ಎರಡನೇ ಡೋಸ್‌ ಹಾಕಿಸಿಕೊಳ್ಳಲು 12 ವಾರಗಳ ನಂತರ ಲಸಿಕೆ ಕೇಂದ್ರಕ್ಕೆ ಬಗ್ಗೆ : ರಾಜ್ಯ ಸರಕಾರ

0
143

ಬೆಂಗಳೂರು ಮೇ 15: ಮೊದಲ ಡೋಸ್ ಲಸಿಕೆ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬಾರದಂತೆ ರಾಜ್ಯ ಸರ್ಕಾರ ಹೇಳಿದೆ, ತಜ್ಞರು ನೀಡಿರುವ ಸಲಹೆಯನ್ನು ಉಲ್ಲೇಖಿಸಿರುವ ರಾಜ್ಯ ಸರ್ಕಾರದ ಲಸಿಕಾ ಅಭಿಯಾನದ ನಿರ್ದೇಶಕರು, “ಬದಲಾದ ನಿಯಮಗಳ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದವರಿಗೆ 12-16 ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಬಹುದಾಗಿದೆ ಎಂದು ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ ಟಿಎಜಿಐ) ಲಸಿಕೆ ಸಂಬಂಧ ರಾಷ್ಟ್ರೀಯ ತಜ್ಞರ ಗುಂಪು (ಎನ್ಇಜಿವಿಎಸಿ) ತಿಳಿಸಿದೆ.

6-8 ವಾರಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯುವ ಹಳೆಯ ನಿಯಮವನ್ನು ಬದಲಾವಣೆ ಮಾಡಲಾಗಿದೆ. 12 ವಾರಕ್ಕಿಂತ ಮುನ್ನವೇ ಲಸಿಕೆ ಕೇಂದ್ರಗಳಿಗೆ ಬರುವ ಅಗತ್ಯವಿಲ್ಲ ಎಂದು ಮನವಿ ಮಾಡಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

12 ವಾರಗಳ ಅಂತರದ ನಿಯಮ ಕೋವಿಶೀಲ್ಡ್ ಗೆ ಮಾತ್ರವೇ ಅನ್ವಯಿಸಲಿದ್ದು, ಕೋವ್ಯಾಕ್ಸಿನ್ ಗೆ ಅನ್ವಯವಾಗುವುದಿಲ್ಲವೆಂದು ಸರ್ಕಾರ ಹೇಳಿದೆ. ಲಸಿಕೆ ಕೊರತೆಯ ಹಿನ್ನೆಯಲ್ಲಿ 18-44 ವಯಸ್ಸಿನವರಿಗೆ ಮೊದಲ ಡೊಸ್ ಅಭಿಯಾನವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ.


ambedkar image

LEAVE A REPLY

Please enter your comment!
Please enter your name here