ಸ್ವಚ್ಛ ಮಾಡಲು ಆಗದಿದ್ದರೂ ಪರವಾಗಿಲ್ಲ, ಅದನ್ನು ಹಾಳು ಮಾಡಲು ಮುಂದಾಗಬೇಡಿ : ಪ್ರಕಾಶ ಆರ್.ಕೆ.

ಇತ್ತೀಚಿನ ದಿನದಲ್ಲಿ ಪರಿಸರ ತುಂಬಾ ಹಾನಿಗಿಡಾಗುತ್ತಿದೆ. ಕೆಟ್ಟ ಚಟಗಳಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸದೇ ಸಾಕಷ್ಟು ಗಲೀಜುಗೊಳಿಸಿ ಅದನ್ನು ಹದಗೆಡಸುತ್ತಿದ್ದೆವೆ. ನಮ್ಮ ಪರಿಸರ ಸುಂದರವಾಗಿದ್ದರೇ ನಮ್ಮ ಆರೋಗ್ಯ ಸುಂದರವಾಗುತ್ತದೆ.

0
283
ಗಾನಯೋಗಿ ಗೆಳೆಯರ ಬಳಗ

ವಿಜಯಪುರ : ಗಾನಯೋಗಿ ಸಂಘದ ವತಿಯಿಂದ ನಗರದ ಹಲವಾರು ಕಡೆ ಈಗಾಗಲೇ ಪರಿಸರದ ಅರಿವು ಮೂಡಿಸುವುದರ ಜೊತೆಗೆ ತಮ್ಮ ಸ್ವಂತ ದುಡ್ಡಿನಲ್ಲಿ ಗಾನಯೋಗಿ ಗೆಳೆಯರು ನಗರದ ಹಲವಾರು ಸಿಟಿ ಬಸ್‌ ನಿಲ್ದಾಣಗಳನ್ನು ಸ್ವಚ್ಚಗೊಳಿಸುವುದರ ಮೂಲಕ ವಿಜಯಪುರ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಗರದ ಸ್ಟೇಷನ್ ರೋಡ್ ಗೆ ಹೋಗುವ ದಾರಿಯಲ್ಲಿ ರಿಮಾಂಡ್ ಹೋಮ್ ಸಿಟಿ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿದ್ದ ನಿಲ್ದಾಣದ ಒಳಗಡೆ ಸ್ಟಾರ್, ಮಾವಾ, ಗುಟಕಾ ಹಾಗೂ ಮಧ್ಯದ ಬಾಟಲಿಗಳಿಂದ ತುಂಬಿಕೊಂಡು ಕುಡಕರ ಅಡ್ಡವಾಗಿತ್ತು ಇದರಿಂದ ಸಾರ್ವಜನಿಕರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಲ್ಲು ಅಸಹ್ಯವಾಗುತ್ತಿತ್ತು. ಗಾನಯೋಗಿ ಸಂಘದಿಂದ ನಿಲ್ದಾಣದ ಒಳಗಡೆ ಶೀಥಿಲಗೊಂಡ ಗೋಡೆಯನ್ನು ಲಾಂಬಿ ತುಂಬಿಸಿ ಅದಕ್ಕೆ ಅಂದವಾಗಿ ಪೇಂಟ್ ಮಾಡಿ ಗೋಡೆಯ ಮೇಲೆ ವಿಶ್ವರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂಕ್ಷಿಪ್ತ ಮಾಹಿತಿ ಬರೆಯಲಾಯಿತು.

ಈ ಸಂದರ್ಭದಲ್ಲಿ ಪ್ರಕಾಶ ಆರ್.ಕೆ. ಮಾತನಾಡಿ, ಇತ್ತೀಚಿನ ದಿನದಲ್ಲಿ ಪರಿಸರ ತುಂಬಾ ಹಾನಿಗಿಡಾಗುತ್ತಿದೆ. ಕೆಟ್ಟ ಚಟಗಳಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸದೇ ಸಾಕಷ್ಟು ಗಲೀಜುಗೊಳಿಸಿ ಅದನ್ನು ಹದಗೆಡಸುತ್ತಿದ್ದೆವೆ. ನಮ್ಮ ಪರಿಸರ ಸುಂದರವಾಗಿದ್ದರೇ ನಮ್ಮ ಆರೋಗ್ಯ ಸುಂದರವಾಗುತ್ತದೆ. ಎಲ್ಲರೂ ಆರೋಗ್ಯ ಕಾಳಜಿ ವಹಿಸಬೇಕು. ಎಲ್ಲೆಂದರಲ್ಲಿ ಗಲೀಜುಗೊಳಿಸಿ ಅನಾರೋಗ್ಯಕ್ಕೆ ಈಡಾಗುವುದು ನಾವೇ. ನಮ್ಮ ಪರಿಸರವನ್ನು ನಾವೇ ಸ್ವಚ್ಚವಾಗಿಡಬೇಕು ಮುಂದಿನ ಪೀಳಿಗೆಗೆ ಮಾರಕವಾಗುವುದನ್ನು ತಪ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಯಾರಿಗೂ ತೊಂದರೆಯಾಗದಂತೆ ಸಾರ್ವಜನಿಕರು ವರ್ತಿಸಬೇಕು. ಸದ್ಯ ಗಲೀಜಿನಿಂದ ಸಾಕಷ್ಟು ರೊಗ ಉದ್ಭವಿಸುತ್ತಿವೆ, ಅದನ್ನು ನಾವೆಲ್ಲರೂ ತಡೆಗಟ್ಟಬೇಕು. ಮಲೀನಗೊಳ್ಳುತ್ತಿರುವ ಪರಿಸರಕ್ಕೆ ನಾವೆ ವಿದಾಯ ಹಾಡಬೇಕು. ಸಾರ್ವಜನಿಕರು ತಾವೆಲ್ಲಿ ಸುತ್ತಾಡುತ್ತೀರೋ ನಿಮ್ಮ ಸುತ್ತ ಮುತ್ತಾ ತಂಬಾಕು, ಗುಟಕಾ, ಮಾವ ಮುಂತಾದವುಗಳಿಂದ ಅಲ್ಲಲ್ಲಿ ಉಗುಳಿ ಪರಿಸರ ಮಲೀನಗೊಳಿಸಬೇಡಿ ಸಾಧ್ಯವಾದಷ್ಟು ನಿಮ್ಮಿಂದ ಸ್ವಚ್ಛ ಮಾಡಲು ಆಗದಿದ್ದರೂ ಸಹಿತ ಅದನ್ನು ಹಾಳು ಮಾಡಲು ಮುಂದಾಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಂತೋಷ ಚವ್ಹಾಣ, ಬಾಹುಬಲಿ ಶಿವಣ್ಣವರ, ರವಿ ರತ್ನಾಕರ, ರಾಜಕುಮಾರ ಹೊಸಟ್ಟಿ, ವಿಕಾಸ ಕಂಬಾಗಿ, ಸಚೀನ ವಾಲಿಕಾರ, ಮಹೇಶ ಕುಂಬಾರ, ಆನಂದ ಹೊನವಾಡ, ಪ್ರಮೋದ ಚವ್ಹಾಣ, ರೇವಣ ಸಿದ್ದಯ್ಯ ಹಿರೇಮಠ, ವಿಠ್ಠಲ ಗುರುವಿನ, ಶ್ರೀಶೈಲ ಕುಮಸಗಿ, ವಿರೇಶ ಸೊನ್ನಲಗಿ, ಶ್ರೀಶೈಲ ಜುಮನಾಳ, ಸಚೀನ ಚವ್ಹಾಣ, ರಾಹುಲ ಎಮ್. ಬಾಬು ಮುಂತಾದವರು ಇದ್ದರು.


ambedkar image

LEAVE A REPLY

Please enter your comment!
Please enter your name here