Vijayapura Crime News: ಪಡಿತರ ಅಕ್ಕಿ ಅಕ್ರಮ ಸಾಗಾಟ; ಆರೋಪಿ ಬಂಧನ

Vijayapura Crime News

ವಿಜಯಪುರ: ಬಡವರಿಗೆ ವಿತರಿಸುವ ಸರಕಾರದ ವಿವಿಧ ಯೋಜನೆಗಳ ಪಡಿತರ ಅಕ್ಕಿಯನ್ನು ಜನರಿಂದ ಅಕ್ರಮವಾಗಿ ಸಂಗ್ರಹಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವಾಹನ ಮತ್ತು ಅಕ್ಕಿಯನ್ನು ವಿಜಯಪುರ ಗ್ರಾಮೀಣ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತ ಸಂಪೂರ್ಣ Vijayapura Crime News ವರದಿ ಇಲ್ಲಿದೆ.

ಖತಿಜಾಪುರ ಗ್ರಾಮದ ಹತ್ತಿರವಿರುವ ಎನ್.ಎಚ್. ರಸ್ತೆಯ ಜುಮನಾಳ ಕ್ರಾಸ್ ಬಳಿ ಈ ಕಾರ್ಯಾಚರಣೆ ನಡೆದಿದೆ. ಹಮಾಲ ಕಾಲನಿ ನಿವಾಸಿಯಾದ ಅಬೂಬಕರ ಬುಡನಸಾಬ ಕೋಲ್ಹಾರ ಎಂಬಾತನೇ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ.

ಆರೋಪಿತನು ಜನರಿಂದ ಅನಧಿಕೃತವಾಗಿ ಸಂಗ್ರಹಿಸಿದ ಒಟ್ಟು 14 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 8 ಕ್ವಿಂಟಲ್ 80 ಕೆಜಿ ತೂಕದ (ಅಂದಾಜು 20,530 ರೂ. ಕಿಮ್ಮತ್ತಿನ) ಪಡಿತರ ಅಕ್ಕಿಯನ್ನು ತನ್ನ ಪ್ಯಾಸೆಂಜರ್ ಟಂಟಂ ವಾಹನದಲ್ಲಿ ಲೋಡ್ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಎನ್ನಲಾಗಿದೆ.

Vijayapura Crime News ಈ ಖಚಿತ ಮಾಹಿತಿ ಮೇರೆಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಆಹಾರ ನಿರೀಕ್ಷಕರಾದ ಶಂಕರಗೌಡ ಬಸನಗೌಡ ಬಿರಾದಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಕರಣ ದಾಖಲು: ಆಹಾರ ನಿರೀಕ್ಷಕರು ನೀಡಿದ ಅಧಿಕೃತ ದೂರಿನ ಮೇರೆಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 238/2026, ಕಲಂ: 3 re/w 7 ಇ.ಸಿ ಆಕ್ಟ್ (E.C Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Share the Post:

ಇತ್ತೀಚಿನ ಸುದ್ದಿಗಳು