ಸಂಘ ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅಣ್ಣಪ್ಪ ಮಾವಿನಗಿಡದ,(54) ಪ್ರಗತಿನಗರ ಆಶ್ರಮ ರಸ್ತೆ, ಇವರನ್ನು ದಿನಾಂಕ : 10-11-2021 ರಂದು ಅಪಹರಣ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಇವತ್ತಿಗೆ ಒಂಬತ್ತು ದಿನಗಳು ಕಳೆದರು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸದೇ ಹೋದರೆ ನಾವು […]
ಶತಾಯುಷಿ ಸಹೋದರಿಯರು; ಕವಲಗಿ ಗ್ರಾಮಸ್ಥರಿಂದ ಶತಾಯುಷಿಗಳಿಗೆ ಹುಟ್ಟುಹಬ್ಬದ ಸಂಭ್ರಮ

ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ ಬಾಳಿನ ದೀಪಾ ನಿನ್ನ ನಗು ದೇವರ ರೂಪ ನೀನೆ ಮಗು ನಗುತ ನಗುತ ಬಾಳು ನೀನು ನೂರು ವರುಷಾ ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು ಡಾ. ರಾಜ್ ಕುಮಾರ ಅವರು ಹಾಡಿದ ಹಾಡಿಗೆ ಅರ್ಥ ಸಿಕ್ಕಂತಾಗಿದೆ. ವಿಜಯಪುರ ನಗರದ ಕವಲಗಿ ಗ್ರಾಮದ ನಿವಾಸಿಗಳಾದ ರಕ್ಮಾಬಾಯಿ ಸಾಳುಂಕೆ (103) ಕಾಶೀಬಾಯಿ ವೆಂ. ಪವಾರ […]
ಮಕ್ಕಳು ಈ ದೇಶದ ಆಸ್ತಿ; ವಾಯ್ ಎಸ್ ಗುಣಕಿ

132 ನೇ ಮಕ್ಕಳ ದಿನಾಚರಣೆ ಹಾಗೂ ಜವಹರಲಾಲ್ ರವರ ಜನ್ಮ ದಿನದ ಆಚರಣೆ ಅಂಗವಾಗಿ ಶ್ರೀ ಶಾಂತೇಶ್ವರ ಅರೇವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮವನ್ನು ವಿಜೃಂಭನೆಯಿಂದ ಆಚರಿಸಲಾಯಿತು. ಜೀವನ ಕಲಿಸುವುದು ಶಿಕ್ಷಣವಾದರೆ ಜೀವ ಉಳಿಸುವುದು ವೈದ್ಯಕೀಯ ವೃತ್ತಿ ಈ ಎರಡು ವೃತ್ತಿಗಳು ಮನುಜ ಕುಲಕ್ಕೆ ಅತಿ ಮುಖ್ಯವಾದದ್ದು ಆದರಿಂದ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂದಾಗ ಮಾತ್ರ ಈ ಜೀವನಕ್ಕೆ ಒಂದು ಅರ್ಥ ಸಿಗುವುದು. ಮಕ್ಕಳ ನೆಚ್ಚಿನ ಚಾಚ ಜವಾಹರಲಾಲ್ ನೆಹರೂ ರವರು ‘Tomorrow is […]
ಸಿಂದಗಿ ಉಪಚುನಾವಣೆ ತಯಾರಿ ಹೇಗಿದೆ?

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಉಪ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಕೈಗೊಂಡಿರುವ ಸಿದ್ದತೆಗಳ ಕುರಿತು ಸುದ್ದಿಗೋಷ್ಠಿ ನಡೆಸಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್, ಎಸ್‌ಪಿ ಎಚ್. ಡಿ. ಆನಂದ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಸರಳ ಮತದಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಬಾರಿ ಚುನಾವಣೆಯಲ್ಲಿ ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 2,34,584 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1,20,844 ಪುರುಷರು […]
ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಜಿಮ್ ಸಲಕರಣೆ: ಅರ್ಜಿ ಆಹ್ವಾನ

ವಿಜಯಪುರ: 2021-22 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಜಿಮ್ ಸಲಕರಣೆಗಳನ್ನು ನೀಡುವ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರ್ನಾಟಕದ ಕ್ರೀಡಾಪಟುಗಳ ವಿವರಗಳನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಯುವ […]
ಮೆಘಾ ಲೋಕ್ ಅದಾಲತ್

ವಿಜಯಪುರ: ವಿಜಯಪುರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇದೇ ಸೆ.30 ರಂದು ಮೇಘಾ ಲೋಕ್ ಅದಾಲತ್” ಮತ್ತು ” ಅಕ್ಟೋಬರ್ 2 ರಿಂದ 14 ರವರೆಗೆ ವಿಜಯಪುರ ಜಿಲ್ಲೆಯಲ್ಲಿ ಪ್ಯಾನ್ ಇಂಡಿಯಾ ಅವೇರ್ನೆಸ್ ಮತ್ತು ಔಟರಿಚ್ ಕಾರ್ಯಕ್ರಮ (Pan India Awareness and Outreach Programmes) ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ .ಎನ್.ನಾಯಕ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರು ತಿಳಿಸಿದ್ದಾರೆ. ಮಾನ್ಯ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ […]
ವಿಶ್ವ ಹೃದಯ ದಿನಾಚರಣೆ

ವಿಜಯಪುರ: ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರೆಗೆ ಜಾಥಾ ನಡೆಸುವ ಮೂಲಕ ವಿಶ್ವ ಹೃದಯ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಬ್ಯಾನರ್, ಪೊಸ್ಟರ್, ಪಾಂಪ್ಲೆಟ್ಸ, ಹಾಗೂ ಜಿಂಗಲ್ಸ್ ಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರೆಗೆ ಜಾಥಾ ನಡೆಸಿದರು. ಕಾಯಕ್ರಮವನ್ನು ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ್ ಎರಗಲ್, ಡಾ.ಎಲ್.ಎಸ್ ಬಿದರಿ, ಡಾ.ಮಲ್ಲನಗೌಡ ಬಿರಾದಾರ, […]
ಸಿಂದಗಿ ವಿಧಾನಸಭಾ ಉಪ ಚುನಾವಣೆ : ಶಸ್ತ್ರಾಸ್ತ್ರ ಲೈಸನ್ಸ್ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳಿಂದ ಆದೇಶ

ವಿಜಯಪುರ: ಜಿಲ್ಲೆಯ ಸಿಂದಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಎಲ್ಲಾ ಆಯುಧ ಲೈಸನ್ನದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಅಂದರೆ ಎಸ್.ಬಿ.ಬಿ.ಎಲ್/ಡಿ.ಬಿ.ಬಿ,ಎಲ್ ಬಂದೂಕು, ರೈಫಲ್ ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸನ್ನಗಳನ್ನು ದಿನಾಂಕ:28-09-2021 ರಿಂದ 05-11-2021 ರ ಅವಧಿವರೆಗೆ (ಎರಡು ದಿನಗಳು ಸೇರಿ) ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಶಸ್ತ್ರಾಸ್ತ್ರಗಳ ಅಧಿನಿಯಮ-1989 ರ ಕಲಂ-21 ರನ್ವಯ ಸಿಂದಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಸ್ತ್ರಾಸ್ತ್ರ ಹೊಂದಿದವರು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಯಾವುದೇ […]
ವಿಶ್ವ ಹೃದಯ ದಿನದ ಪ್ರಯುಕ್ತವಾಗಿ ” ಉಚಿತ ಹೃದಯ ತಪಾಸಣಾ ಶಿಬಿರ

ವಿಜಯಪುರ: ವಿಶ್ವ ಹೃದಯ ದಿನದ ಪ್ರಯುಕ್ತವಾಗಿ ” ಉಚಿತ ಹೃದಯ ತಪಾಸಣಾ ಶಿಬಿರ,, ಶ್ರೀ ಶಂಕರಲಿಂಗ ದೇವಸ್ಥಾನದ ಸಮುದಾಯ ಭವನದಲ್ಲಿ ಡಾ।ಗೌತಮ್ ಎಸ್ ವಗ್ಗರ್ ಒಆ ಆಒ (ಹೃದಯರೋಗ ತಜ್ಞರು) ಏಇಒ ಬಾಂಬೆ ಹಾಗೂ ಶ್ರೀ ವರ ದಾನೇಶ್ವರಿ ಮಹಿಳಾ ಮಂಡಳ ಇವರ ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ನಗರದ ಖ್ಯಾತ ಹೃದಯ ತಜ್ಞರಾದ ಡಾ ಗೌತಮ್ ವಗ್ಗರ್ ಮಾತನಾಡಿ ವಿಶ್ವ ಹೃದಯ ದಿನವು ಪ್ರಪಂಚದಾದ್ಯಂತ ಜನರಿಗೆ ಹೃದಯ ರೋಗ ಮತ್ತು […]