ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿ

41.47 ಮೀಟರ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾನೆ.

0
64
ಚಕ್ರ ಎಸೆತ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಅವಿನಾಶ ತಳಕೇರಿ

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಅವಿನಾಶ ತಳಕೇರಿ (17) ಬಾಲಕರ ಪ್ರೌಢಶಾಲಾ ವಿಭಾಗದ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಸೋಮವಾರದಂದು ಮಂಗಳೂರು ಜಿಲ್ಲೆಯ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಬಾಲಕರ ಪ್ರೌಢಶಾಲಾ ವಿಭಾಗದ ಚಕ್ರ ಎಸೆತದಲ್ಲಿ ವಿಜಯಪುರ ಜಿಲ್ಲೆಯಿಂದ ಭಾಗವಹಿಸಿ ಸುಮಾರು 41.47 ಮೀಟರ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾನೆ.

ಇದನ್ನೂ ಓದಿ:ನುಡಿಸದಿರು ನುಡಿಯದ ವೀಣೆ

ವಿದ್ಯಾರ್ಥಿ ಸಾಧನೆಗೆ ಮಾರ್ಗದರ್ಶಕರಾದ ಹಾಜಿಲಾಲ್ ಮುಲ್ಲಾ, ಭೀಮಾಶಂಕರ ಕೆಂಭೋಗಿ, ರೋಹಿತ್ ರಾಠೋಡ, ವಿನೋದ, ಗ್ರಾಮದ ಗುರು-ಹಿರಿಯರು, ತಂದೆ ಮಲ್ಲಿಕಾರ್ಜುನ ತಳಕೇರಿ ಹಾಗೂ ತಾಯಿ- ನಾಗಮ್ಮ ತಳಕೇರಿ, ಶಾಲಾ ಮುಖ್ಯ ಶಿಕ್ಷಕರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here