ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಅವ್ಯವಹಾರ: ಎಸ್.ಆರ್.ಹಿರೇಮಠ ಆರೋಪ

0
67

ಹುಬ್ಬಳ್ಳಿ ಜೂ.16: ಅರಣ್ಯ ಮತ್ತು ವನ್ಯಜೀವಿಗಳ ಕುರಿತು ವೈಲ್ಡ್ ಕರ್ನಾಟಕ ಕಾರ್ಯಕ್ರಮ ನಿರ್ಮಾಣ ಮತ್ತು ಪ್ರಸರಣದಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರೇಮಠ ಅರಣ್ಯ ಮತ್ತು ವನ್ಯಜೀವಿಗಳ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಸರಕಾರಕ್ಕೆ ಸಾವಿರಾರು ಕೋಟಿ ಹಾನಿ ಮಾಡಿದ್ದಾರೆ ಎಂದು ಹೇಳಿದರು.

ಸಾಕ್ಷ್ಯಚಿತ್ರ ತಯಾರಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಾರಕಾರದ ಸೌಲಭ್ಯ ಬಳಸಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಸಾಕ್ಷ್ಯಚಿತ್ರದ ಹಕ್ಕನ್ನು ಮಾರಾಟ ಮಾಡಿ ಸ್ವಂತ ಲಾಭ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.


 

LEAVE A REPLY

Please enter your comment!
Please enter your name here