ವೈದ್ಯರು-ಶುಶ್ರೂಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

0
79

ವಿಜಯಪುರ  ಎ.04: ಕೊರೋನಾ ವೈರಸ್ ಪ್ರಕರಣಗಳ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಬಲಪಡಿಸಿ ಸಮರ್ಪಕ ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಕೆಳಕಾಣಿಸಿದ ಹುದ್ದೆಗಳನ್ನು ತಾತ್ಕಾಲಿಕವಾಗಿ ಗರಿಷ್ಠ 06 ತಿಂಗಳ ಕಾಲ ಗುತ್ತಿಗೆ ಆಧಾರದ ಮೇಲೆ ರೋಸ್ಟರ್-ಕಂ-ಮೇರಿಟ್ ಅನ್ನು ಅನುಸರಿಸಿ ಷರತ್ತುಗಳನ್ವಯ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವೈದ್ಯರು/ತಜ್ಞರು ಹತ್ತು ಹುದ್ದೆಗಳಿಗೆ ಎಂಬಿಬಿಎಸ್, ಎಂಡಿಜಿಮ್, ಎಂಡಿ ಪೆಡಿ, ಡಿಸಿಎಚ್ ಹಾಗೂ ಇತರ ತಜ್ಞತೆಯ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು ಪ್ರತಿ ಮಾಹೆ 60 ಸಾವಿರ ವೇತನ ನೀಡಲಾಗುವುದು. ಅದರಂತೆ 20 ಶುಶ್ರೂಷಕರ ಹುದ್ದೆಗಳಿಗೆ ಡಿಪ್ಲೂಮಾ/ಬಿಎಸ್‍ಸಿ ನರ್ಸಿಂಗ್ (ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ನರ್ಸಿಂಗ ಶಾಲೆಯಲ್ಲಿ ವಿದ್ಯಾರ್ಹತೆ ಹೊಂದಿರಬೇಕು) ಪ್ರತಿ ಮಾಹೆ 20 ಸಾವಿರ ರೂಗಳ ವೇತನ ನೀಡಲಾಗುತ್ತದೆ.
ಈ ಹುದ್ದೆಗಳನ್ನು ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ನೇಮಕ ಮಾಡಿಕೊಳ್ಳುತ್ತಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಸೇವೆಯಲ್ಲಿ ಮುಂದುವರೆಸಲಾಗುವುದಿಲ್ಲ. ಸ್ಥಳಿಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲ ಶೈಕ್ಷಣಿಕ (ಎಸ್.ಎಸ್.ಎಲ್.ಸಿ, ಎಂಬಿಬಿಎಸ್/ತಜ್ಞತೆಯ, ಡಿಪ್ಲೋಮಾ, ಬಿಎಸ್‍ಸಿ ನರ್ಸಿಂಗ್ ಅಂಕಪಟ್ಟಿಗಳು, ರಜಿಸ್ಟ್ರೇಷನ್ ಪ್ರಪತ್ರ, ಇಂಟರ್ನಶಿಪ್ ಪ್ರಪತ್ರ, ಗ್ರಾಮಿಣ ಅಭ್ಯರ್ಥಿ ಮತ್ತು ಜಾತಿ ಪ್ರಮಾಣ ಪತ್ರಗಳ ಮೂಲ ಪ್ರತಿ ಮತ್ತು ಝರಾಕ್ಸ್ ಪ್ರತಿಗಳೊಂದಿಗೆ ಎಪ್ರೀಲ್ 7 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಲು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here