ವಿಜಯಪುರ: ಕಳ್ಳನಿಂದ 12.38 ಲಕ್ಷ ರೂ. ಚಿನ್ನಾಭರಣ ವಶ

0
213
ಬಂಧಿತನಿಂದ ವಶಪಡಿಸಿಕೊಂಡ ಚಿನ್ನಾಭರಣಗಳೊಂದಿಗೆ ಪೊಲೀಸರು.

ವಿಜಯಪುರ ಸ 14: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಹಾಗೂ ಹಾಲಿ ವಿಜಯಪುರದ ಪಾನಿ ನಗರ ನಿವಾಸಿಯಾಗಿದ್ದ ರಾಜು ಶಿವಾನಂದ ಹೊಸಮನಿ (25) ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕದೀಮನಿಂದ 12.38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಕಳ್ಳತನ ಪ್ರಕರಣಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ನಗರದ ಸೊಲ್ಲಾಪುರ ನಾಕಾ ಬಳಿ ಶಂಕಾಸ್ಪದವಾಗಿ ಶಿವಾನಂದ ಸಂಚರಿಸುತ್ತಿದ್ದ ವೇಳೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಿಜಯಪುರದಲ್ಲಿ ನಾಲ್ಕು ಮನೆಗಳನ್ನು ಕಳ್ಳತನ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

ಬಂದಿತನಿಂದ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 233 ಗ್ರಾಂ. ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಒಟ್ಟು 12.38 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋಲಗುಮ್ಮಜ ಠಾಣೆ ಸಿಪಿಐ ಬಸವರಾಜ ಮುಕರ್ತಿಹಾಳ ನೇತೃತ್ವದಲ್ಲಿ ಆದರ್ಶನಗರ ಠಾಣೆ ಪಿ.ಎಸ್ .ಐ ಎಸ್.ಬಿ.ಆಜೂರ, ಸಿಬ್ಬಂದಿ ಎಸ್.ಎಸ್.ಮಾಳೆಗಾಂವ್, ವೈ.ಪಿ.ಕಬಾಡೆ, ಸಂಜಯ ಬನಪಟ್ಟಿ, ಪಿ ಎಸ್ ಬಿರಾದಾರ, ಮಹೇಶ ಸಾಲಿಕೇರಿ, ಬಿ ಕೆ ರೋಣಿಹಾಳ, ಎನ್ ಬಿ ವಠಾರ, ಗೋಲ್ಲಾಳ ಇಳಜೇರಿ ದಾಳಿಯಲ್ಲಿ ಪಾಲ್ಗೊಂಡಿದ್ದರು.


 

LEAVE A REPLY

Please enter your comment!
Please enter your name here