ಹಿಂದೂಗಳಾಗಿ ಉ(ಅ)ಳಿದ ದಲಿತರು

0
542
ರವೀಂದ್ರ ಎನ್ ಎಸ್ - ಲೇಖಕರು

ದೇಶದಲ್ಲಿ ಇತ್ತೀಚೆಗೆ ಜನಾಂಗೀಯ ನಿಂದನೆಗಳು ದೌರ್ಜನ್ಯ ಗಳು ಹಿಂದಿಗಿಂತ ತುಸು ಹೆಚ್ಚಾಗೇ ನಡಿತಾ ಇವೆ. ಅದರಲ್ಲೂ ಮುಸಲ್ಮಾನರು ಮತ್ತು SC.ST ರನ್ನು ಗುರಿಯಾಗಿ ಇರಿಸಿಕೊಂಡು ವೈಷಮ್ಯ ದ ಬೀಜ ಬಿತ್ತಲಾಗುತ್ತಿದೆ. ಮುಸಲ್ಮಾನರನ್ನು ಒಂದು ರೀತಿಲಿ Target ಮಾಡಿದರೆ SC.ST ಗಳು ಇನ್ನೊಂದು ರೀತಿ Target ಆಗ್ತ ಇದ್ದಾರೆ. ಸಾಮರಸ್ಯ ಬಿತ್ತಬೇಕಾದ ಮಾಧ್ಯಮಗಳು.ಸೌಹಾರ್ದತೆ ಸಂದೇಶ ನೀಡಬೇಕಾದ ನಾಯಕರುಗಳೇ ದೇಶದಲ್ಲಿ ಕೋಮು ಗಲಭೆಗಳನ್ನು ಉಂಟು ಮಾಡುವ ಪರಿಸ್ಥಿತಿ ನಿರ್ಮಿಸಿದ್ದಾರೆ. TV ಗಳಲ್ಲಿ Social media ಗಳಲ್ಲಿ ನಿರಂತರ ಕೋಮು ಪ್ರಚೋದಕ ಹೇಳಿಕೆಗಳು. ಭಾಷಣಗಳು ಪ್ರಸಾರ ಆಗ್ತ ಇವೆ. ಇವುಗಳಿಂದ ಪ್ರೇರಿತ ಜನ ಮುಸಲ್ಮಾನರು.SC.ST.ಗಳ ವಿರುದ್ದ (even OBC ಗಳೂ ಸಹಿತ) ದ್ವೇಷ ಭಾವನೆಗಳನ್ನು ಬೆಳೆಸಿಕೊಂಡು ಅವರ ಮೇಲೆ ಹಲ್ಲೆ, ಬಲಾತ್ಕಾರಗಳನ್ನು ಯಾವುದೇ ಭಯವಿಲ್ಲದೇ ನಿರಾತಂಕವಾಗಿ ನಡೆಸುತ್ತಿದ್ದಾರೆ.

ಇತ್ತೀಚೆಗೆ ಮುಸಲ್ಮಾರ ಮೇಲಿನ ಇವರ ನಿರಂತರ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಿದಾಡಿ ಕೆಲವು ರಾಷ್ಟ್ರ ಗಳ ನಾಯಕರು ನೇರ ಈ ದೇಶದ ಪ್ರಧಾನಿಗಳಿಗೆ Tweet ಮಾಡುವ ಮೂಲಕ ಗಮನ ಸೆಳಿದಿದ್ದು ಮಾತ್ರವಲ್ಲದೆ ತಮ್ಮ ದೇಶದಲ್ಲಿ ಕೆಲಸಮಾಡುವ ಭಾರತದ Non Muslim ರನ್ನು ಆಚೇ ಹಾಕುವ ಎಚ್ಚರಿಕೆಯನ್ನು ನೀಡಿದ್ದು ಗಮನಾರ್ಹ (Canada ದೇಶ ಕೂಡ) ಭಾರತದ ಸುದ್ದಿ ಮಾಧ್ಯಮಗಳು ಇಂಥ ಸುದ್ದಿಗಳನ್ನು ಬಿತ್ತರಿಸದೇ ಇದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ತಲುಪಿದ್ದು ಹೇಗೆ ? Very simple ಸಾಮಾಜಿಕ ಜಾಲತಾಣದಿಂದ. ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಮತ್ತು ಮುಸಲ್ಮಾನರ ಮೇಲಿನ ದಾಳಿಗಳನ್ನು ಸೂಕ್ಷ್ಮ ವಾಗಿ ಗಮನಿಸಿದ ಇಸ್ಲಾಂ ರಾಷ್ಟಗಳು ಅವರ ಪರವಾಗಿ ಧ್ವನಿ ಎತ್ತಿದವು. ಪರಿಣಾಮ ಅತ್ಯಂತ ತ್ವರಿತಾಗಿ ಈ ದೇಶದ ಗಣ್ಯರ ಧೋರಣೆಗಳು ಬದಲಾಗ ತೊಡಗಿದವು Tweet ಗಳು ಈ ದೇಶದ ಮುಸ್ಲಿಮ್ ರ ಪರವಾಗಿ ಬರತೊಡಗಿದವು.

ಇದು ಮುಸ್ಲಿಮರ ವಿಷಯವಾದರೆ ಈ ದೇಶದಲ್ಲಿ SC,ST ಗಳ ಮೇಲೆ ನಿರಂತರ ಅತ್ಯಾಚಾರಗಳು, ಹಲ್ಲೆಗಳು, ಬಹಿಷ್ಕಾರ, ದೌರ್ಜನ್ಯಗಳು ಪ್ರತಿನಿತ್ಯ, ನಿರಂತರವಾಗಿ ನಡೆಯುತ್ತಲೇ ಇದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಸುದ್ದಿಯೇ ಇರುವುದಿಲ್ಲ ಒಬ್ಬ ಅಂತರಾಷ್ಟ್ರೀಯ ನಾಯಕ ಕೂಡ ಚಕಾರ ಎತ್ತೋದಿಲ್ಲ ಯಾಕೆ ? Once again ಅದೇ Useless Media ಗಳು. ಅವುಗಳು ಯಾವತ್ತು SC.ST ಗಳ ಪರ ಧ್ವನಿ ಎತ್ತುವುದೇ ವಿರಳ, ಒಂದು ವೇಳೆ ಸುದ್ದಿ ಮಾಡಿದರೂ ಸಹ ಅವರು ಬಳಸುವ ಶಬ್ದ “ದಲಿತ” ರು ಈ ಶಬ್ದ ಮರಾಠಿ ಮೂಲದ್ದು(ಇಲ್ಲಿ ಶಬ್ದ ದ ವಿವರ ಅನಗತ್ಯ)

ದಲಿತ ಶಬ್ದ ಭಾರತೀಯರಿಗೆ ಪರಿಚಿತ ಆದರೆ ಅಂತರಾಷ್ಟ್ರೀಯ ವಲಯದಲ್ಲಿ ಆ ಶಬ್ದಕ್ಕೆ ಯಾವುದೇ ಮಹತ್ವವೇ ಇಲ್ಲ ಯಾವುದೋ ಜನಾಂಗ ಪಂಗಡಗಳ ಒಳ ಜಗಳವೆನೋ ಎನ್ನುಂತೆ ಹಗುರವಾಗಿ ತೆಗೆದುಕೊಳ್ಳುತ್ತವೆ ಹಾಗಾಗಿ ಈ ವಿಷಯಗಳಲ್ಲಿ ತಲೆ ಹಾಕುವುದಿಲ್ಲ. ಆದರೇ ಅದೇ ಚರ್ಚಗಳ ಮೇಲೆ ದಾಳಿಗಳಾದಾಗ ಕ್ರಿಶ್ಚಿಯನ್ ರ ಮೇಲೆ ಹಲ್ಲೆನಡೆದಾಗ ಘಟನೆಗಳು ಗಂಭೀರತೆ ಪಡೆದುಕೊಳ್ಳುತ್ತವೆ . ಆದರೆ SC,ST ಗಳ ಮೇಲೆ ನಡೆದಾಗ ಯಾಕೆ ಪಡೆದುಕೊಳ್ಳುವುದಿಲ್ಲ ?

Even ಕರ್ನಾಟಕದಲ್ಲಿ ನಡೆದ ಕಂಬಾಲಪಳ್ಳಿ, ಮಹಾರಾಷ್ಟ್ರದಲ್ಲಿನ ಖೈರ್ಲಂಜಿ SC ಹೆಣ್ಣುಮಕ್ಕಳ (14-15 ವರ್ಷದ ಚಿಕ್ಕ ಹುಡುಗಿ ಮೇಲೆ 19 ಜನರು ಸಾರ್ವಜನಿಕವಾಗಿ ಹಾಡು ಹಗಲೇ ನಡೆಸಿದ ಸಾಮೂಹಿಕ ಬಲಾತ್ಕಾರ), ಹತ್ಯಾಕಾಂಡ ಪ್ರಕರಣ ಕೂಡ ಅಂತರಾಷ್ಟೀಯ ಮಟ್ಟದಲ್ಲಿ ಒಂದಿಷ್ಟೂ ಕೂಡ ಸುದ್ದಿ ಆಗಲಿಲ್ಲ.‌ ಅವತ್ತಿನ ಸಂದರ್ಭಗಳನ್ನು ಬಿಡಿ ಇವತ್ತು ಮಾಧ್ಯಮ ಹಿಂದಿಗಿಂತಲೂ ಮುಂದು ವರಿದಿದೆ. ಪ್ರತಿಯೊಬ್ಬರ ಕೈಯಲ್ಲೂ ಸಾಮಾಜಿಕ ಜಾಲತಾಣ ಹೊಂದಿರುವ ಮೊಬೈಲುಗಳಿವೆ ಇವತ್ತಿಗೂ ಕೂಡ ಪ್ರತಿನಿತ್ಯ ಬಲಾತ್ಕಾರ ಹತ್ಯೆಗಳು ನಡೆಯುತ್ತಲೇ ಇದ್ದರೂ ಜಾಗತಿಕ ಮಟ್ಟದಲ್ಲಿ ಅವುಗಳ ತೀವ್ರತೆ ತಲುಪುತ್ತಲೇ ಇಲ್ಲ. ಅಂತರಾಷ್ಟ್ರೀಯ ನಾಯಕರುಗಳ ಗಮನ ಸೆಳೆಯಲಾಗುತ್ತಿಲ್ಲ ಕಾರಣವೇನು ?

ಕಾರಣ ಇಷ್ಟೇ ನಾವು “ದಲಿತರು’ಬಹುಜನ”ರಾಗಿ ಉಳಿದದ್ದು. ಹಾಗೇಯೇ ನಮ್ಮನ್ನು ಗುರುತಿಸಿಕೊಳ್ಳುತ್ತಿರುವುದು, ಕರೆದುಕೊಳ್ಳುವುದು. ಒಂದು ವೇಳೆ ನಾವು ದಲಿತರಾಗಿಲ್ಲದೇ ಬೌದ್ಧರಾಗಿದ್ದಿದ್ದರೇ? ಯೋಚನೆ ಮಾಡಿ ಆಗ ಖಂಡಿತ ನಮ್ಮ ಕೂಗು ಅಂತರಾಷ್ಟ್ರೀಯ ಮಟ್ಟಕ್ಕೆ ಕೇಳಿಸುತ್ತಿತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿದ್ದವು ವಿಶ್ವಸಂಸ್ಥೆಯಂಥ ಸಭೆಯಲ್ಲಿ ಭಾರತದ ಪ್ರತಿನಿಧಿಗಳು ಉತ್ತರ ಕೊಡಬೇಕಾಗುತ್ತಿತ್ತು ಅಲ್ಲವೇ ? ಆದರೆ ನಾವು ಯಾರೂ ಈ ನಿಟ್ಟಿನಲ್ಲಿ ಯೋಚಿಸದೇ ಬರೀ “ದಲಿತ” ಶಬ್ದಕ್ಕೆ ಅಂಟಿಕೊಂಡು ದಲಿತರಾಗೇ ಉಳಿದು ಪ್ರತಿಯೊಂದು ದೌರ್ಜನ್ಯಗಳು ನಡೆದಾಗಲೂ ‘ದಲಿತರ’ ಮೇಲೆ ದೌರ್ಜನ್ಯ, ‘ದಲಿತರ’ ಮೇಲೆ ಹಲ್ಲೆ ಅಂತ ಬರೆದುಕೊಂಡು ನಮ್ಮ ಧ್ವನಿಯನ್ನು ನಾವೇ Mute ಮಾಡಿಕೊಳ್ಳುತ್ತಿದ್ದೆವೆ.

ಈ ದೇಶದ ಮುಸಲ್ಮಾನರ ಮೇಲಿನ ದೌರ್ಜನ್ಯ ಗಳಿಗೆ React ಮಾಡುವ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು. ಈ ದೇಶದ ಕ್ರಿಶ್ಚಿಯನ್ ರಿಗೆ Response ಮಾಡುವ ಬೇರೆ ಬೇರೆ ರಾಷ್ಟ್ರಗಳು ಇದೇ ಭಾರತ ದೇಶದ SC. ST ಗಳ ಮೇಲಿನ ದೌರ್ಜನ್ಯಕ್ಕೆ Response ಯಾಕೆ ಮಾಡುತ್ತಿಲ್ಲ ಎನ್ನುದಕ್ಕೆ ಇದುವೇ ಪ್ರಮುಖ ಕಾರಣ. ಅಷ್ಟೆಲ್ಲ ಯಾಕೇ ಇದೇ ನಮ್ಮ ಭಾರತ ದೇಶ ಪಾಕಿಸ್ತಾನ, ಬಾಂಗ್ಲಾದಲ್ಲಿನ ಹಿಂದೂಗಳ ಬಗ್ಗೆ ಮಮ್ಮಲ ಮರುಗುವುದಿಲ್ಲವೇ ಯಾಕೆ ? ಇಲ್ಲಿ ಭಾರತದ ಮುಸಲ್ಮಾನರು ವಿದೇಶಿಯರಲ್ಲ. ಭಾರತದ ಕ್ರೀಶ್ಚಿಯನ್ನರು ಬೇರೆ ಕಡೆಯಿಂದ ಬಂದವರಲ್ಲ. ಪಾಕಿಸ್ತಾನ, ಬಾಂಗ್ಲಾದಲ್ಲಿರುವ ಹಿಂದೂಗಳು ಈ ದೇಶದವರಲ್ಲ ಆದರೂ ಧರ್ಮ ಅವರನ್ನು ಕಳವಳ ಪಡುವಂತೆ, ಕಾಳಜಿ ಮಾಡುವಂತೆ ಮಾಡುತ್ತದೆ ಅಲ್ಲವೇ ? ಈ ಕಾರಣದಿಂದಲೇ ಡಾ| ಬಾಬಾಸಾಹೇಬರು ತಮ್ಮ ಅನುಯಾಯಿಗಳಿಗೆ ಬುದ್ಧ ಮತ್ತು ಬೌದ್ಧ ಧಮ್ಮ ಕೊಟ್ಟಿದ್ದು. ಆದರೆ ಅದರ ಮಹತ್ವ ನಮಗೆ ಇನ್ನೂ ಕೂಡ ತಿಳಿಯುತ್ತಲೇ ಇಲ್ಲ.

ಡಾ| ಬಾಬಾಸಾಹೇಬರು ಕೊಟ್ಟ ಅನ್ನ, ಬಟ್ಟೆ, ಶಿಕ್ಷಣ, ಉದ್ಯೋಗ, ರಕ್ಷಣೆ ಎಲ್ಲವನ್ನೂ ಬೇಶರತ್ತಾಗಿ ಪಡೆದ SC,ST ಗಳು ಅವರು ಕೊಟ್ಟ ಧಮ್ಮವನ್ನು ಒಪ್ಪಿಕೊಳ್ಳಲು ಮಾತ್ರ ಮೀನಾವೇಷ ಎಣಿಸುತ್ತಿರುವುದು ಇಂಥ ದೌರ್ಜನ್ಯ ಗಳು ಹೆಚ್ಚಲು ಕಾರಣ.

ಇನ್ನು ಮುಂದೆ SC,ST ಗಳ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ನಿಲ್ಲ ಬೇಕೆಂದರೆ ‘ದಲಿತ’ ಹಣೆ ಪಟ್ಟಿ ಕಳಚಿ ಬೌದ್ಧರಾಗುವುದು ಅನಿವಾರ್ಯ. ಡಾ ಬಾಬಾಸಾಹೇಬರೇ ಈ ದೇಶದ ಅಸ್ಪೃಶ್ಯ ರು ಹಿಂದೂಗಳಲ್ಲ ಅಂತ ಹೇಳಿದ್ಮೆಲೆ… ದಲಿತ ಶಬ್ದ ಬಳಸುವ ಅಗತ್ಯವೇನಿದೆ ? “ಬೌದ್ದ” ಬೌದ್ದರು ಶಬ್ದ ಬಳಕೆ ಮಾಡುವುದು ಸೂಕ್ತ ವಲ್ಲವೇ ? ಒಂದುವೇಳೆ ದಲಿತ ಪದ ನಿರಂತರ ಬಳಸುತ್ತ ಹೋದಲ್ಲಿ ಈ ಶಬ್ದ ಬಳಕೆಯಲ್ಲಿ ಇರುವಷ್ಟು ಕಾಲ ನೀವು ಹಿಂದೂ ಗಳೇ, ನೀವು ಹಿಂದೂಗಳಾಗಿ ಇರುವಷ್ಟು ದಿವಸ ಶೋಷಣೆ ತಪ್ಪಿದ್ದಲ್ಲ ಯೋಚಿಸಿ.

ರವೀಂದ್ರ ಎನ್ ಎಸ್ – ಲೇಖಕರು


 

LEAVE A REPLY

Please enter your comment!
Please enter your name here