Vijayapura News | ಗೃಹ ಸಚಿವ ಅಮಿತ್ ಶಾ ಹೇಳಿಕೆ ಸಮರ್ಥನೆ ಮಾಡಿಕೊಂಡ ಉಮೇಶ ಕಾರಜೋಳ ಕ್ಷಮೆಯಾಚನೆಗೆ ಆಗ್ರಹ 

Amit Shah ಇ=image
ವಿಜಯಪುರ: ಅಮಿತ್ ಶಾ ಗೃಹ ಮಂತ್ರಿಗಳು Amit Shah ಕೇಂದ್ರ ಸರಕಾರ ಅವರ ಹೇಳಿಕೆಯನ್ನು ಉಮೇಶ್ ಕಾರಜೋಳ ಅವರು ಸಮರ್ಥಿಸಿಕೊಂಡಿರುವುದು ಬಹಳ ನಾಚಿಗೇಡಿನ ಸಂಗತಿ.
ಉಮೇಶ ಕಾರಜೋಳ ಅವರು ಒಬ್ಬ  ದಲಿತ ಸಮುದಾಯದವರಾಗಿದ್ದು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಫಲಾನುಭವಿಯಾಗಿ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದು ಆತ್ಮ ವಂಚನೆಗೆ ಸಮವಾಗಿದೆ.
ಇದನ್ನೂ ಓದಿ: Vijayapura News | National level cycling competition | ಎಸ್ ಎಸ್ ಹೈಸ್ಕೂಲ್ (ಎ) ವಿದ್ಯಾರ್ಥಿಗಳು ಆಯ್ಕೆ
ದೇಶದ ಬಹು ಸಂಖ್ಯಾತ ಜನರು  ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇವರಂತೆ ನೆನೆಯುತ್ತಾರೆ. ಯಾವುದೇ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಇಡೀ ದೇಶಾದ್ಯಂತ ದಲಿತ ಸಮುದಾಯ ಪ್ರಗತಿಪರರು ಮತ್ತು ವಿದ್ಯಾವಂತರು, ಮಹಿಳೆಯರು  ಧ್ವನಿ ಎತ್ತುವುದು ಸಹಜ ಅದರಂತೆ ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು ಅದನ್ನ ಸಹಿಸದೆ ಉಮೇಶ ಕಾರಜೊಳ ರವರು ಅಮಿತ್ ಶಾ ಅವರ ಹೇಳಿಕೆಯನ್ನು ಬೆಂಬಲಿಸುತ್ತಿರುವುದು ನಾಚಿಕೆಗೇಡಿ ಸಂಗತಿಯಾಗಿದೆ.
ಉಮೇಶ ಕಾರಜೋಳ ರವರು ತಾವು ಒಬ್ಬ ಶೋಷಣೆಗೆ ಒಳಗಾಗಿರುವರು ಶಾ Amit Shah ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದು ಎಷ್ಟು ಸರಿ. ಡಾ.ಬಿ.ಆರ್. ಅಂಬೇಡ್ಕರ್ ರವರು ನಮಗೆ ಸಂವಿಧಾನವನ್ನು ನೀಡದೆ ಇದ್ದರೆ ತಮ್ಮ ವೃತ್ತಿ ಏನಾಗಿರುತ್ತಿತ್ತು ಮತ್ತು ನಾವು ಎಲ್ಲಿದ್ದೇವೆ ಎಂಬುವುದರ  ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಸವಲತ್ತುಗಳ ಆಧಾರದ ಮೇಲೆ ತಾವುಗಳು ಈ ಒಂದು ಹುದ್ದೆಯಲ್ಲಿ ನೇಮಕವಾಗಿರುತ್ತೀರಿ. ಸದನದಲ್ಲಿ ತಮ್ಮ ನಾಯಕರು ಡಾ.ಬಿ.ಆರ್. ಅಂಬೇಡ್ಕರ್ ರವರ ಕುರಿತು ಹೇಳಿಕೆಯನ್ನು ನೀಡಿರುವುದು ಒಬ್ಬ ದಲಿತನಾಗಿ ಖಂಡಿಸುವುದನ್ನು ಬಿಟ್ಟು ಅದನ್ನೆ ಸಮರ್ಥಿಸಿಕೊಳ್ಳುವದು ಎಷ್ಟರ ಮಟ್ಟಿಗೆ ಸರಿ ಎನ್ನುವದು ಅರಿಯಬೇಕು.
ಇದನ್ನೂ ಓದಿ: Vijayapura News | ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹ
ಡಾ.ಬಿ.ಆರ್. ಅಂಬೇಡ್ಕರ್ ರವರು ಇವತ್ತಿನ ದಿನದಲ್ಲಿ ಫ್ಯಾಷನ್ ಆಗಿದೆ ಅಂತ ಹೇಳಿಕೆ ನೀಡಿರುವ  ಒಬ್ಬ ಗಡಿಪಾರು ಶಿಕ್ಷೆಗೆ ಗುರಿಯಾಗಿರುವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ನೀಡದೆ ಇದ್ದಲ್ಲಿ ಅವರೊಬ್ಬ ಗುಜರಿ  ವ್ಯಾಪಾರಿಯಾಗಿ ಗುಜರಾತಿನಲ್ಲಿ ಕಾಲ ಕಳೆಯಬೇಕಾಗಿತ್ತು. ಅವರ ಅದೃಷ್ಟ ಡಾ.ಬಿ ಆರ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನದ ಆದರದ ಮೇಲೆ ಇವತ್ತು ಗೃಹ ಸಚಿವರಾಗಿದ್ದಾರೆ.
ನಮ್ಮ ದಲಿತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಗುಲಾಮರು ಅಲ್ಲ ಅವರ ದಲಿತರು ಯಾರ ಪರವಾಗಿಯೂ ಇಲ್ಲ. ಎನ್ನುವದು ಅರಿಯಬೇಕು. ಡಾ.ಬಿ.ಆರ್. ಅಂಬೇಡ್ಕರ್ ರವರನ್ನು ಯಾರಾದರೂ ನಿಂದಿಸಿದರೆ ಅದರ ವಿರುದ್ಧ ಹೋರಾಟ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಡಾ. ಬಿ. ಆರ್ ಅಂಬೇಡ್ಕರ್ ಅಂದರೆ ನಮಗೆ ಪ್ರಾಣಕ್ಕಿಂತಲೂ ಹೆಚ್ಚಿನ ಒಂದು ವ್ಯಕ್ತಿತ್ವವನ್ನು ಹೊಂದಿರತಕ್ಕಂಥವರು ಹೀಗಾಗಿ ಅವರನ್ನು ನಾವು ದೇವರಂದೇ ಪೂಜಿಸುತ್ತಿರುವುದು ಆ ದೇವರಿಗೆ ನಿಂದಿಸುವುದು ಅಥವಾ ಅಪಮಾನ ಮಾಡಿದರೆ ಅದನ್ನು ಅದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮತ್ತು ಖಂಡಿಸಲೇಬೇಕು.
ಇದನ್ನೂ ಓದಿ: Vijayapura News | ವಿಜಯಪುರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರ ಬಂಧನ
ಶತಮಾನಗಳಿಂದ ಅಸ್ಪೃಶ್ಯತೆಯ ಕರಾಳ ಅನುಭವವನ್ನು ಅನುಭವಿಸಿರುವ ನಾವುಗಳು  ನಿಮ್ಮಂತಹ ಮೀಸಲಾತಿಯ ಫಲಾನುಭವಿ, ಉಂಡ ಮನೆಗೆ ಎರಡು ಬಗೆಯುವ ಮನಸ್ಥಿತಿಯ ಹೊಂದಿರುವರು, ಪ್ರಜ್ಞಾ ಹೀನರು, ಆತ್ಮ ವಂಚಕರು, ಸಮುದಾಯದ ದ್ರೋಹಿಗಳು, ಆತ್ಮ ವಂಚಕರಾದ ಉಮೇಶ್ ಕಾರಜೋಳವರೇ ಯಾವುದೇ ಹೇಳಿಕೆಯನ್ನು ಕೊಡುವ ಮುಂಚೆ 10 ಬಾರಿ ತಾವುಗಳು ಯೋಚಿಸಿ ಹೇಳಿಕೆಯನ್ನು ಕೊಡಬೇಕಾಗುತ್ತದೆ. ಡಾ. ಬಿಆರ್ ಅಂಬೇಡ್ಕರ್ ಅವರ ಕೊಡಮಾಡಿದ ಸೌಲತ್ತುಗಳನ್ನು ಪಡೆದು ಆಸ್ತಿ, ಅಂತಸ್ತುಗಳು ಮತ್ತು ಗೌರವಗಳನ್ನು ಪಡೆದುಕೊಂಡು ಆತ್ಮ ವಂಚನೆಯನ್ನು ಮಾಡಿಕೊಂಡು ಅಂಬೇಡ್ಕರ್ ವಿರುದ್ಧ ಹೇಳಿರುವ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಳ್ಳುವಂತಹ ನಿಮ್ಮಂತ ನೀಚ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಿಂದ ಸಮುದಾಯಕ್ಕೆ ಒಳ್ಳೆಯದನ್ನು ಬಯಸುವುದು ಮೂರ್ಖತನವಾದದ್ದು.
ನೀನು ಒಬ್ಬ ಸನಾತನವಾದಿಗಳ ಮತ್ತು ಆರ್.ಎಸ್.ಎಸ್. ಚೇಲಾಗಳಂತೆ ಸಮರ್ಥನೆ ಮಾಡಿಕೊಳ್ಳಬಹುದು. ನಾವು ಅಂಬೇಡ್ಕರ್ ಅವರ ರಕ್ತವನ್ನು ಹಂಚಿಕೊಂಡು ಹುಟ್ಟಿರುವರು ರೋಶ, ಕಿಚ್ಚು ಮತ್ತು ಸಮತೆಯಿಂದ ಸಮಾಜದಲ್ಲಿ ಬದುಕುತ್ತಿರುವರು ನಾವು ನಿಮ್ಮಂತ ನಯವಂಚಕರಿಂದ ಸಮಾಜ ಏನು ನಿರೀಕ್ಷೆ ಮಾಡುವುದಿಲ್ಲ. ಇನ್ನು ಮುಂದಾದರು ತಾವು ನಿಜವಾದ ಅಂಬೇಡ್ಕರ್ ಅವರ  ಅಭಿಮಾನಿಗಳಾಗಿದ್ದರೇ ಹೇಳಿಕೆಗಳನ್ನು ಸಮರ್ಥನೆ  ಮಾಡಿಕೊಳ್ಳುವುದರ ಬದಲಾಗಿ ಧ್ವನಿಯತ್ತುವುದನ್ನು ರೂಡಿಸಿಕೊಳ್ಳಿ, ಹಾಗೂ ಮುಂದಿನ ದಿನಗಳಲ್ಲಿ ನಿಮ್ಮ ಕುಟುಂದವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ದಲಿತ ಸಮಾಜವು ನಿಮಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎನ್ನುವುದನ್ನು ತಾವು ಮರೆಯಬಾರದು.ಮತ್ತು ನೀವು ಸಮರ್ಥನೆ ಮಾಡಿಕೊಡುವ ವಿಷಯವನ್ನು ತಪ್ಪದೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಸಿದ್ದು ರಾಯಣ್ಣವರ ಪ್ರಕಟಣೆಯ ಮೂಲಕ ಆಗ್ರಹಪಡಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »