ವಿಜಯಪುರ: ವಿಜಯಪುರ-ಉಕ್ಕಲಿ ರಸ್ತೆಯ ಶಿವಗಿರಿ ಪ್ರವೇಶ ದ್ವಾರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಏಪ್ರಿಲ್ 30ರಂದು ಮಧ್ಯಾಹ್ನ ಸುಮಾರು 3.30 ಗಂಟೆಗೆ ಉಕ್ಕಲಿ ಕಡೆಯಿಂದ ವಿಜಯಪುರ ಕಡೆಗೆ ಬರುತ್ತಿದ್ದ Vijayapura Accident ಲಾರಿ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶಿವಗಿರಿ ಪ್ರವೇಶ ದ್ವಾರದ ಸಮೀಪ ಚಹಾ ಅಂಗಡಿ ಮುಂದೆ ವಿಜಯಪುರ ಕಡೆಯಿಂದ ಉಕ್ಕಲಿ ಕಡೆಗೆ ತಮ್ಮ ಸೈಡಿನಲ್ಲಿ ಹೋಗುತ್ತಿದ್ದ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ತಮ್ಮಣ್ಣ ರಾಚಪ್ಪ ರಭಕವಿ (32), ಮಸಬಿನಾಳ ನಿವಾಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸಮರ್ಥ ಶಿವಾನಂದ ತೊನಶ್ಯಾಳ (17) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಬಳಿಕ ಲಾರಿ ರಸ್ತೆ ಬದಿಯಲ್ಲಿದ್ದ ಚಹಾ ಅಂಗಡಿಗೂ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ.
Vijayapura Accident ಅಪಘಾತದ ಬಳಿಕ ಲಾರಿ ಚಾಲಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.ಈ ಸಂಬಂಧ ದೂರುದಾರ ಗುರುನಗೌಡ ಬಸನಗೌಡ ಹಿರೇಗೌಡರ ನೀಡಿದ ದೂರಿನ ಮೇರೆಗೆ Vijayapura Traffic Police Station ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






