ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ: ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಾಕ್ಷರಿ

0
236

ವಿಜಯಪುರ ನ.03: ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಹಾಗೂ ಕೇಂದ್ರ ಸರಿ ಸಮಾನ ವೇತನ ಭತ್ಯ ದೊರಕಿಸುವುದೇ ಮುಖ್ಯ ಗುರಿ ಎಂದು ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಾಕ್ಷರಿ ಹೇಳಿದರು.

ಇಂದು ನಗರದ ಆಶ್ರಮ ಹತ್ತಿರದ ಕಿತ್ತೂರು ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನೌಕರರ ಸಮಸ್ಯೆಗಳ ಕುರಿತು ಸಂವಾದ ಹಾಗೂ ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರೀಕ್ಷಿತವಾಗಿ ಹೋರಾಟ ಮಾಡುವೆವು, ಈಗಾಗಲೇ ಒಂದು ವರ್ಷದಲ್ಲಿ ನೌಕರರ 20 ರಿಂದ 25 ರಷ್ಟು ಬೇಡಿಕೆಗಳು ಈಡೇರಿವೆ ಇಷ್ಟಾದರೂ ಕೂಡ ಮುಖ್ಯ ಗುರುಗಳ ವೇತನ ತಾರತಮ್ಯ ಸಮಸ್ಯ, ಸಿ ಆಂಡ್ ಆರ್, ದೈಹಿಕ ಶಿಕ್ಷಕರ ವೇತನ ತಾರತಮ್ಯ, ಕಾಲ ಕಾಲಕ್ಕೆ ವೇತನ ಬಡ್ತಿ ನೀಡದಿರುವುದು ಎರಡು ಮೂರು ತಿಂಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಸರ್ಕಾರಿ ನೌಕರರು ಒಳ-ಹೊರ ರೋಗಿಯಾಗಿ ಸಂಪೂರ್ಣ ನಗದುರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಎಲ್ಲಾ ವಿಧದ ಔಷದಿಗಳು,ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್, ಲ್ಯಾಬೊರೇಟರಿ ಪರೀಕ್ಷೆಗಳು, ಉಚಿತವಾಗಿ ದೊರೆಯಲಿದೆ. ಈ ಯೋಜನೆಯಲ್ಲಿ ರೋಗಿಗಳಿಗೆ ವಾಹನ ಸೌಲಭ್ಯ ಹಾಗೂ ಅವಕಾಶ ಕಲ್ಪಿಸಲಾಗಿದೆ. ನೌಕರರ ವಿವಿಧ ರೀತಿಯ ಸೇವಾ ಸವಲತ್ತುಗಳನ್ನು ಆನ್‍ಲೈನ್ ಮೂಲಕ ಒದಗಿಸಲು ಸಾಪ್ಟವೇರ್ ಸಿದ್ಧಪಡಿಸಲಾಗುತ್ತಿದ್ದು, ಇದರಿಂದಾಗಿ ನೌಕರರು ಕಚೇರಿಗೆ ಅಲೆದಾಡುವುದನ್ನು ತಡೆಗಟ್ಟಬಹುದು ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕೆ.ಜಿ.ಐ.ಡಿ. ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವಂತೆ ಸರ್ಕಾರದ ಮೇಲೆ ನಿರಂತರ ಒತ್ತಾಯ ತಂದ ಪರಿಣಾಮ, ಇಲಾಖೆಯ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ರಾಜ್ಯ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಜಗದೀಶ ಗೌಡ ಪಾಟೀಲ ಮಾತನಾಡಿ ವೃಂದ ಸಂಘಗಳೆಲ್ಲವೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧೀನಲ್ಲಿರುವುದರಿಂದ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಸ್ಪಂದಿಸದೇ ಇರುವ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಡಿ ಪ್ರತಿಯೊಬ್ಬರು ವೃತ್ತಿ ಬದ್ಧತೆಯನ್ನು ಪಾಲಿಸಿ ಕಾರ್ಯನಿರ್ವಹಿಸಬೇಕು ಸಂಘಗಳು ನೌಕರರ ಹಿತ ಕಾಪಾಡಬೇಕು ಎಂದು ಅವರು ಹೇಳಿದರು.

ಆದರ್ಶ ಶಿಕ್ಷಕ ವೇದಿಕೆಯ ಸಂಚಾಲಕ ಜಗದೀಶ ಬೋಳಸೂರ ಪ್ರಾಸ್ತಾವಿಕವಾಗಿ ಮಾತನಾಡಿ ಮುಂಬರುವ ದಿನಗಳಲ್ಲಿ ಎನ್.ಪಿ.ಎಸ್ ಯೋಜನೆಯನ್ನು ರದ್ದು ಪಡಿಸಿ ಕೇಂದ್ರ ಸರಿ ಸಮಾನ ವೇತನ ಜಾರಿಗಾಗಿ ಪ್ರಯತ್ನ ಹಾಗೂ ಹೋರಾಟಕ್ಕೆ ಅನಿಯಾಗಬೇಕು ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಸುರೇಶ ಶೇಡಶ್ಯಾಳ ಮಾತನಾಡಿ ಎನ್.ಪಿ.ಎಸ್ ಎಂಬುದು ವಿಷಮ ಸ್ಥಿತಿಯ ಕಳೆಲ ಇದ್ದಂತೆ ಕೂಡಲೇ ಸರ್ಕಾರ ನೇಮಿಸಿರುವ ವರದಿಯನ್ನು ತೆಗೆದುಕೊಂಡು ಶಿಕ್ಷಕರ ಪರವಾಗಿ ಸಂಘಟನೆ ತೊಡಗಿಸಿ ಎನ್.ಪಿ.ಎಸ್ ರದ್ದುಗೊಳಿಸಲು ಸರ್ಕಾರ ಸಂಘ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು ನೌಕರರ ಬೇಡಿಕೆಗಳನ್ನು ಈಡೆರಿಸಲು ಆಗ್ರಹಿಸಿದರು.
ಸದಾಶಿವ ಹಂಚಲಿ ಮಾತನಾಡಿ ನೂತನ ಶಿಕ್ಷಣ ನೀತಿ ಜಾರಿಯಾಗಲಿ ಶಿಕ್ಷಕರು ತಮ್ಮ ಸಾಮರ್ಥ್ಯನ್ನು ವೃದ್ಧಿಸಿಕೊಳ್ಳುವುದು ಅನಿವಾರ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾದ್ಯಕ್ಷರಾದ ಶ್ರೀಶೈಲ ಅಕ್ಷರ, ರಾಜ್ಯ ಉಪಾಧ್ಯಕ್ಷರಾದ ಮೋಹನ್ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಭು ಲಿಂಗೇಗೌಡ, ಕೋಶಾಧ್ಯಕ್ಷ ಜುಬೇರ ಕೆರೂರ, ಕಾರ್ಯದರ್ಶಿಗಳಾದ ರಾಜಶೇಖರ ದೈವಾಡಿ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ ಬೆಳ್ಳೆನ್ನವರ, ಉಮೇಶ ಕವಲಗಿ,ರಾಜು ಬಿಸನಾಳ, ಶಿವಾನಂದ ಮಂಗಾನವರ,ಅಶೋಕ ಪಾಟೀಲ ರೆಡ್ಡಿ, ರಾಘು ಕುಲಕರ್ಣಿ, ಬೀಮನಗೌಡ ಬಿರಾದರ, ಎಸ್.ಬಿ ಬಿರಾದಾರ, ಆರ್.ಎನ್. ಅಂಗಡಿ, ಎಮ್.ಎನ್ ಅಂಗಡಿ, ಎಂ.ಎಸ್.ಬೂಸಾಗೊಂಡ, ಎಚ್.ಎಮ್ ಚಿತ್ತರಗಿ, ಬಸವರಾಜ ಬೇವನೂರ, ಎ.ಎಂ ಬಗಲಿ, ಎಸ್.ಎನ್ ಪಡಶೆಟ್ಟಿ, ಬಸವರಾಜ ದೋರನಹಳ್ಳಿ, ಎಚ್.ಕೆ.ಬೂದಿಹಾಳ,ಚಿನ್ನಯ್ಯ ಮಠಪತಿ,ಸಂತೋಷ ಕುಲಕರ್ಣಿ, ರವೀಂದ್ರ ಉಗಾರ, ಬಸವರಾಜ ಅಮರಪ್ಪಗೋಳ ಎಲ್ಲ ತಾಲೂಕು ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನೌಕರರು, ಶಿಕ್ಷಕರು ಹಾಗೂ ಇತರರು ಉಪಸ್ಥಿರಿದ್ದರು.


 

ambedkar image

LEAVE A REPLY

Please enter your comment!
Please enter your name here