ಬಹುಹಳ್ಳಿ Drinking Water Project ಪರಿಶೀಲನೆಗೆ ಜಿಪಂ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಸೂಚನೆ

Multi Village Water project inspection in Vijayapura

ವಿಜಯಪುರ : Multi Village Water ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ವಿವಿಧ ಜಲಮೂಲಗಳು ಹಾಗೂ ನೀರು ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಹುಹಳ್ಳಿ ಕುಡಿಯುವ ನೀರು ಯೋಜನೆಗಳ ಪರಿಶೀಲನೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಗ್ರಾಮಗಳು ಹಾಗೂ ಚಡಚಣ ತಾಲೂಕಿನ ಇಂಚಗೇರಿ ಮತ್ತು ಇತರೆ 41 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಗಳ ಜಲಮೂಲಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವರು ಇಂಡಿ ತಾಲೂಕಿನ ಅರ್ಜನಾಳ ಹಾಗೂ ಹಂಜಗಿ ಕೆರೆಗಳಿಗೆ ಭೇಟಿ ನೀಡಿ ನೀರಿನ ಸಂಗ್ರಹ ಪ್ರಮಾಣ, ಜಲಾಶಯಗಳ ಸ್ಥಿತಿ ಮತ್ತು ಒತ್ತುವರಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಭೀಮಾ ನದಿ ಮತ್ತು ಇಂಡಿ ಶಾಖಾ ಕಾಲುವೆ ಮೂಲಕ ಅಗತ್ಯ ಪ್ರಮಾಣದ ನೀರು ಸಂಗ್ರಹಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನೀರು ಸಂಸ್ಕರಣಾ ಘಟಕ ಪರಿಶೀಲನೆ

ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೀರು ಸಂಸ್ಕರಣಾ ಘಟಕ, ಪಂಪ್ ಹೌಸ್ ಹಾಗೂ ಕ್ಲಾರಿನೇಶನ್ ಘಟಕಗಳ ಕಾರ್ಯವೈಖರಿಯನ್ನು ಸಿಇಒ ಪರಿಶೀಲಿಸಿದರು. ಎಲ್ಲಾ ತಾಂತ್ರಿಕ ಘಟಕಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. ಯಾವುದೇ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣ ಸರಿಪಡಿಸಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಡೆಗೆ ಸೂಚನೆ

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುವ ಹಿನ್ನೆಲೆ ಯಾವುದೇ ಗ್ರಾಮದಲ್ಲಿ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ರಿಷಿ ಆನಂದ ಹೇಳಿದರು. ನೀರಿನ ಕೊರತೆ ಉಂಟಾಗುವ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಪೈಪ್ಲೈನ್ ದುರಸ್ತಿ, ಮೋಟಾರ್ ಸಮಸ್ಯೆ ಹಾಗೂ ವಿದ್ಯುತ್ ವ್ಯತ್ಯಯಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ

Multi Village Water ಗ್ರಾಮಸ್ಥರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಲ್ಲಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತ್ವರಿತ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಸಿಇಒ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂಜಯ ಕೋಟೆನ್ನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಬಂಡಿ, ಶಾಖಾಧಿಕಾರಿಗಳಾದ ಚಂದ್ರಶೇಖರ ಚವ್ಹಾಣ, ಗುಲ್ನಾಜ ಜಮಾದಾರ, ಶಶಿಧರ ಮೇಡೇದಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Read more: ಬಹುಹಳ್ಳಿ Drinking Water Project ಪರಿಶೀಲನೆಗೆ ಜಿಪಂ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಸೂಚನೆ
  • Vijayapura Drinking Water 3ನೇ ಹಂತದ ಯೋಜನೆಗೆ ಶೀಘ್ರ ಅನುದಾನ?

    Vijayapura Drinking Water 3ನೇ ಹಂತದ ಯೋಜನೆಗೆ ಶೀಘ್ರ ಅನುದಾನ?

    ವಿಜಯಪುರ: ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ Vijayapura Drinking Water 3ನೇ ಹಂತದ ಯೋಜನೆಗೆ ಆದ್ಯತೆ ನೀಡಿ, ಶೀಘ್ರವಾಗಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದರು. ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಡಾ.ಎಂ.ಬಿ. ಪಾಟೀಲರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಕೆರೆ ತುಂಬುವ ಯೋಜನೆ ಸೇರಿದಂತೆ ಹಲವು ನೀರಾವರಿ…


  • Banajiga 2A Reservation: ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಬಿಜೆಪಿ ಒತ್ತಾಯ

    Banajiga 2A Reservation: ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಬಿಜೆಪಿ ಒತ್ತಾಯ

    Banajiga 2A Reservation ವಿಚಾರ ಮತ್ತೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಬಂದಿದೆ. ವಿಜಯಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಣಜಿಗ ಸಮಾಜವನ್ನು ಕೂಡಲೇ 2ಎ ಮೀಸಲಾತಿ ವ್ಯಾಪ್ತಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. Banajiga 2A Reservation ಕುರಿತು ಬಿಜೆಪಿ ಜಿಲ್ಲಾಧ್ಯಕ್ಷರ ಆಗ್ರಹ ರಾಜ್ಯ ಸರ್ಕಾರವು ಬಣಜಿಗ ಸಮಾಜಕ್ಕೆ ಮತ್ತೊಮ್ಮೆ ಅನ್ಯಾಯ ಮಾಡಬಾರದು. ಹೈಕೋರ್ಟ್ ಆದೇಶದಂತೆ ಕೂಡಲೇ 2ಎ ಮೀಸಲಾತಿ ಜಾರಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಅವರು ಮಾತನಾಡಿ, 1994ರ ಮೊದಲು ಬಣಜಿಗ…


  • ವಿಜಯಪುರದಲ್ಲಿ Silver Idol Theft ಪ್ರಕರಣ ಭೇದಿಸಿದ ಪೊಲೀಸರು; ಗುಜರಾತ್ ಮೂಲದ ಮೂವರು ಆರೋಪಿಗಳ ಬಂಧನ

    ವಿಜಯಪುರದಲ್ಲಿ Silver Idol Theft ಪ್ರಕರಣ ಭೇದಿಸಿದ ಪೊಲೀಸರು; ಗುಜರಾತ್ ಮೂಲದ ಮೂವರು ಆರೋಪಿಗಳ ಬಂಧನ

    ವಿಜಯಪುರ : ಸುಪ್ರಸಿದ್ಧ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇಗುಲದ ಬೆಳ್ಳಿ ಮೂರ್ತಿ Silver Idol Theft ಕಳವು ಪ್ರಕರಣವನ್ನು ವಿಜಯಪುರ ಪೋಲೀಸರು ಬೇಧಿಸಿದ್ದು, ​ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನು ಗುಜರಾತ್ ಮೂಲದ ಸುರೇಶಕುಮಾರ್ ಶಾಂತಿಲಾಲ ಸೋನಿ (51), ಬ್ರಹ್ಮಾರ್ ಟೋಪಿಯಾ ನೇಟ್ (35) ಮತ್ತು ಇಂದ್ರಜೀತ್ ನೇಟ್ (33) ಎಂದು ಗುರುತಿಸಲಾಗಿದೆ. ಈ ಕುರಿತು ವಿವರಣೆ ನೀಡಿದ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ…


Share the Post:

ಇತ್ತೀಚಿನ ಸುದ್ದಿಗಳು

error: Content is protected !!