ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 3 ಸೋಂಕಿತರು ಪತ್ತೆ : 17 ಕ್ಕೇರಿದ ಸಂಖ್ಯೆ

0
216

ಬೆಳಗಾವಿ ಎ.13 : ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇಂದು ಮಧ್ಯಾಹ್ನದ ವರೆಗೆ ಮತ್ತೆ ಮೂವರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 17ಕ್ಕೆ ಏರಿದೆ.

ಹೊಸದಾಗಿ ಪತ್ತೆಯಾಗಿರುವ ಮೂವರೂ ಕೂಡ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದವರಾಗಿದ್ದು, ಅವರಲ್ಲಿ ಓರ್ವ 14 ವರ್ಷದ ಬಾಲಕ, ಇನ್ನೋರ್ವ 20 ವರ್ಷದ ಯುವಕ ಮತ್ತು ಮತ್ತೊಬ್ಬ 45 ವರ್ಷದ ವ್ಯಕ್ತಿಯಾಗಿದ್ದಾನೆ. ಅವರೆಲ್ಲ ಈಗಾಗಲೇ ಅಲ್ಲಿ ಪತ್ತೆಯಾಗಿರುವ ಏಳು ಮಂದಿ ಸೋಂಕಿತರ ಸಂಬಂಧಿಕರು ಅಥವಾ ಸಂಪರ್ಕದಲ್ಲಿ ಇರುವವರು ಆಗಿದ್ದಾರೆ.

ಕುಡಚಿಯಲ್ಲಿ ಹೊಸದಾಗಿ ಮತ್ತೆ ಮೂವರಿಗೆ ಸೋಂಕು ಇರುವುದು ಪತ್ತೆ ಆಗಿದ್ದರಿಂದ, ಆ ಪಟ್ಟಣದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ. ಉಳಿದಂತೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮೂವರು, ಬೆಳಗುಂದಿಯಲ್ಲಿ ಒಬ್ಬ ಮತ್ತು ಬೆಳಗಾವಿ ನಗರದ ಕ್ಯಾಂಪ್ ಏರಿಯಾದ ಒಬ್ಬರಿಗೆ ಸೋಂಕು ತಗುಲಿದೆ.
ದಿನೇ ದಿನೇ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣವನ್ನು ಸೀಲ್ ಡೌನ ಮಾಡಲಾಗಿದ್ದು ಡ್ರೋಣ ಮೂಲಕ ಜನರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.

ambedkar image

LEAVE A REPLY

Please enter your comment!
Please enter your name here