Vijayapura News | ಕನ್ನಡದ ಕುಲ ಗುರು ಡಾ: ಸಿದ್ದಲಿಂಗ ಸ್ವಾಮಿಜಿ | ಹಾಸಿಂಪೀರ ವಾಲಿಕಾರ ಅಭಿಪ್ರಾಯ

Dr. Siddalinga Swamiji image

ವಿಜಯಪುರ: ಕನ್ನಡದ ಕುಲ ಗುರುಗಳು, ಕೋಮು ಸೌಹಾರ್ದತೆಯ ಹರಿಕಾರರು. ತೃತೀಯ ಅಲ್ಲಮ ಪ್ರಭುಗಳೆಂದು ಡಾ: ಸಿದ್ದಲಿಂಗ ಸ್ವಾಮಿಜಿ Dr. Siddalinga Swamiji ಖ್ಯಾತರಾಗಿದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಲಿಂ.ಡಾ.ತೋಂಟದ ಸಿದ್ದಲಿಂಗ Dr. Siddalinga Swamiji ಶ್ರೀಗಳ ಆರನೇಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸರ್ವಧರ್ಮ ಸಮನ್ವಯತಯ ಸೂತ್ರ ಅಳವಡಿಸಿಕೊಂಡದ್ದ ತೋಂಟದ ಶ್ರೀಗಳು ದೇಶದಲ್ಲಿ ಸಹೋದರತೆಯ ಪವಿತ್ರ ಬಾಂಧವ್ಯ ಬೆಸೆಯುವ ಕಾಯಕದಲ್ಲಿ ತೊಡಗಿಸಿಕೊಡು ಮಾನವೀಯತೆ ಮೌಲ್ಯಕ್ಕೆ ಮೆರಗು ನೀಡಿದ್ದರು ಎಂದರು.

ಇದನ್ನೂ ಓದಿ: Vijayapura News | ಶಿಕ್ಷಕರ ಯಶಸ್ಸು ಅವರು ಮಾಡುವ ಕಾರ್ಯಗಳಲ್ಲಿ ಇರುತ್ತದೆ – ಡಾ ಶ್ರೀಮತಿ ಎಸ್ ಟಿ ಬೋಳರೆಡ್ಡಿ

ಬಂಜಾರ ಸಂಸ್ಕøತಿ ಮತ್ತು ಭಾಷ ಆಕಾಡೆಮಿ ಸದಸ್ಯೆ ಡಾ ಸುರೇಖಾ ರಾಠೋಡ ಮಾತನಾಡಿ ತೋಂಟದ ಸಿದ್ದಲಿಂಗ ಸ್ವಾಮಿಜಿಯವರ ಜನ್ಮ ದಿನವನ್ನು ಭಾವೈಕ್ಯತೆಯ ದಿನಾಚರಣೆಯನ್ನಾಗಿ ಆಚರಿಸುತ್ತಿರುವದು ಅತ್ಯಂತ ಶ್ಲಾಘನೀಯ ಕಾರ್ಯ. ಸಮಾಜದಲ್ಲಿ ಅಶಾಂತಿ ಹಾಗು ವೈಮನಸ್ಸು ಮೂಡಿಸುವುದನ್ನು ನಿಲ್ಲಿಸಿದ ಕೀರ್ತಿ ತೋಂಟದ ಸಿದ್ದಲಿಂಗ ಸ್ವಾಮಿಜಿಯವರಿಗೆ ಸಲ್ಲುತ್ತದೆ. ಸಹಿಷ್ಣುತೆ-ಸಮಾನತೆ ತತ್ವಗಳ ಪ್ರಬಲ ಪ್ರತಿಪಾದಕರಾಗಿದ್ದರು ಎಂದರು.

ಡೈಯಟ ಕಾಲೇಜಿನ ಉಪನ್ಯಾಸಕ ಪ್ರಮೋದಕುಮಾರ. ಮಠಪತಿ ಮಾತನಾಡಿ ಬಸವಣ್ಣನವರ ಆಶಯಗಳನ್ನು ತೋಂಟದ ಸಿದ್ದಲಿಂಗ ಶ್ರೀಗಳು ತಮ್ಮ ಸತತ ಪರಿಶ್ರಮದಿಂದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಆಚರಣೆ ತಂದ ಶ್ರೇಷ್ಠ ತಪಸ್ವಿಗಳು. ಪರಿಸರ ಸಂರಕ್ಷಣೆಗಾಗಿ ಕಪ್ಪತಗುಡ್ಡ ಉಳಿವಿಗಾಗಿ ಜಾಗೃತಿ ಮೂಡಿಸಿ ಸರ್ಕಾರ ಎಚ್ಚರಿಸಿದ ಪುಣ್ಯಾತ್ಮ ಎಂದರು.

ಇದನ್ನೂ ಓದಿ: Vijayapura News | ಸರಿಯಾದ ತರಬೇತಿ, ಶುದ್ಧ ಭಾಷೆ, ಆತ್ಮವಿಶ್ವಾಸ, ಮತ್ತು ಅಚ್ಚುಕಟ್ಟಾದ ಕೌಶಲ್ಯಗಳ ಅಗತ್ಯವಿದೆ – ಪ್ರೊ.ಓಂಕಾರ ಕಾಕಡೆ

ಗೌರವ ಕಾರ್ಯದರ್ಶಿ ಸುರೇಶ ಜತ್ತಿ.ತಿಕೋಟಾ ತಾಲೂಕ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ. ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ.ಈಶ್ವರ ಪೂಜಾರಿ.ಅಣ್ಣುಗೌಡ ಸಾವಳಗಿ. ಬಿಂದುರಾವ ನಾಡಗೌಡ. ಪರಗೊಂಡ ಬಿರಾದಾರ. ಮಹಾದೇವ ವಾಲಿಕಾರ. ಈರಣ್ಣ ಮಾಮನೆ. ಶಿವಾಜಿ ಮೊರೆ. ಎಮ ಎಸ್ ತಿಗಣಿಬಿದರಿ. ಗಂಗಮ್ಮ ರಡ್ಡಿ. ಲಕ್ಷ್ಮಿ ಬಿರಾದಾರ ರಾಹುಲ ಚವ್ವಾಣ. ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »