ಅಕ್ಕ, ತಂಗಿಯರಿಬ್ಬರನ್ನೂ ವರಿಸಿದ (ಲಕ್ಕಿ) ವರ : ಮದುವೆ ಪೋಟೋ ಆಮಂತ್ರಣ ಪತ್ರಿಕೆಯೂ ಸಖತ್ ವೈರಲ್

0
184

ಇತ್ತೀಚೆಗೆ ಒಂದೇ ಮುಹೂರ್ತದಲ್ಲಿ ಅಕ್ಕ, ತಂಗಿ ಇಬ್ಬರನ್ನು ಮದುವೆಯಾಗುವ ಮೂಲಕ (ಲಕ್ಕಿ) ವರನೊಬ್ಬ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಾನೆ. ಅಂತೆಯೇ ಈ ಮದುವೆಯ ಆಮಂತ್ರಣ ಪತ್ರಿಕೆಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸುಪ್ರಿಯ ಹಾಗೂ ಲಲಿತ ಎಂಬುವವರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಆಗಿರುವ ವಿಶೇಷ ಪೋಟೊ ಹಾಗೂ ಮದುವೆಯ ಕರೆಯೋಲೆ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಇದೊಂದು ಎಲ್ಲರೂ ನಂಬಲೇಬೇಕಾದ ಕಲ್ಪನೆಗೂ ಮೀರಿದ ನಿಜಾಂಶವಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಮೇ 7 ರಂದು ನಡೆದ ಇಂತಹದೊಂದು ವಿಶೇಷ, ವಿಭಿನ್ನ ಮದುವೆಯ ಪೋಟೊಗಳು ಸಖತ್ ವೈರಲ್ ಆಗಿದ್ದು, ಸುಪ್ರಿಯ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ, ತಂಗಿ ಲಲಿತಾಗೆ ಕಿವಿ ಕೇಳಿಸುವುದಿಲ್ಲ. ಒಬ್ಬರಿಗೆ ಮದುವೆಯಾದ್ರೆ ಮತ್ತೊಬ್ಬರ ಪರಿಸ್ಥಿತಿ ಹೇಗೆ ಎಂದು ಯೋಚನೆ ಮಾಡಿದ ಪೋಷಕರು ಅಕ್ಕ ತಂಗಿಯನ್ನು ಹೀಗೆ ಒಬ್ಬನಿಗೇ ಕೊಟ್ಟು ಮದುವೆ ಮಾಡಿದ್ದಾರೆ. ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ.

ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸುವ ಸನ್ನಿವೇಶ ಕೇವಲ ಸಿನಿಮಾದಲ್ಲಿ ಮಾತ್ರ ನೋಡಿದ್ದೆವು, ಆದರೆ ಕೋಲಾರದಲ್ಲಿ ನಡೆದಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಮದುವೆ ಪೋಟೊ ಹಾಗೂ ಮದುವೆ ಆಮಂತ್ರಣ ಪತ್ರಿಕೆ ಸಖತ್ ವೈರಲ್ ಆಗಿದೆ. ಇನ್ನು ಕೊರೊನಾ ಕಾಲದಲ್ಲಿ ಅಕ್ಕ ತಂಗಿ ಇಬ್ಬರನ್ನು ಮದುವೆಯಾದ (ಲಕ್ಕಿ) ಮಧುಮಗನ “ಕೊರೊನಾ ಆಫರ್ ಮದುವೆ” ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಅಕ್ಕ ತಂಗಿಯನ್ನು ವರಿಸಿದ ವರ ಇದೀಗ ರಾಜ್ಯದೆಲ್ಲೆಡೆ ದೊಡ್ಡ ಸುದ್ಧಿಯಾಗಿದ್ದಾನೆ.

ವೇಗಮಡುಗು ಗ್ರಾಮದ ರಾಣೆಮ್ಮ ಮತ್ತು ಸುಬ್ಬಮ್ಮ ನಾಗರಾಜಪ್ಪ ಅವರ ದ್ವಿತೀಯ ಮತ್ತು ತೃತೀಯ ಪುತ್ರಿ ಇಬ್ಬರು ಪುತ್ರಿಯರನ್ನು ಗಡ್ಡೂರು ಗ್ರಾಮದ ಉಮಾಪತಿ ಎಂಬಾತ ವರಿಸಿದ್ದಾನೆ. ಸುಪ್ರಿಯಾ ಮತ್ತು ಲಲಿತ ಇಬ್ಬರನ್ನು ಮೇ. 7 ರಂದು ಮದುವೆಯಾಗಿದ್ದಾನೆ. ಅರತಕ್ಷತೆ ಕಾರ್ಯಕ್ರಮವನ್ನು ವಧುವಿನ ಸ್ವಗೃಹ ವೇಗಮಡುಗು ಗ್ರಾಮದಲ್ಲಿ ನಡೆಸಿಕೊಡಲಾಗಿದೆ. ಈತ ಇಬ್ಬರನ್ನು ವರಿಸಿರುವ ಚಿತ್ರ ಹಾಗೂ ಲಗ್ನಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಗೀಗ ಮದುವೆಯಾಗಲಿಕ್ಕೆ ಒಂದು ವಧು ಸಿಗುವುದೇ ಕಷ್ಟ. ಆದರೆ ಉಮಾಪತಿ ಅಕ್ಕ ತಂಗಿ ಇಬ್ಬರನ್ನು ಮದುವೆಯಾಗಿದ್ದು, ಆತನ ಮದುವೆ ಚಿತ್ರಗಳು ಹಾಗೂ ಆಮಂತ್ರಣ ಪತ್ರಿಕೆ ಎಲ್ಲೆಡೆ ಸಖತ್ ವೈರಲ್ ಆಗಿವೆ. ವಧುಗಳ ತಂದೆಯಾದ ನಾಗರಾಜಪ್ಪನಿಗೂ ಇಬ್ಬರು ಪತ್ನಿಯರಿದ್ದು, ಅವರೂ ಇದೇ ರೀತಿ ಅಕ್ಕ ತಂಗಿಯರನ್ನೇ ವರಿಸಿರುವುದೆಂದು ಹೇಳಲಾಗಿದೆ. ಹಾಗಾಗಿ ಈ ಕುಟುಂಬದಲ್ಲಿ ಈ ರೀತಿಯ ಮದುವೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಕ್ಕನನ್ನು ಕೇಳಿದಾಗ, ತಂಗಿಯನ್ನು ಕೂಡ ಮದುವೆಯಾಗಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ವಧುವಿನ ಕಡೆಯವರ ಈ ಬೇಡಿಕೆ ಒಪ್ಪಿ ಉಮಾಪತಿ ಮದುವೆಯಾಗಿದ್ದಾನೆ ಎನ್ನಲಾಗಿದೆ.

ಇಬ್ಬರಲ್ಲಿ ಹಿರಿಯವಳಾದ ಸುಪ್ರಿಯಾ ಎಂಬುವವರು ಹುಟ್ಟು ಮೂಗಿಯಾಗಿದ್ದು, ಇದು ಕೂಡಾ ಇಬ್ಬರನ್ನೂ ಒಂದೇ ಬಾರಿಗೆ ಮದುವೆಯಾಗಲು ಕಾರಣವೆಂದು ಸಮಜಾಯಿಷಿ ನೀಡಿದ ವರ ಉಮಾಪತಿ ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲದಿದ್ದರೂ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದಾನೆ.

-ಮಂಜುನಾಥ.ಎಸ್.ಕಟ್ಟಿಮನಿ


LEAVE A REPLY

Please enter your comment!
Please enter your name here