ವಿಜಯಪುರ : ಹೆಣ್ಣು ಮಕ್ಕಳಿಗೆ ಗೃಹಲಕ್ಷ್ಮೀ ಹಣ ಕೊಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪುರುಷರ ಜೇಬಿಗೆ ಕೈ ಹಾಕಿದ್ದಾರೆ, Siddaramaiah Economy Criticism ಒಂದು ಕಡೆ ಕೊಟ್ಟು ದೊಡ್ಡ ಮಟ್ಟದಲ್ಲಿ ಕಸಿದುಕೊಳ್ಳುತ್ತಿದ್ದಾರೆ, ಕುಪ್ಪಸದಲ್ಲಿ ಹಿಡಿದು ಸೀರೆಯಲ್ಲಿ ಬಿಟ್ಟನಂತೆ ಎಂದು ಗ್ರಾಮೀಣ ಆಡುಭಾಷೆಯ ಉಕ್ತಿಯನ್ನು ಉಲ್ಲೇಖಿಸಿ ಸಂಸದ ರಮೇಶ ಜಿಗಜಿಣಗಿ ಸರ್ಕಾರವನ್ನು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರ ಆರ್ಥಿಕತೆ ಅದು ಯಾವ ರೀತಿಯೋ ನನಗಂತೂ ತಿಳಿಯುತ್ತಿಲ್ಲ, ಗ್ರಾಮೀಣ ಭಾಗದ ಆಡು ಭಾಷೆಯಲ್ಲಿ ಬಟ್ಟೆ ವ್ಯಾಪಾರಕ್ಕೆ ಸಂಬAಧಿಸಿದAತೆ ಒಂದು ಮಾತಿದೆ. `ಸೀರೆಯಲ್ಲಿ ಬಿಟ್ಟು ಕುಪ್ಪಸದಲ್ಲಿ ಹಿಡಿದ’ ಎಂಬುದು. ಅಂದರೆ ಸೀರೆ ದರದಲ್ಲಿ ಬಿಟ್ಟ ರಿಯಾಯಿತಿ ಕುಪ್ಪಸದಲ್ಲಿ ಹಿಡಿದ ಎಂಬುದು ಇದರ ಅರ್ಥ. ಇದು ಸಿದ್ಧರಾಮಯ್ಯ ಅವರ ಆರ್ಥಿಕತೆಗೆ ಸಾಕ್ಷಾತ್ ಹೋಲುತ್ತದೆ ಎಂದು ಜಿಗಜಿಣಗಿ ತಮ್ಮ ಜವಾರಿ ಸ್ಟೈಲ್ನಲ್ಲಿಯೇ ರಾಜ್ಯ ಸರ್ಕಾರದ ಕಾರ್ಯವೈಖರಿ ಟೀಕಿಸಿದರು.
ಮೂರು ವರ್ಷದ ಸಿದ್ದರಾಮಯ್ಯ ಆಡಳಿತದಲ್ಲಿ ಮುನ್ನೂರು ವೈಫಲ್ಯಗಳಿದ್ದು, ಆ ವೈಫಲ್ಯದ ಹಾರ ಹಾಕುವುದಾಗಿ ತಿಳಿಸಿದ ಸಂಸದರು, ಭ್ರಷ್ಟಾಚಾರ, ಹಗರಣ, ಅಕ್ರಮಗಳೇ ಸಿದ್ದರಾಮಯ್ಯ ಸರ್ಕಾರದ ಸಾಧನೆ. ಕುರ್ಚಿ ಕಿತ್ತಾಟದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
Siddaramaiah Economy Criticism ಅಭಿವೃದ್ಧಿ ಕಾರ್ಯಗಳೆಲ್ಲವೂ ಕುಂಠಿತಗೊಂಡಿವೆ. ಹೇಳಿಕೊಳ್ಳಲು ಒಂದೇ ಒಂದು ಅಭಿವೃದ್ಧಿ ಆಗಿಲ್ಲ. ಜನ ಬೇಸತ್ತಿದ್ದಾರೆ. ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಸೂಕ್ತ ಸಂದರ್ಭದಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದಾಗಿಯೇ ದೇಶ ಸುಭದ್ರವಾಗಿದೆ. ಹಾಗೊಂದು ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದರೆ ದೇಶ ಸ್ಮಶಾನ ಆಗುತ್ತಿತ್ತು ಎಂದು ಜಿಗಜಿಣಗಿ ಪುನರುಚ್ಚರಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವಾಗಿ ತೂರಿಬಂದ ಅವರು, ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದೆ, ಈ ಪೇಪರ್ ಲೀಕ್ನ್ನು ಶಿಕ್ಷಣ ಸಚಿವರು ಮಾಡಲು ಸಾಧ್ಯವೇ? ಯಾರ ಜೊತೆಯೋ ಅವರು ಫೋಟೋ ತೆಗೆಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಅವರು ಈ ರೀತಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವುದು ಬಾಲಿಷತನದ ಹೇಳಿಕೆ ಎಂದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ರಾಜ್ಯ ಸರ್ಕಾರದ ಸಾಧನೆ ಹದಗೆಟ್ಟ ರಸ್ತೆಗಳಲ್ಲಿ ಹುಡುಕಬೇಕಿದೆ. ಇಂಡಿ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿ ಆಗಿಲ್ಲ ಎಂದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಜೀವ ಐಹೊಳಿ, ಈರಣ್ಣ ರಾವೂರ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.








