ಬಸವನ ಬಾಗೇವಾಡಿ ಸರಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ; ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ

ವಿಜಯಪುರ: ಬರದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿಯ ಹಿರಿಮೆ ಸಿಕ್ಕಿದೆ. ಹೌದು! 2020-21ನೇ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಸ್ವಚ್ಚತೆ, ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿಯು ವಿಜಯಪುರ ಜಿಲ್ಲೆಯ 20 ಆರೋಗ್ಯ ಸಂಸ್ಥೆಗಳಿಗೆ ಲಭಿಸಿರುತ್ತದೆ. ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕಾಯಕಲ್ಪ ಪ್ರಶಸ್ತಿಯನ್ನು 2015 ರಿಂದ ನೀಡಲಾಗುತ್ತ್ತಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯ 15 ಆರೋಗ್ಯ ಸಂಸ್ಥೆಗಳು ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿದ್ದರೆ, 2020-21ನೇ ಸಾಲಿನಲ್ಲಿ ಒಟ್ಟು 20 […]
ಸ್ವಚ್ಛ ಮಾಡಲು ಆಗದಿದ್ದರೂ ಪರವಾಗಿಲ್ಲ, ಅದನ್ನು ಹಾಳು ಮಾಡಲು ಮುಂದಾಗಬೇಡಿ : ಪ್ರಕಾಶ ಆರ್.ಕೆ.

ವಿಜಯಪುರ : ಗಾನಯೋಗಿ ಸಂಘದ ವತಿಯಿಂದ ನಗರದ ಹಲವಾರು ಕಡೆ ಈಗಾಗಲೇ ಪರಿಸರದ ಅರಿವು ಮೂಡಿಸುವುದರ ಜೊತೆಗೆ ತಮ್ಮ ಸ್ವಂತ ದುಡ್ಡಿನಲ್ಲಿ ಗಾನಯೋಗಿ ಗೆಳೆಯರು ನಗರದ ಹಲವಾರು ಸಿಟಿ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸುವುದರ ಮೂಲಕ ವಿಜಯಪುರ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದ ಸ್ಟೇಷನ್ ರೋಡ್ ಗೆ ಹೋಗುವ ದಾರಿಯಲ್ಲಿ ರಿಮಾಂಡ್ ಹೋಮ್ ಸಿಟಿ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿದ್ದ ನಿಲ್ದಾಣದ ಒಳಗಡೆ ಸ್ಟಾರ್, ಮಾವಾ, ಗುಟಕಾ ಹಾಗೂ ಮಧ್ಯದ ಬಾಟಲಿಗಳಿಂದ ತುಂಬಿಕೊಂಡು ಕುಡಕರ ಅಡ್ಡವಾಗಿತ್ತು ಇದರಿಂದ ಸಾರ್ವಜನಿಕರಿಗೆ […]
ಸ್ಮಾರಕಗಳ ಸಂರಕ್ಷಣೆ ಜೊತೆಗೆ ನಗರ ಸೌಂದರ್ಯ ಮುಖ್ಯ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ : ನಗರದ ಸೌಂದರೀಕರಣ, ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗಾಗಿ ಕಸದ ಸೂಕ್ತ ವಿಲೇವಾರಿಯ ಜೊತೆಗೆ ಸ್ವಚ್ಛತೆಯೂ ಬಹಳ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರ ಇರುವ ಕರಿಮುದ್ದಿನ್ ಮಸೀದಿ, ಕೋಟೆ ಗೋಡೆ ಆವರಣ ಹಾಗೂ ಇತರೆ ಸ್ಮಾರಕಗಳಲ್ಲಿ ವಿಜಯಪುರ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಇಂದು ಹಮ್ಮಿಕೊಳ್ಳಲಾದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಹೆರಿಟೇಜ್ ವಾಕ್‍ನಲ್ಲಿ ಮಾತನಾಡುತ್ತಾ ಅವರು ನಗರದಲ್ಲಿ ಸ್ಮಾರಕಗಳ ಸಂರಕ್ಷಣೆಗೆ ಹಾಗೂ ಅವುಗಳ ಸರಿಯಾದ ನಿರ್ವಹಣೆಗಾಗಿ ಈಗಾಗಲೇ […]
ವಿಜಯಪುರದಲ್ಲಿ ಐಚರ್ ಶೋರೂಮ್ ಉದ್ಘಾಟನೆ

ವಿಜಯಪುರ : ಐಚರ್ ಟ್ರಕ್ಸ್ ಮತ್ತು ಬಸ್ಸುಗಳು, ವಿಇ ವಾಣಿಜ್ಯ ವಾಹನಗಳ ವ್ಯಾಪಾರ ಘಟಕವಾದ ವಿಎಸ್‍ಎ3ಬಿ, ಹೊಚ್ಚ ಹೊಸ ಐಚರ್ ಮಾರಾಟ, ಸೇವೆ ಮತ್ತು ಬಿಡಿಭಾಗಗಳು ಸೌಲಭ್ಯವನ್ನು ವಿಜಯಪುರದಲ್ಲಿ ಪ್ರಾರಂಭಿಸಿದೆ. ಈ ಡೀಲರ್‍ಶಿಪ್ ಕಾರ್ಯತಂತ್ರವಾಗಿ ಐಚರ್ ನೂತನ ಶೋರೂಮ್ ಹುಬ್ಬಳ್ಳಿಯಿಂದ ಸೊಲ್ಲಾಪುರ ರಾಷ್ಟ್ರೀಯ ರಸ್ತೆಯಲ್ಲಿದೆ, ಇಲ್ಲಿ ಐಚರ್‍ನ ಮುಂದಿನ ಜೆನ್ ಸಿವಿ ವಾಹನಗಳು, ಬಿಡಿಭಾಗಗಳ ಕೇಂದ್ರ ಮತ್ತು ಮಲ್ಟಿ-ಬೇ ಕಾರ್ಯಾಗಾರ ಪ್ರದರ್ಶಿಸಲು ಸುಲಭವಾಗಿ ಸೇವೆ ಪಡೆಯಬಹುದಾಗಿದೆ. ಈ ಆಧುನಿಕ ಸೌಲಭ್ಯವು ಐಚರ್ ಗ್ರಾಹಕರಿಗೆ ಅತ್ಯಾಧುನಿಕ ಸೇವೆ ಒದಗಿಸುತ್ತದೆ […]
SC/ST 72 ಪ್ರಕರಣಗಳ ಪೈಕಿ 56 ಪ್ರಕರಣಗಳಲ್ಲಿ ದೌರ್ಜನ್ಯಕೊಳಗಾದ ಸಂತ್ರಸ್ತರಿಗೆ 132.31 ಲಕ್ಷ ಪರಿಹಾರ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ: ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ ಜಿಲ್ಲಾಡಳಿತದ ವತಿಯಿಂದ ಒಟ್ಟು 56 ಪ್ರಕರಣಗಳಲ್ಲಿ 132.31 ಲಕ್ಷ ರೂ.ಗಳ ಪರಿಹಾರಧನವನ್ನು ವಿತರಿಸಲಾಗಿದೆ. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗಗಳ ಮೇಲಿನ 72 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 56 ಪ್ರಕರಣಗಳಲ್ಲಿ ದೌರ್ಜನ್ಯದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೊಂದ ಸಂತ್ರಸ್ತರಿಗೆ 132.31 ಲಕ್ಷ […]
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ವಿಜಯಪುರ: ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅತ್ಯಾಚಾರಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ರಾವುತಪ್ಪ ವಿಠೋಬಾ ಕಾಂಬಳೆ (23) ಶಿಕ್ಷೆಗೊಳಗಾದ ಆರೋಪಿ. ಬಾಲಕಿಯ ಪೋಷಕರು ಗ್ರಾಮದ ಜಮೀನಿನಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಆರೋಪಿ, ಬಾಲೆಗೆ 100 ರೂ. ಕೊಡುವುದಾಗಿ ಆಮಿಷ ತೋರಿಸಿ, ಪಕ್ಕದ ಜಮೀನಿಗೆ ಕರೆದುಕೊಂಡು ಹೋಗಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ […]
ವಿಜಯಪುರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಗೆ ನಿಂದನೆ

ವಿಜಯಪುರ: ನಗರದ ಸುಕೂನ ಕಾಲನಿಯ ಒಳಚರಂಡಿ ಕಾಮಗಾರಿ ಪರಿಶೀಲನೆಗೆ ತೆರಳಿದಾಗ ಕೆಲ ದುಷ್ಕರ್ಮಿಗಳು ಕರ್ತವ್ಯ ನಿತರ ಪಾಲಿಕೆಯ ಆಯುಕ್ತರಾದ ಶ್ರೀ ವಿಜಯ ಮೆಕ್ಕಳಕಿ ಅವರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿರುತ್ತಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘ (ರಿ), ವಿಜಯಪುರ ಹಾಗೂ ವಿವಿಧ ಸಂಘಗಳ ಸಹಯೋಗದಿಂದ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ತೆರಳಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಪಿ. ಸುನೀಲ […]
ಮಹಾ ಪರಿನಿರ್ವಾಣ ದಿನಾಚರಣೆ; ಶ್ರೀದೇವಿ ಉತ್ಲಾಸರ ಗೌರವ ನಮನ

ವಿಜಯಪುರ: ಹೊನ್ನುಟಗಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಮಹಾ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು. ಗ್ರಾಮದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ ಅವರ ವೃತ್ತಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಶ್ರೀದೇವಿ ಉತ್ಲಾಸರ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಿ, ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿ, ಶ್ರೇಷ್ಠವಾದ ಸಂವಿಧಾನವನ್ನು ರಚಿಸಿ ಹಕ್ಕು, ಕರ್ತವ್ಯಗಳನ್ನು ನೀಡಿದ ಶ್ರೇಯಸ್ಸು ಡಾ.ಅಂಬೇಡ್ಕರ ಅವರಿಗೆ ಸಲ್ಲಬೇಕು, ಅವರ ವಿಚಾರಗಳನ್ನು ನಾವು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಾದೇವಿ ಸಂಕದ, ಭೀಮು ಸಂಕದ, […]
ಭೀಮೆಯ ಒಡಲು ಮತ್ತೆ ನೆತ್ತರು!!!

ವಿಜಯಪುರ : ಆಲಮೇಲ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಪ್ರದೀಪ ಎಂಟಮಾನ ಭೀಕರ ಕೊಲೆಯಾಗುವ ಮೂಲಕ ಭೀಮಾತೀರದಲ್ಲಿ ಮತ್ತೇ ನೆತ್ತರು ಹರಿದಿದೆ. ವಿಜಯಪುರ ಜಿಲ್ಲೆಯ ಆಲಮೇಲ್ ಪಟ್ಟಣದಲ್ಲಿ ಭೀಕರ ಕೊಲೆಯಾಗಿದ್ದು, ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ನೇಹಿತರೊಂದಿಗೆ ಪ್ರದೀಪ ತೆರಳಿದ್ದ, ಇದೇ ವೇಳೆ ನಾಲ್ಕೈದು ಜನರ ಗುಂಪಿನಿಂದ ಪ್ರದೀಪ್ ಮೇಲೆ ಅಟ್ಯಾಕ್ ಮಾಡಿ, ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದಿದ್ದರಿಂದ ಪ್ರದೀಪ ಎಂಟಮಾನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರ ದೌಡಾಯಿಇಸಿದ್ದಾರೆ. ಈ ಘಟನೆಯು ಆಲಮೇಲ ಪೊಲೀಸ್ […]
ವಿಜಯಪುರ ಯೋಧ ಹೃದಯಾಘಾತದಿಂದ ಸಾವು; ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ವಿಜಯಪುರ: ಕೊಲ್ಹಾರ ಗ್ರಾಮದ ಸಿ.ಆರ್.ಪಿ.ಎಫ್ ಯೋಧ ಸಬ್ ಇನ್ಸಪೆಕ್ಟರ್ ಭೀಮಪ್ಪ ಮ. ಕೋಲ್ಕಾರ ಅವರು ಆಸ್ಸಾಂನ ಜೈಸಾಗರ, ಶಿವಸಾಗರ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನ.30 ರಂದು ಮಧ್ಯಾಹ್ನ 3-30 ಕ್ಕೆ ಹೃದಯಾಘಾತವಾಗಿ ವೀರಮರಣ ಹೊಂದಿದ್ದಾರೆ ಮೃತರಿಗೆ ಪತ್ನಿ ಒರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಇದ್ದಾರೆ. ಮೃತರ ಅಂತ್ಯಕ್ರಿಯೆ ವಿಜಯಪುರದಲ್ಲಿ ಇಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತ, ಪೋಲಿಸ ಇಲಾಖೆ, ಹಾಗೂ ಯಲಹಂಕ ಸಿ.ಆರ್.ಪಿ.ಎಫ್ ಗ್ರೂಪ್ ಸೆಂಟರ್‍ನ ವತಿಯಿಂದ ಗಾಳಿಯಲ್ಲಿ ಮೂರು […]