52 ಬೈಕ್‌ ಕಳ್ಳತನದ ಹಿಂದೆ ಪೊಲೀಸಪ್ಪನದ್ದೇ ಕೈವಾಡ…!!!

77 ಲಕ್ಷ ಮೌಲ್ಯದ 52 ಕದ್ದ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

0
111

ಬೆಂಗಳೂರು: ವಾಹನ ಸವಾರರೇ ಬೆಚ್ಚಿ ಬೀಳಿಸೋ‍ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. 77 ಲಕ್ಷ ಮೌಲ್ಯದ 52 ಕದ್ದ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹಿಂದೆ ಇರುವ ವ್ಯಕ್ತಿ ಯಾರು ಅಂತ ಗೋತ್ತಾದ್ರೆ ನೀವು ಒಂದು ಕ್ಷಣ ಹುಬ್ಬೇರಿಸುವುದು ಖಂಡಿತ. ಪೊಲೀಸರೇ ಶಾಕ್ ಆಗುವ ರೀತಿಯಲ್ಲಿ ಬೈಕ್‌ ಕಳ್ಳತನ ನಡೆದಿದೆ. ಹೇಗೆ ಅನ್ನೋದನ್ನ ಈ ಸುದ್ದಿ ಓದಿ.

ಬೆಂಗಳೂರಿನಲ್ಲಿ ವ್ಯವಸ್ಥಿತವಾಗಿ ದ್ವಿಚಕ್ರ ವಾಹನ ಕದಿಯುತ್ತಿದ್ದ ಗ್ಯಾಂಗ್ ಒಂದನ್ನು ಬಂಧಿಸಿರೋ ಪೊಲೀಸರೇ ನಿಜಕ್ಕೂ ಗಾಬರಿಯಾಗಿದ್ದಾರೆ. ಯಾಕಂದ್ರೆ, ವಾಹನ ಕಳ್ಳರನ್ನೇ ಮನೆಯಲ್ಲಿ ಇರಿಸಿಕೊಂಡು, ಪೊಲೀಸ್ ಪೇದೆಯೊಬ್ಬರು ಬೈಕ್ ಗಳನ್ನು ಕಳ್ಳತನ ಮಾಡಿಸಿ, ಅವುಗಳನ್ನು ಆಲ್ಟ್ರೇಷನ್ ಮಾಡಿಸಿ ಮಾರಾಟ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯ ಪೊಲೀಸರು ಬೈಕ್ ಪ್ರಕರಣ ಕಳ್ಳತನದಲ್ಲಿ ಇಬ್ಬರು ಅಪ್ರಾಪ್ತರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ, ಈ ಪೊಲೀಸಪ್ಪನ ಬಣ್ಣ ಬಯಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹೊನ್ನಪ್ಪ ಎಂಬ ವಿಷಯವನ್ನು ಬಾಯಿ ಬಿಟ್ಟಿದ್ದಾರೆ.

ಮಾಗಡಿರಸ್ತೆ ಠಾಣೆ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಬೈಕ್ ಒಂದು ಕದ್ದು, ಸಿಸಿಟಿವಿಯಲ್ಲಿ ಆರೋಪಿಗಳ ದೃಶ್ಯ ಸೆರೆಯಾದ ನಂತ್ರವೇ, ಇವರು ಬೈಕ್ ಕಳ್ಳರು ಎಂಬುದಾಗಿ ತಿಳಿದು ಬಂದು, ಇವರ ಹಿಂದೆ ಪೊಲೀಸ್ ಪೇದೆ ಹೊನ್ನಪ್ಪ ಇರುವುದು ತಿಳಿದು ಬಂದಿದೆ. ಈ ಸಂಬಂಧ 77 ಲಕ್ಷ ಮೌಲ್ಯದ 52 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸುತ್ತಿದ್ದಾರೆ.


LEAVE A REPLY

Please enter your comment!
Please enter your name here