ಸೌಹಾರ್ದ ಹಿತ ಠೇವಣಿದಾರರ ಹಿತರಕ್ಷಣೆಗೆ ಟಾಸ್ಕ ಪೋರ್ಸ್

0
139

ವಿಜಯಪುರ : ಕೇಂದ್ರ ಮಟ್ಟದಲ್ಲಿ ನೂತನವಾಗಿ ಸಹಕಾರ ಸಚಿವಾಲಯದ ಸ್ಥಾಪನೆಯಿಂದಾಗಿ ಸಹಕಾರಿ ಕ್ಷೇತ್ರ ಮತ್ತೆ ಮುನ್ನೆಲೆಗೆ ಬರುತ್ತಿದ್ದು ಕ್ಷೇತ್ರಕ್ಕೆ ಪ್ರಾಧ್ಯಾನ್ನತೆ ಸೃಷ್ಠಿಯಾಗಿದೆ ಎಂದು ಕರ್ನಾಟಕ ರಾಜ್ಯ ಸೌಹರ್ದಾ ಸಂಯುಕ್ತ ಸಹಕಾರಿ ನಿಗಮದ ಅಧ್ಯಕ್ಷ ಬಿ.ಎಚ್.ಕೃಷ್ಣಾ ರಡ್ಡಿ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀಲಕಂಠೇಶ್ವರ ಮಂಗಲ ಭವನ ವಿಜಯಪುರದಲ್ಲಿ ಸಹಕಾರಿಗಳ ಸೌಹಾರ್ದ ಠೇವಣಿದಾರರ ಹಿತ ರಕ್ಷಣೆಗೆ ಟಾಸ್ಕ ಪೋಸ್ ್ ರಚನೆ ಮಾಡಿದ್ದರ ಕುರಿತು ಸಹಕಾರಿಗಳು ಜವಾಬ್ದಾರಿಗಳು ಕಾರ್ಯನಿರ್ವಹಿಸಬೇಕಾಗಿದ್ದು ಸರ್ಕಾರದ ಮತ್ತು ಸಹಕಾರಿಗಳ ಮನಸ್ಸಿನಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರದ ಬಗ್ಗೆ ಸಕಾರಾತ್ಮಕ ಉತ್ತಮ ಭಾವನೆಗಳನ್ನು ಬೆಳೆಸಬೇಕಾದೆ ಎಂದು ತಿಳಿಸಿದರು.

ಸಹಕಾರ ಕ್ಷೇತ್ರ ಬೃಹತ್ ಆಕಾರವಾಗಿ ಬೆಳೆದರು ಇದುವರೆಗೂ ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಈಗ ಅಸ್ತಿತ್ವಕ್ಕೆ ಬಂದಿದೆ ಸಹಕಾರ ಕ್ಷೇತ್ರದ ವಿಶ್ವಾಸ ಮರುಸ್ಥಾಪನೆಗೆ ಠೇವಣಿದಾರರ ಹಿತ ರಕ್ಷಣೆಗೆ ಸಂಯುಕ್ತ ಸಹಕಾರಿ ಮಹತ್ವ ಹೆಜ್ಜೆನಿರಿಸಿದ್ದು ಯಾವುದೇ ಸೌಹಾರ್ದ ಸಹಕಾರ ಸಂಸ್ಥೆಗಳ ಬಗ್ಗೆ ಠೇವಣಿದಾರರಿಂದ ದೂರು ಸ್ವೀಕಾರವಾದಲ್ಲಿ ಠೇವಣಿದಾರರಿಗೆ ಹಣ ಕೊಡಿಸುವ ಹಾಗೂ ವಂಚನೆ ಹಣಕಾಸು ವ್ಯವಹಾರದಲ್ಲಿ ತೊಡಗಿರುವ ಸಹಕಾರ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜರುಗಿಸಲು ಉನ್ನತ ಅಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕಾನೂನು ಉಲ್ಲಂಘಿಸಿ ಅನಗತ್ಯ ಶಾಖೆಗಳನ್ನು ತೆರೆಯುತ್ತಿದ್ದು ಹಾಗೂ ಹೆಚ್ಚಿನ ಬಡ್ಡಿ ಆಮೀಸ ಒಡ್ಡುತ್ತಿರುವುದು ಕಂಡು ಬಂದಿದ್ದು ಇಂತಹ ಸಂಸ್ಥೆಗಳ ಮೇಲೆ ಜಿಲ್ಲಾ ಒಕ್ಕೂಟಗಳು ಹಾಗೂ ಸಹಕಾರಿ ಸಂಸ್ಥೆಗಳು ಗಮನ ಹರಿಸಿ ಕಾನೂನು ಪ್ರಾಧಿಕಾರಿಗಳ ಗಮನಕ್ಕೆ ತರಬೇಕಾಗಿದೆ ಎಂದು ಹೇಳಿದರು.

ಸಹಕಾರಿ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಹಲವಾರು ತೊಡಕುಗಳಿದ್ದು ಅವುಗಳನ್ನು ನಿವಾರಣೆ ಹಾಗೂ ಕಾಯ್ದೆ ಮೂಲ ಆಶಯ ಮರುಸ್ಥಾಪನೆಗೆ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದ್ದು ಪ್ರಸಕ್ತ ಅಧಿವೇಶನದಲ್ಲಿ ನಾನು ಮಾತನಾಡಿ ತಿದ್ದು ಪಡಿ ಮಾಡಿಸಿದ್ದು ಇರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಿದ್ರಾಮಪ್ಪ ಉಪ್ಪಿನ ಮಾನ್ಯ ನಿರ್ದೆಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು, ಗುರುಶಾಂತ ನಿಡೋಣಿ ರಾಜ್ಯ ಕಾರ್ಯದರ್ಶಿ ಸಹಕಾರ ಭಾರತಿ ಕರ್ನಾಟಕ, ಉಪ ನಿರ್ದೇಶಕರು ವಿಡಿಸಿಸಿ ಬ್ಯಾಂಕ್ ವಿಜಯಪುರ, ರಮೇಶ ವೈದ್ಯ ರಾಷ್ಟ್ರೀಯ ಅಧ್ಯಕ್ಷರು ಸಹಕಾರ ಭಾರತ, ಶ್ರೀಧರ ಮಾನ್ಯ ನಿರ್ದೇಶಕರು ಕ.ರಾ.ಸೌ.ಸಂ.ಸನಿ. ಬೆಂಗಳೂರು, ಚನಬಸಯ್ಯ ಹಿರೇಮಠ ಉಪಾಧ್ಯಕ್ಷರು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ನಿ. ವಿಜಯಪುರ, ಗುರುದೇವ ಅಂಗಡಿ ಅಧ್ಯಕ್ಷರು ಶ್ರೀ ಕೂಡಲಸಂಗಮ ಸೌಹಾದ ಸಹಕಾರಿ ನಿ. ವಿಜಯಪುರ, ವಿರುಪಾಕ್ಷಯ್ಯ ಹಿರೇಮಠ ನಿರ್ದೇಶಕರು ಶ್ರೀ ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ನಿ. ವಿಜಯಪುರ, ಶ್ರೀಕಾಂತ ಗುರುವೆ ಮಾನ್ಯ ಉಪ ಪ್ರಧಾನ ವ್ಯವಸ್ಥಾಪಕರು ಸಂಯುಕ್ತ ಸಹಕಾರಿ, ಬಸವರಾಜ ಹೊಂಗಲ ಮಾನ್ಯ ಪ್ರಾಂತೀಯ ವ್ಯವಸ್ಥಾಪಕರು, ಬಸವರಾಜ ಎಸ್. ಜಿಲ್ಲಾ ಸಂಯೋಜಕರು, ಶ್ರೀಕಾಂತ ಹಾಗೂ ಪ್ರತಿಭಾ ಮಠ, ಉಪ ಸ್ಥಿತರಿದ್ದರು.


ambedkar image

LEAVE A REPLY

Please enter your comment!
Please enter your name here