ಸೀರೆ ಸೆರಗು ಜಾರಿದ್ರೆ ಗತಿಯೇನು? ನೆಟ್ಟಿಗರಿಗೆ ಕಂಫ್ಯೂಸ್‌ ಮಾಡಿದ blouse less saree

ಮೈತುಂಬ ಸೀರೆ ಉಟ್ಟ ಚೆಲುವೆ ಸುಂದರ ಡಿಸೈನ್ ಇರೋ ಬ್ಲೌಸ್ ತೊಟ್ಟಂತೆ ಮೇಲ್ನೋಟಕ್ಕೆ ಕಾಣಿಸುತ್ತೆ. ಆದರೆ ಹತ್ತಿರಕ್ಕೆ ಹೋದಾಗಲೇ ಗೊತ್ತಾಗೋದು ಸುಂದರಿ ಕೈ ಬೆನ್ನು ಸೇರಿದಂತೆ ಬ್ಲೌಸ್ ಬರೋ ಜಾಗಕ್ಕೆಲ್ಲ ಹಾಕಿಕೊಂಡಿರೋದು ಮೆಹೆಂದಿ ಅಥವಾ ಟ್ಯಾಟೂ ಅಂತ. 

0
148

ಸೀರೆಗೆ ಹೊಂದುವಂತ ಬಣ್ಣ ಬಣ್ಣದ ಬ್ಲೌಸ್‌ ಹಾಕೋದು, ಬ್ಲೌಸ್ ಗೆ ಆಕರ್ಷಕ ಡಿಸೈನ್ ಮಾಡಿಸೋದು ಮಹಿಳೆಯರ ಹವ್ಯಾಸ. ಇಲ್ಲೊಂದು ವೀಡಿಯೊ ವೈರಲ್‌ ಆಗಿದೆ. ನೋಡಿದ ತಕ್ಷಣ ನಿಮಗೂ ಆಶ್ಚರ್ಯವಾಗುವ ರೀತಿಯಲ್ಲಿ ಬ್ಲೌಸ್‌ ಡಿಸೈನ್‌ ಮಾಡಿದ್ದಾರೆ. ಈ ಸುಂದರಿ ಮಾತ್ರ ಸೀರೆಗೆ ಬ್ಲೌಸ್ ಹಾಕೋದನ್ನೇ ಮರೆತು ಬಿಟ್ಟಿದ್ದಾಳೆ. ಆದರೆ ನೋಡುಗರ ಮಾತ್ರ‌ ಕಣ್ಣಿಗೆ ಬ್ಲೌಸ್‌ ತರಹ ಟ್ಯಾಟೂನಿಂದ ಮೈಮುಚ್ಚಿಕೊಂಡಿದ್ದಾಳೆ ಅಂತಾ ಗೋತ್ತಾಗುವುದಿಲ್ಲ. ನೆಟ್ಟಿಗರು ವೀಡಿಯೊ ನೋಡಿ ದಂಗಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವೀಡಿಯೊ ನೋಡಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫ್ಯಾಶನ್ ಅಂದ್ರೇ ಹಿಂಗೂ ಇರುತ್ತಾ ಅಂತ ನೋಡುಗರು, ಹೆಣ್ಮಕ್ಕಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಥಾನ್ಸ್ ಜೆಟ್ ಎಂಬುವವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಲಕ್ಷಾಂತರ ಜನರು ಈ ವಿಡಿಯೋ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಮೈತುಂಬ ಸೀರೆ ಉಟ್ಟ ಚೆಲುವೆ ಸುಂದರ ಡಿಸೈನ್ ಇರೋ ಬ್ಲೌಸ್ ತೊಟ್ಟಂತೆ ಮೇಲ್ನೋಟಕ್ಕೆ ಕಾಣಿಸುತ್ತೆ. ಆದರೆ ಹತ್ತಿರಕ್ಕೆ ಹೋದಾಗಲೇ ಗೊತ್ತಾಗೋದು ಸುಂದರಿ ಕೈ ಬೆನ್ನು ಸೇರಿದಂತೆ ಬ್ಲೌಸ್ ಬರೋ ಜಾಗಕ್ಕೆಲ್ಲ ಹಾಕಿಕೊಂಡಿರೋದು ಮೆಹೆಂದಿ ಅಥವಾ ಟ್ಯಾಟೂ ಅಂತ.

ಇನ್ನು ಈ ವಿಡಿಯೋವನ್ನು ಹತ್ತಿರದಿಂದ ನೋಡಿದಾಗ ಮಾತ್ರ ಆಕೆ ಬ್ಲೌಸ್ ಹಾಕಿಲ್ಲ ಅನ್ನೋದು ಗೊತ್ತಾಗುತ್ತಿದ್ದು ಮೇಲ್ನೋಟಕ್ಕೆ ಆಕೆ ಡಿಸೈನರ್ ರವಿಕೆ ಧರಿಸಿದ್ದಾಳೆ ಎನ್ನುವಷ್ಟು ನ್ಯಾಚುರಲ್ ಆಗಿ ವಿಡಿಯೋ ಚಿತ್ರಿಸಲಾಗಿದೆ. ಇನ್ನು ಈ ವಿಡಿಯೋ ಸಕತ್ ಕಮೆಂಟ್ ಗಳು ಹರಿದು ಬಂದಿದ್ದು ಕೆಲವರು ನಾನು ಮೆಹೆಂದಿ ಹಾಕೋದನ್ನು ಕಲಿಬೇಕು ಅಂದ್ರೇ ಇನ್ನು ಕೆಲವರು ಅಯ್ಯೋ ಈ ಮೆಹೆಂದಿ ಕಲಾವಿದನ ಅದೃಷ್ಟವಪ್ಪಾ ಎಂದು ಅಲವತ್ತುಕೊಂಡಿದ್ದಾರೆ. ಇನ್ನು ಕೆಲವರು ವಾವ್ ಎಂತ ಕ್ರಿಯೇಟಿವ್ ಐಡಿಯಾ ಎಂದು ಕೊಂಡಾಡಿದ್ದಾರೆ. ಆದರೆ ಈ ವೀಡಿಯೋ ವೈರಲ್ ಆಗಿದ್ದರೂ ರೂಪದರ್ಶಿ ಯಾರು, ವಿಡಿಯೋ ಶೂಟ್ ಆಗಿದ್ದೆಲ್ಲಿ ಎಂಬ ಅಂಶ ಬಯಲಾಗಿಲ್ಲ.


ambedkar image

LEAVE A REPLY

Please enter your comment!
Please enter your name here