ಮ್ಯಾಟ್ರಿಮೊನಿಯಲ್ಲಿ ಹಣ ಕಳೆದುಕೊಂಡ ಹಾಸನದ ಹುಡುಗ

0
180

ಹಾಸನ: ಜೀವನ ಸಂಗಾತಿಗಾಗಿ ಹುಡುಕುತ್ತಿದ್ದವನಿಗೆ ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಹುಡುಗಿಯನ್ನು ಕಂಡು ಮದುವೆಯಾದರೆ ಈಕೆಯನ್ನೇ ಮದುವೆಯಾಗಬೇಕು ಅಂತ ಆತ ನಿರ್ಧರಿಸಿಬಿಟ್ಟಿದ್ದ. ಆದರೆ ಬದಲಾಗಿ ಆಕೆ ಮಾತ್ರ ಮಾಡಿದ್ದು ಮಾತ್ರ ಮಹಾಮೋಸ. ಆ ಮಹಿಳೆ ಹೆಸರು ಲಕ್ಷ್ಮಿ.

ಹಾಸನ ಮೂಲದ 40 ವರ್ಷದ ಅವಿವಾಹಿತ ಪರಮೇಶ್‌ಗೆ ಮ್ಯಾಟ್ರಿಮೋನಿಯಲ್ಲಿ‌ ಪರಿಚಯವಾಗಿದ್ದ ಹುಡುಗಿ ಲಕ್ಷ್ಮೀ. ನಂತರ ಇಬ್ಬರೂ ಬೆಂಗಳೂರಿನ ಯಲಹಂಕದಲ್ಲಿ ಭೇಟಿಯಾಗಿ ಮದುವೆ ಮಾತುಕತೆ ಕೂಡ ನಡೆಸಿಕೊಂಡಿರುತ್ತಾರೆ. ಪರಮೇಶನನ್ನ ಭೇಟಿಯಾದ ದಿನವೇ ಲಕ್ಷ್ಮೀ ತಾನೊಬ್ಬ ಅನಾಥೆ. ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತಾನು ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದೇನೆ ಎಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಮರಳು ಮಾಡಿದ್ದಾಳೆ.

ನನಗೆ ಬರುವ ಸಂಬಳವನ್ನು ಚಿಕ್ಕಮ್ಮನೇ ಪೂರ್ತಿಯಾಗಿ ಪಡೆಯುತ್ತಾರೆ. ಹೀಗಾಗಿ ನಾನು ಕಷ್ಟದಲ್ಲಿ ಬದುಕುತ್ತಿದ್ದೇನೆ ಅಂತ ಸುಳ್ಳು ಹೇಳಿ ನಂಬಿಸಿ ಹಂತ ಹಂತವಾಗಿ 6 ಲಕ್ಷ ಹಣವನ್ನು ಪಡೆದಿದ್ದಾಳೆ. ಮದುವೆಯಾಗುವ ಹುಡುಗಿ ಎಂದು ನಂಬಿ ಪರಮೇಶ್ ಕೂಡ ಕೇಳಿದಾಗಲೆಲ್ಲ ಹಣ ಕೊಟ್ಟಿದ್ದಾನೆ. ಆದ್ರೆ ಈಗ ಉಲ್ಟಾ ಹೊಡೆದಿರುವ ಲಕ್ಷ್ಮಿ ಬ್ಲಾಕ್‌ಮೇಲ್ ಮಾಡಿ ಪರಮೇಶ್​ನಿಂದ ಹಣ ವಸೂಲಿ ಮಾಡುತ್ತಿದ್ದಾಳೆ.

ಶುಂಠಿ ಬೆಳೆದು ಜೀವನ ಸಾಗಿಸುತ್ತಿದ್ದ ಪರಮೇಶ್, ಡಿಸೆಂಬರ್ 2019 ರಿಂದ ಜೂನ್ 2020 ರ ತನಕ ಲಕ್ಷ್ಮಿಗೆ ಸುಮಾರು 6 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾನೆ. ಆದರೆ ಕೊನೆಗೆ ಲಕ್ಷ್ಮಿ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ನನಗೆ ಯಾವುದೇ ರೀತಿಯ ಫೋನ್ ಮಾಡಬೇಡ. ಹಾಗೇನಾದರೂ ಫೋನ್ ಮಾಡಿದರೆ ನಿನ್ನ ಮೇಲೆ ಅತ್ಯಾಚಾರ ಕೇಸ್ ನೀಡುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಇದರಿಂದ ಹೆದರಿದ ಪರಮೇಶ್ ಹಾಸನ ಪೊಲೀಸರ ಮೊರೆ ಹೋಗಿದ್ದು, ಪರಮೇಶ್ ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಲಕ್ಷ್ಮಿಯನ್ನು ಮತ್ತು ಆಕೆಗೆ ಸಹಾಯ ಮಾಡುತ್ತಿದ್ದ ಶಿವಣ್ಣ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ.

ಈಕೆ ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಇನ್ನು ಮೋಸ ಹೋಗಿರುವ ಪರಮೇಶ್ ಮಾತ್ರ ದಯವಿಟ್ಟು ಕಷ್ಟಪಟ್ಟು ದುಡಿದ ಹಣವನ್ನು ಮೋಸದಿಂದ ಕಿತ್ತುಕೊಂಡು ಯಾರಿಗೂ ನೋವು ಕೊಡಬೇಡಿ ಅಂತಾ ಹಿಡಿಶಾಪ ಹಾಕುತ್ತಿದ್ದಾರೆ.

ambedkar image

LEAVE A REPLY

Please enter your comment!
Please enter your name here