ವಿಜಯಪುರ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣದ ರೋಗಿಗಳ ಚಿಕಿತ್ಸೆಗೆ ವೈದ್ಯರ ತಂಡ ರಚನೆ

0
223

ವಿಜಯಪುರ ಎ.12: ವಿಜಯಪುರ ನಗರದ ಜಿಲ್ಲಾ ಆಸ್ಪತ್ರೆ/ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣದ ರೋಗಿಗಳ ವೈದ್ಯಕೀಯ ಚಿಕಿತ್ಸೆ ಮಾಡುವ ಸಲುವಾಗಿ ವೈದ್ಯರುಗಳ ತಂಡವನ್ನು ರಚಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಈ ತಂಡದ ಫೀವರ್ ಕ್ಲಿನಿಕ್, ಕೋವಿಡ್ ಖಚಿತ ಪ್ರಕರಣಗಳ ವಾರ್ಡ್, ಐಸೋಲೇಶನ್ ಪ್ರಕರಣಗಳ ವಾರ್ಡ್, ಐ.ಸಿ.ಯು ಪ್ರಕರಣಗಳ ವಾರ್ಡ್‍ಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸದಸ್ಯರು/ವೈದ್ಯರು ಸರ್ಕಾರದ ಕೋವಿಡ್-19 ಪಾಸಿಟಿವ್ ಪ್ರಕರಣಗಳ ನಿರ್ವಹಣೆ ಕುರಿತು ನೀಡಲಾದ ಪ್ರೊಟೊಕಾಲ್‍ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ರೋಗಿಗೆ ಅತ್ಯುತ್ತಮ ದರ್ಜೆಯ ವೈದ್ಯಕೀಯ ಚಿಕಿತ್ಸೆ ನೀಡಬೇಕು, ಆರೋಗ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಮುನ್ನೆಚ್ಚರಿಕಾ ಸುರಕ್ಷಾ ಪರಿಕರಗಳನ್ನು ಧರಿಸಬೇಕು, ರೋಗಿಯು ಕಡ್ಡಾಯವಾಗಿ (24*7) ಮಾಸ್ಕ್ ಧರಿಸಿರಬೇಕು, ಸರ್ಕಾರದ ನಿರ್ದೇಶನದಂತೆ ಈ ಎಲ್ಲ ಅವಶ್ಯಕ ಕ್ರಮಗಳನ್ನು ಜರುಗಿಸಬೇಕು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶರಣ ಕಟ್ಟಿ ಅವರು ದಿನಾಂಕ 16-04-2020 ರ ನಂತರ 24*7 ಮೇಲ್ಕಾಣಿಸಿದಂತೆ ಕರ್ತವ್ಯವನ್ನು ಹಂಚಿಕೆ ಮಾಡಿ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ambedkar image

LEAVE A REPLY

Please enter your comment!
Please enter your name here