Vijayapura News | ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ನೇಮಕ

ಜಿಲ್ಲಾ ನ್ಯಾಯವಾದಿಗಳು image

ವಿಜಯಪುರ: ಜಿಲ್ಲಾ ನ್ಯಾಯವಾದಿಗಳು ಸಂಘದ ಪದಾಧಿಕಾರಿಗಳ 2 ವರ್ಷಗಳ ಅವಧಿಯ ಚುನಾವಣೆ ಜಿಲ್ಲಾ ನ್ಯಾಯಾಲಯದ ವಕೀಲರ ಸಭಾಭವನದಲಿ ಜರುಗಿತು. ನೂತನ ಅಧ್ಯಕ್ಷರಾಗಿ ಡಿ.ಜಿ.ಬಿರಾದಾರ ವಕೀಲರು, ಉಪಾಧ್ಯಕ್ಷರಾಗಿ ಸುನೀಲ ಬಿ. ಬಿರಾದಾರ ವಕೀಲರು, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ ಎಸ್.ಚೂರಿ ವಕೀಲರು, ಜಂಟಿ ಕಾರ್ಯದರ್ಶಿಯಾಗಿ ಉಸ್ಮಾನ ಎಮ್. ಆಲಗೂರ ವಕೀಲರು, ಲೈಬ್ರರಿ ಕಾರ್ಯದರ್ಶಿ ಯಲ್ಲಪ್ಪ ಬಿ.ಬಡಿಗೇರ ವಕೀಲರು, ಖಜಾಂಚಿಯಾಗಿ ಕಾಖಂಡಕಿ ಎಮ್.ಎ. ವಕೀಲರು ಹಾಗೂ ಮ್ಯಾನೇಜಿಂಗ್ ಕಮೀಟಿ ಸದಸ್ಯರಾಗಿ ಬಸವರಾಜ ಡಿ.ಬಿರಾದಾರ ವಕೀಲರು, ವಿನಾಯಕ ಎಚ್.ಗಾಳಪ್ಪಗೋಳ ವಕೀಲರು, ಮಹಮ್ಮದಗೌಸ ಹವಾಲ್ದಾರ […]

Vijayapura News | ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡದ ಸದುಪಯೋಗವಾಗಬೇಕು : ಡಾ. ಸುಧಾಮೂರ್ತಿ

ನಾಗರಿಕ ಸೌಲಭ್ಯ ವಸತಿ ನಿಲಯ image

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ನಾಗರಿಕ ಸೌಲಭ್ಯ ವಸತಿ ನಿಲಯ ದಿಂದ ಹಲವು ಬಡಜನರಿಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ 2024-25ನೇ ಸಾಲಿನಲ್ಲಿ ಶ್ರೀಮತಿ ಸುಧಾ ಮೂರ್ತಿ ರಾಜ್ಯ ಸಭಾ ಸಂಸದರು ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ […]

Vijayapura News | ರೈತರ ಒಂದಿಷ್ಟೂ ಜಮೀನು ವಕ್ಫ್ ಗೆ ಸೇರಿಸಿಲ್ಲ | ಅನಾವಶ್ಯಕವಾಗಿ ಸೃಷ್ಟಿಸಲಾದ ಗೊಂದಲದ ಅಂತ್ಯ | ಟಾಸ್ಕಪೋರ್ಸ್ ಸಮಿತಿ ರಚನೆಗೆ : ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ

ವಿಜಯಪುರ: ಜಿಲ್ಲೆಯ ವಕ್ಫ್ Waqf ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ ಸಮಿತಿಯೊಂದನ್ನು ರಚಿಸಿ, 1964 ರಿಂದ 1974 ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚಿಸಿದರು. ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ Waqf ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಜಯಪುರ ಜಿಲ್ಲೆಯಾದ್ಯಂತ […]

Vijayapura News | ಬದುಕಿನ ಸಾಮರಸ್ಯದ ಕವಿ ಬೇಂದ್ರೆ – ಡಾ ಭಾರತಿ ಖಾಸನಿಸ್

ವಿಜಯಪುರ: ಕನ್ನಡ ಸಾಹಿತ್ಯದ ಸುದೀರ್ಘ ಇತಿಹಾಸದಲ್ಲಿ ಸರಳ ಬದುಕಿನ ಸಾರ ಕವನ ಸಂಕಲನಗಳ ಮೂಲಕ ಹೇಳಿದ ಮಹಾನ ವ್ಯಕ್ತಿತ್ವ ವರ ಕವಿ ಬೇಂದ್ರೆ ಯವರು ಹೊಂದಿದ್ದರು, ಕವನಗಳನ್ನು ಅಧ್ಯಯನ ಮಾಡುವ ಅತ್ಯವಶ್ಯಕತೆ ಇದೆ, ಅವರನ್ನು ನೆನಸುವದೇ ಒಂದು ಸಾರ್ಥಕ ಬದುಕು ಆಗಿದೆ, ಬೇಂದ್ರೆ ಬದುಕಿನುದ್ದಕ್ಕೂ ನಡೆ ನುಡಿ ಒಂದಾಗಿ ಬದುಕಿದವರು, ಇಡೀ ಬದುಕಿನ ಸಾಮರಸ್ಯ ಕವಿಯಾಗಿ ಹೊರಹೊಮ್ಮಿದವರು ಎಂದರು. ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ […]

Vijayapura News | ದಾಸ ಸಾಹಿತ್ಯದ ಕೊಡುಗೆ ಅಪಾರ – ಸೋಮೇಶ್ವರ ಮಹಾಸ್ವಾಮೀಜಿ

ದಾಸ ಸಾಹಿತ್ಯ image

ವಿಜಯಪುರ: 14-15 ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ತನ್ನ ಪರಾಕಾಷ್ಠೆಯನ್ನು ಮೆರೆಯುವ ಮೂಲಕ ಸಮಾಜದ ಅನಿಷ್ಟ ಪದ್ಧತಿಗಳನ್ನು ಕಿತ್ತೊಗೆದ ಶ್ರೇಷ್ಠ ಸಾಹಿತ್ಯವಾಗಿದೆ. ಕನ್ನಡಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದು ಮಕಣಾಪುರ ಗುರುಪೀಠದ ಪ.ಪೂ ಸೋಮೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಪ್ರೋ. ಬಿ.ಬಿ.ನಾಡಗೌಡ ದತ್ತಿ, ದತ್ತಿ ದಾನಿಗಳು ಶ್ರೀ ನಾಡಗೌಡ ಮನೆತನ ವಿಜಯಪುರ. ವಿಷಯ: ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ. ದಿ.ಸಂಗಪ್ಪ ಮ. ಕಮದಾಳ […]

Vijayapura News | ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪದಾನ ಸಮಾರಂಭ

ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ image

ವಿಜಯಪುರ: ನಗರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ಕೊನೆಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಉದಯಕುಮಾರ್ ಕೆ ಕುಲಕರ್ಣಿ, ಪ್ರಾಧ್ಯಾಪಕರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ. ರವರು ಆಗಮಿಸಿ ” ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನೊಬ್ಬ ಗುರುತರವಾದ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿದ್ದಾನೆ ಅಂತಹ ಪವಿತ್ರ ವೃತ್ತಿಯನ್ನ ಆಯ್ದುಕೊಂಡ ತಾವುಗಳೆಲ್ಲ ಧನ್ಯರು, ಜೊತೆಗೆ ನಾವು ನೀವು ಸೇರಿಕೊಂಡು ಉತ್ತಮ ಸಮಾಜದ ಜೊತೆಗೆ ಹೊಸ ಭವ್ಯ ಭಾರತವನ್ನ […]

Vijayapura News | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶಾತಿ ಆರಂಭ | ಅರ್ಜಿ ಆಹ್ವಾನ

PG Admission Counselling image

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ, ಪಿಜಿ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಅಡ್ವಾನ್ಸ್ ಡಿಪ್ಲೋಮಾ ಮತ್ತು ಸರ್ಟಿಫೀಕೇಟ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು PG Admission Counselling ಇದೇ ಅಕ್ಟೋಬರ್ 28ರಂದು ಬೆಳಿಗ್ಗೆ 10.30ರಿಂದ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ತಿಳಿಸಿದ್ದಾರೆ. ಇದನ್ನೂ ಓದಿ: Vijayapura News | ಕನ್ನಡದ ಕುಲ ಗುರು ಡಾ: ಸಿದ್ದಲಿಂಗ ಸ್ವಾಮಿಜಿ | ಹಾಸಿಂಪೀರ ವಾಲಿಕಾರ ಅಭಿಪ್ರಾಯ PG Admission Counselling ಮಹಿಳಾ […]

Vijayapura News | ರೈತರ ವಿವಿಧ ಬೇಡಿಕೆ | ಭಾರತೀಯ ಕಿಸಾನ್ ಸಂಘ ಹೋರಾಟ

ಭಾರತೀಯ ಕಿಸಾನ್ ಸಂಘ image

ವಿಜಯಪುರ: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲೆಯ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು. ಅಪರ ಜಿಲ್ಲಾಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರ ಮುಖಾಂತರ ಮಾನ್ಯಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷರಾದ ಭೀಮಸೇನ ಕೊಕ್ಕರೆ ಮಾತನಾಡಿ ವಿಜಯಪುರ ಜಿಲ್ಲೆ ಕಳೆದ ಎರಡು ವರ್ಷದಿಂದ ಅನಾವೃಷ್ಟಿ ಮತ್ತು ಅತಿವೃಷ್ಟಿ ಚಕ್ರದಲ್ಲಿ ಶಿಲುಕಿದೆ ಆದರೆ ರೈತರಿಗೆ ಸರಿಯಾಗಿ ಬರಪರಿಹಾರ ಹಾಗೂ ಅತಿವೃಷ್ಟಿ ಪರಿಹಾರ ಸಮರ್ಪಕವಾಗಿ ಇದುವರೆಗೆ ಸಿಕ್ಕಿಲ್ಲ. […]

Vijayapura News | ಬಸವ ವಿಭೂಷಣ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

ವಿಜಯಪುರ: ನಗರದ ಬಸವ ಜನ್ಮಭೂಮಿ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಬಸವ ವಿಭೂಷಣ ಪ್ರಶಸ್ತಿಯು ವಿಜಯಪುರ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನರ್ದೇಶಕ ಜಯಪ್ರಕಾಶ ಎಚ್. ಅವರಿಗೆ ಲಭಿಸಿದೆ. ಜಯಪ್ರಕಾಶ ಅವರ ಆಡಳಿತ ಸೇವೆಯನ್ನು ಗುರುತಿಸಿ ಬಸವ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿಸೆಂಬರ ತಿಂಗಳ ಎರಡನೆ ವಾರದಲ್ಲಿ ನಡೆಯುವ ಪ್ರತಿಷ್ಠಾನದ 14ನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ವಚನ ವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಜಯಪ್ರಕಾಶ ಎಚ್.ಅವರನ್ನು ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ […]

Vijayapura News | ಕನ್ನಡದ ಕುಲ ಗುರು ಡಾ: ಸಿದ್ದಲಿಂಗ ಸ್ವಾಮಿಜಿ | ಹಾಸಿಂಪೀರ ವಾಲಿಕಾರ ಅಭಿಪ್ರಾಯ

Dr. Siddalinga Swamiji image

ವಿಜಯಪುರ: ಕನ್ನಡದ ಕುಲ ಗುರುಗಳು, ಕೋಮು ಸೌಹಾರ್ದತೆಯ ಹರಿಕಾರರು. ತೃತೀಯ ಅಲ್ಲಮ ಪ್ರಭುಗಳೆಂದು ಡಾ: ಸಿದ್ದಲಿಂಗ ಸ್ವಾಮಿಜಿ Dr. Siddalinga Swamiji ಖ್ಯಾತರಾಗಿದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಲಿಂ.ಡಾ.ತೋಂಟದ ಸಿದ್ದಲಿಂಗ Dr. Siddalinga Swamiji ಶ್ರೀಗಳ ಆರನೇಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸರ್ವಧರ್ಮ ಸಮನ್ವಯತಯ ಸೂತ್ರ ಅಳವಡಿಸಿಕೊಂಡದ್ದ ತೋಂಟದ ಶ್ರೀಗಳು ದೇಶದಲ್ಲಿ ಸಹೋದರತೆಯ ಪವಿತ್ರ ಬಾಂಧವ್ಯ ಬೆಸೆಯುವ ಕಾಯಕದಲ್ಲಿ ತೊಡಗಿಸಿಕೊಡು ಮಾನವೀಯತೆ […]