ರೋಟರಿ ಕ್ಲಬ್: ನೂತನ ಅಧ್ಯಕ್ಷರಾಗಿ ಶ್ರೀ ಸಂದೀಪ ಪಾಟೀಲ

ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನೆ, ಕೃತಕಕಾಲು ಜೋಡಣೆ, ರಕ್ತಧಾನ, ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆಯಂತಹ ಕಾರ್ಯಕ್ರಮಗಳ ಮೂಲಕ ರೋಟರಿಸಂಸ್ಥೆ ತನ್ನದೇ ಆದ ಹೆಸರು ಮಾಡಿದೆ.

0
36
ರೋಟರಿ ಕ್ಲಬ್ image

ವಿಜಯಪುರ: ವಿಜಯಪುರ ನಗರದ 1959 ರಲ್ಲಿ ಪ್ರಾರಂಭವಾದ ಪ್ರತಿಷ್ಠಿತ ಹಾಗೂ ಪುರಾತನ ಕ್ಲಬ್ ಜಗತ್ತಿನಲ್ಲಿ ರೋಟರಿ ಸಂಸ್ಥೆಯ ವಿವಿಧ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೋಟ್ಯಾಂತರ ಸದಸ್ಯರು, ತಮ್ಮ ತನುಮನ ಧನದೊಂದಿಗೆ ಹಾಗೂ ಪ್ರಬಲ ಇಚ್ಛಾಶಕ್ತಿಯೊಂದಿಗೆ ಸಮಾಜದಲ್ಲಿ ಬದಲಾವಣೆ ತರುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಕಾರಣ ಪ್ರತಿಯೊಬ್ಬರು ಪ್ರತಿವ್ಯಕ್ತಿಗೆ ಸಹಾಯ ಮಾಡುವ ಮೂಲಕ ತಮ್ಮ ಅಳಲು ಸೇವೆ ಸಲ್ಲಿಸಬೇಕೆಂದು ರೋಟರಿ ಸಂಸ್ಥೆ ಪದಗ್ರಹಣಾಧಿಕಾರಿ ಡಾ. ವಾಸುದೇವ ಬೆಂಡಿಗೇರಿ ಹೇಳದರು.

ಇದನ್ನೂ ಓದಿ: ಶಿಕ್ಷಕ: ರಾಜ್ಯದಾದ್ಯಂತ ಅನಿರ್ದಿಷ್ಟ ಕಾಲಾವಧಿಗೆ ಮುಷ್ಕರ

ಖಾಸಗಿ ಹೊಟೇಲ್‌ನಲ್ಲಿ ಜರುಗಿದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದೀಪ ಪಾಟೀಲ ಝಳಕಿ ಮಾತನಾಡಿ, ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನೆ, ಕೃತಕಕಾಲು ಜೋಡಣೆ, ರಕ್ತಧಾನ, ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆಯಂತಹ ಕಾರ್ಯಕ್ರಮಗಳ ಮೂಲಕ ರೋಟರಿಸಂಸ್ಥೆ ತನ್ನದೇ ಆದ ಹೆಸರು ಮಾಡಿದೆ. ಮುಂಬರುವ ದಿನಗಳಲ್ಲಿ ರೋಟರಿ ಸಂಸ್ಥೆಯಿಂದ ನಗರದಲ್ಲಿ ಪರಿಸರಜಾಗೃತಿ, ಶಾಲೆಗಳಗೆ ಶುದ್ಧ ಕುಡಿಯುವ ನೀರಿನ ಘಟಕ, ಸ್ವಚ್ಛತಾ ಅಂದೋಲನ, ಆರೋಗ್ಯ ಶಿಜರಗಳಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಇದನ್ನೂ ಓದಿ:ವಿಜಯಪುರ: ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಅದಕ್ಕಾಗಿ ತಾವೆಲ್ಲರೂ ಕೈಜೋಡಿಸಬೇಕೆಂದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾಗಿ ಜಿ. ಎಸ್. ಕುಲಕರ್ಣಿ, ಖಜಾಂಚಿಯಾಗಿರಾಜೇಂದ್ರ ಜೋಶಿ ಹಾಗೂ ಆಡಳತ ಮಂಡಳಿ ಸದಸ್ಯರಾಗಿ ಇಮಾಮ ಹುಲ್ಲೂರ, ಕೃಷ್ಣಾ ಗುನ್ಹಾಳಕರ, ಡಾ.ರವೀಂದ್ರ ಬೆಟ್ಟ, ವಿಶ್ವನಾಥ ಸಿದ್ಧಾಂತಿ, ರುದ್ರಗೌಡ ಪಾಟೀಲ, ಆನಂದ ಗುಜರಿ, ಚಂದ್ರಶೇಖರ ಸಿಂದೂರಅಧಿಕಾರ ವಹಿಸಿಕೊಂಡರು. ನೂತನವಾಗಿಪಾಟೀಲ ಸದಸ್ಯರಾಗಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ರೋಟರಿ ಸದಸ್ಯರು, ಪ್ರೋಬಸ್ ಕ್ಲಬ್ ಪದಾಧಿಕಾರಿಗಳು, ಇನರ್‌ವೀಲ್ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here