ಮೇ ೧೬ ರಿಂದ ಶೈಕ್ಷಣಿಕ ವರ್ಷಾರಂಭ- ಶಿಕ್ಷಣ ಸಚಿವ ಬಿ.ಸಿ.ನಾಗೇಶ್

2022-23ನೇ ಶೈಕ್ಷಣಿಕ ಸಾಲಿನಲ್ಲಿ 1-9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದೆ.

0
138

ಬೆಂಗಳೂರು: ಮೇ 16ರಿಂದ ಶೈಕ್ಷಣಿಕ ವರ್ಷಾರಂಭ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೋವಿಡ್ ಕಾರಣದಿಂದಾಗಿ ನಮ್ಮ ಮಕ್ಕಳ ಕಲಿಕಾ ಮಟ್ಟ, ತರಗತಿಯ ಮಟ್ಟಕ್ಕೆ ಇಲ್ಲ ಎನ್ನುವುದು ನಮ್ಮ ಸರ್ವೆಗಳಲ್ಲಿ, ಕೇಂದ್ರ ಸೇರಿದಂತೆ ಎನ್‌ಜಿಓ ನಡೆಸಿದ ಸರ್ವೆಗಳಲ್ಲಿ ಕಂಡು ಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ, ರಾಜ್ಯದ ಎಲ್ಲಾ ಅಧಿಕಾರಿಗಳು ಸಭೆ ನಡೆಸಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 2022-23ನೇ ಶೈಕ್ಷಣಿಕ ಸಾಲಿನಲ್ಲಿ 1-9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದೆ.

ಈ ಬಾರಿ 15 ದಿನಗಳ ರಜೆಯನ್ನು ಕಡಿತ ಮಾಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು, ಪ್ರತಿನಿಧಿಗಳ ಸಹಕಾರ ಸಿಕ್ಕಿದೆ. ಮುಂದಿನ ಶೈಕ್ಷಣಿಕ ಸಾಲು ಮೇ 16 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಆ ದಿನಗಳು ಕಲಿಕಾ ಚೇತರಿಕೆಯನ್ನು ನಡೆಸಲಿದ್ದು, ಬಳಿಕ ಪ್ರತಿ ದಿನ ನಡೆಸಲಾಗುವುದು, ಇದಲ್ಲದೇ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಕಲಿಕ ಮಟ್ಟ ಹೆಚ್ಚಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.


ambedkar image

LEAVE A REPLY

Please enter your comment!
Please enter your name here