ಬೆಂಗಳೂರು: ನಟ ದಿಗಂತ ಹಾಗೂ ನಟಿ ಐಂದ್ರಿತಾಗೂ ನಶೆ ನಂಟು

0
123
ನಟ ದಿಗಂತ ಹಾಗೂ ನಟಿ ಐಂದ್ರಿತಾ ರೇ

ಬೆಂಗಳೂರು ಸೆ.16: ಸ್ಟಾರ್ ದಂಪತಿಗಳಾದ ನಟ ದಿಗಂತ ಹಾಗೂ ನಟಿ ಐಂದ್ರಿತಾ ರೇ ಅವರಿಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಸಿಸಿಬಿ ನೋಟೀಸ್ ಬೆನ್ನಲ್ಲೇ ದಿಗಂತ್ ಹಾಗೂ ಐಂದ್ರಿತಾ ವಕೀಲರನ್ನು ಭೇಟಿಯಾಗಿ ಯಾವರೀತಿ ವಿಚಾರಣೆ ಎದುರಿಸಬೇಕು ಎಂಬ ಬಗ್ಗೆ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಂಧನಕ್ಕೊಳಗಾಗಿರುವ ಡ್ರಗ್ ಪೆಡ್ಲರ್ ಅನಿಕಾ ಈ ಸ್ಟಾರ್ ದಂಪತಿಗಳ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೇಳಿದ್ದಾಳೆ. ಅಲ್ಲದೇ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಫಾಝಿಲ್ ಜತೆಗಿನ ನಂಟಿನ ಬಗ್ಗೆಯೂ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ.

ದಿಗಂತ್ ಹಾಗೂ ಐಂದ್ರಿತಾ ಅವರಿಗೆ ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ನ ನಂಟಿದ್ದು, ಹಲವು ಇವೆಂಟ್, ಪಾರ್ಟಿಗಳಲ್ಲಿ ಭಾಗವಹಿಸಿ ಭಾರೀ ಪ್ರಮಾದಲ್ಲಿ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಸಿನಿಮಾಗಳಿಗಿಂತ ನಶೆ ಪಾರ್ಟಿಗಳಲ್ಲೇ ದಂಪತಿ ಹೆಚ್ಚು ಹಣಗಳಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಯಿಸಿದ್ದಾರೆ.


 

LEAVE A REPLY

Please enter your comment!
Please enter your name here