ಹುಬ್ಬಳ್ಳಿ: ಸಂಚಾರಿ ಫೀವರ್ ಕ್ಲೀನಿಕ್ ಶುರು : ಕ್ವಾರೆಂಟೈನ್ ಪ್ರದೇಶಗಳ ಸಂಚರಿಸಿ ತಪಾಸಣೆ

0
147

ಹುಬ್ಬಳ್ಳಿ ಏ.18: ಕೊವೀಡ್ -19 ವಿರುದ್ದ ಹೋರಾಟ ನಡೆಸುತ್ತಿರುವ ಜಿಲ್ಲಾಡಳಿತ ರೈಲುಗಳನ್ನು ಐಸೋಲೇಷನ್ ವಾರ್ಡ್ಗಗಳಾಗಿ ಮಾಪರ್ಡಸಿದ ಭಾರತೀಯ ರೇಲ್ವೇ ಮಾದರಿಯಾಗಿರಿಸಿ ಸಂಚಾರಿ ಫೀವರ್ ಕ್ಲೀನಿಕ್ ಕಲ್ಪನೆಯನ್ನು ಸಾಕರಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೊತೆ ಗೂಡಿ ನಿರ್ಮಿಸಿರುವ ಸಂಚಾರಿ ಫೀವರ್ ಕ್ಲೀನಕ್ ಬಹಳ ಉಪಯೋಗಕಾರಿಯಾಗಿದೆ.

ಕ್ವಾರೆಂಟೈನ್ ಪ್ರದೇಶಗಳಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷೆ ನೆಡೆಸಲಾಗುವುದು. ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಗಾರದಲ್ಲಿ ವರ್ಕ ಮ್ಯಾನೇಜರ್ ಶ್ರೀನಾಥ್ ಹಾಗೂ 10 ಕುಶಲ ಕರ್ಮಿಗಳು ತಂಡ ಆರೋಗ್ಯ ಇಲಾಖೆ ಮಾರ್ಗದರ್ಶನದಲ್ಲಿ ಬಸ್ ಅನ್ನು ಫೀವರ್ ಕ್ಲೀನಿಕ್ ಆಗಿ ಮಾರ್ಪಡಿಸುವಲ್ಲಿ ಶ್ರಮ ವಹಿಸಿದ್ದಾರೆ. ಸದ್ಯ ಒಂದು ಸಂಚಾರಿ ಫೀವರ್ ಕ್ಲೀನಕ್ ಕಾರ್ಯ ಸಂಪೂರ್ಣಗೊಂಡಿದೆ. ಇನ್ನೂ ಒಂದು ಸಂಚಾರಿ ಫೀವರ್ ಕ್ಲೀನಿಕ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

ಸಂಚಾರಿ ಫಿವರ್ ಕ್ಲಿನಿಕ್ ಪ್ರವೇಶಿಸಿಸುವ ದ್ವಾರದಲ್ಲಿ ಸ್ಯಾನಿಟೈಸರ್ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಹ್ಯಾಂಡ್ ವಾಶ್ ಬೆಸಿನ್, ನರ್ಸ್ ಸಲಹಾ ವಿಭಾಗ, ವೈದ್ಯರ ಕನ್ಸಲ್ಟೇಶನ್ ಮತ್ತು ಪರೀಕ್ಷಾ ವಿಭಾಗಗಳನ್ನು ಅಗತ್ಯಕ್ಕೆ ತಕ್ಕಹಾಗೆ ನಿರ್ಮಿಸಲಾಗಿದೆ.

ಒರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಸಂಚಾರಿ ಫೀವರ್ ಅಲ್ಲಿ ಕೆಲಸ ನಿರ್ವಹಿಸುತ್ತಾರೆ. ಇದರೊಂದಿಗೆ ಸಾರಿಗೆ ಸಂಸ್ಥೆಯ ಚಾಲಕರು ಇರಲಿದ್ದಾರೆ.ಥರ್ಮಲ್ ಸ್ಕ್ಯಾನರ್, ಸಿಗ್ಮೋಮಾನೋಮೀಟರ್ , ರಕ್ತ ಪರೀಕ್ಷೆ ಕಿಟ್, ಸೇರಿದಂತೆ ಅಗತ್ಯ ಔಷಧಗಳು ಸಂಚಾರಿ ಫೀವರ್ ಕ್ಲಿನಿಕ್ ನಲ್ಲಿ ಇವೆ. ಕೊವೀಡ್19 ಲಕ್ಷಣ ಕಂಡುಬಂದವರನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಪರೀಕ್ಷೆಗಾಗಿ ಕಿಮ್ಸ್ ಗೆ ಕಳುಹಿಸಿಕೊಡಲಾಗುತ್ತದೆ.ಈಗಾಗಲೇ ಹುಬ್ಬಳ್ಳಿ ನಗರದ ವಿವಿಧಡೆ 9 ಸಾಂಸ್ಥಿಕ ಫೀವರ್ ಕ್ಲೀನಿಕ್ ಕಾರ್ಯನಿರ್ವಹಿಸುತ್ತಿವೆ.


 

LEAVE A REPLY

Please enter your comment!
Please enter your name here